ಉಡುಪಿ :ಉಡುಪಿ ಮಾರಿಗುಡಿ ದೇಗುಲಕ್ಕೆ ಸೌತ್ ಕ್ವೀನ್ ಪೂಜಾ ಹೆಗಡೆ ಭೇಟಿಕೊಟ್ಟಿದ್ದು, ವಿಶೇಷ ಪೂಜೆಯಲ್ಲಿ ಭಾಗಿಯಾಗಿದ್ದಾರೆ. ತವರೂರ ಶಕ್ತಿದೇವತೆ ಮುಂದೆ ಇಷ್ಟಾರ್ಥ ಬೇಡಿಕೊಂಡಿದ್ದಾರೆ.
ಸೌತ್ ಕ್ವೀನ್ ಪೂಜಾ ಹೆಗ್ಡೆ ಉಡುಪಿ ಜಿಲ್ಲೆ ಕಾಪುವಿನ ಮಾರಿಗುಡಿ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಕೆ ಮಾಡಿದ್ರು. ದೇವಾಲಯದಲ್ಲಿ ನಡೆಯುವ ಸಾಂಪ್ರದಾಯಿಕ ದರ್ಶನದಲ್ಲಿ ಪೂಜಾ ಹೆಗ್ಡೆ ಭಾಗಿಯಾಗಿದ್ರು. ಪೂಜಾ ಹೆಗ್ಡೆ ಈ ಕ್ಷೇತ್ರದ ಬಗ್ಗೆ ಅಗಾಧ ಭಕ್ತಿ ಹಾಗೂ ಪ್ರೀತಿ ತೋರಿದ್ದಾರೆ. ತೆಲುಗು, ತಮಿಳು, ಬಾಲಿವುಡ್ನಲ್ಲೂ ಹೆಸರು ಮಾಡಿದ್ದ ಪೂಜಾಗೆ ಇತ್ತೀಚಿನ ದಿನಗಳಲ್ಲಿ ಯಶಸ್ಸು ಸಿಕ್ಕಿರಲಿಲ್ಲ. ಪಾತ್ರಿಗಳಿಂದ ಆಶೀರ್ವಾದ ಪಡೆದ ನಟಿ ಪೂಜಾ ಹೆಗ್ಡೆ ಭವಿಷ್ಯದಲ್ಲಿ ಒಳಿತಾಗಲಿ ಎಂದು ಪ್ರಾರ್ಥಿಸಿದ್ದಾರೆ. ಪೂಜಾ ಹೆಗಡೆ ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರು. ಸಿನಿಮಾ ಕ್ಷೇತ್ರಕ್ಕೆ ಬಂದು ಖ್ಯಾತಿ ಗಳಿಸಿದ್ದಾರೆ.
ಇದನ್ನೂ ಓದಿ:IPL 2022… ಪ್ಲೇ ಆಫ್ ಪಂದ್ಯಗಳು, ಫೈನಲ್ ನ ವೇಳಾಪಟ್ಟಿ ಪ್ರಕಟ…