ತಮಿಳುನಾಡು: ನಟಿ ತ್ರಿಶಾ ಕೃಷ್ಣನ್ ಗೆ ಬಂಧನದ ಭೀತಿ ಎದುರಾಗುತ್ತಿದೆ. ಶೂಟಿಂಗ್ ವೇಳೆ ಮಾಡಿಕೊಂಡಿದ್ದ ಎಡವಟ್ಟಿನಿಂದಾಗಿ ನಟಿ ತ್ರಿಶಾ ಕೃಷ್ಣನ್ ಹಾಗೂ ನಿರ್ದೇಶಕ ಮಣಿರತ್ನಂ ಬಂಧನದ ಭೀತಿಯಲ್ಲಿದ್ದಾರೆ. ಅಷ್ಟಕ್ಕೂ ಈ ನಟಿ ಹಾಗೂ ನಿರ್ದೇಶಕ ಮಾಡಿದ್ದಾರು ಏನು ಗೊತ್ತಾ..?
ಇದನ್ನೂ ಓದಿ: ಪ್ರೀತಿಗೆ ಕಟ್ಟು ಬಿದ್ದು ಶೂಟಿಂಗ್ ಗೆ ಹೋಗೊಕೆ ಆಗ್ತಿಲ್ಲ..! ರಶ್ಮಿಕಾ ಮಂದಣ್ಣರ ಕೆಲಸಕ್ಕೆ ಅಡ್ಡಿ ಆಗ್ತಿದೆ ಅವರ ಪ್ರೀತಿ..!
ಖ್ಯಾತ ನಿರ್ದೇಶಕ ಮಣಿರತ್ನಂ ಅವರು ‘ಪೊನ್ನಿಯಾನ್ ಸೆಲ್ವನ್’ ಎಂಬ ಕಾರಂಬರಿ ಆಧರಿತ ಚಿತ್ರ ನಿರ್ದೇಶಿಸುತ್ತಿದ್ದಾರೆ. ಆ ಚಿತ್ರದಲ್ಲಿ ಸೌತ್ ಬ್ಯೂಟಿ ತ್ರಿಶಾ ಕೃಷ್ಣನ್ ಪ್ರಮುಖ ಪಾತ್ರದಲ್ಲಿ ನಟಿಸುತ್ತಿದ್ದಾರೆ. ತಮಿಳುನಾಡಿನ ಐತಿಹಾಸಿಕ ದೇವಸ್ಥಾನವೊಂದರ ಒಳಗಡೆ ಶೂಟಿಂಗ್ ಮಾಡತ್ತಿದ್ದ ವೇಳೆ ನಟಿ ತ್ರಿಶಾ ದೇವಸ್ಥಾನದ ಒಳಗಡೆ ಚಪ್ಪಲಿ ಹಾಕಿಕೊಂಡು ಓಡಾಡಿದ್ದಾರೆ. ದೇವಸ್ಥಾನದಲ್ಲಿ ಶಿವಲಿಂಗ ಹಾಗೂ ಬಸವನ ನಡುವೆ ಚಪ್ಪಲಿ ಹಾಕಿಕೊಂಡು ಓಡಾಡುತ್ತಿರುವ ಫೋಟೋ ನೆಟ್ಟಿಗರ ಕಣ್ಣು ಕೆಂಪಾಗುವಂತೆ ಮಾಡಿದೆ.
ಧಾರ್ಮಿಕ ಸ್ಥಳದಲ್ಲಿ ತ್ರಿಶಾ ಚಪ್ಪಲಿ ಹಾಕಿಕೊಂಡು ಓಡಾಡಿರುವ ದೃಶ್ಯ ವೈರಲ್ ಆಗಿದೆ. ತಮಿಳುನಾಡಿನ ಹಿಂದೂ ಸಂಘಟನೆಗಳು ತ್ರಿಶಾ ಮತ್ತು ಮಣಿರತ್ನಂ ಅವರನ್ನು ಬಂಧಿಸುವಂತೆ ಒತ್ತಾಯ ಮಾಡುತ್ತಿದ್ದಾರೆ. ಅಲ್ಲದೆ ಸಾಮಾಜಿಕ ಜಾಲತಾಣದಲ್ಲಿ ಈ ಪೋಟೋ ಹರಿಬಿಟ್ಟ ನಂತರ ನಟಿ ಹಾಗೂ ನಿರ್ದೇಶಕರನ್ನು ಕೂಡಲೇ ಬಂಧಿಸಿ ಎಂದು ಒತ್ತಾಯ ಮಾಡುತ್ತಿದ್ದಾರೆ. ಈ ಹಿನ್ನಲೆ ನಟಿ ತ್ರಿಶಾ ಕೃಷ್ಣನ್ ಹಾಗೂ ನಿರ್ದೇಶಕರು ಬಂಧನದ ಭೀತಿಯಲ್ಲಿದ್ದಾರೆ.
ಇನ್ನು ಮಣಿರತ್ನಂ ನಿರ್ದೇಶನದಲ್ಲಿ ಮೂಡಿಬರುತ್ತಿರುವ ಪೊನ್ನಿನ್ ಸೆಲ್ವಾನ್ ಸಿನಿಮಾದ ಮೇಲೆ ಬಹುನಿರೀಕ್ಷೆಯಿದೆ. ಈ ಸಿನಿಮಾದಲ್ಲಿ ಚಿಯಾನ್ ವಿಕ್ರಂ, ಜಯಂ ರವಿ, ಕಾರ್ತಿ, ಪ್ರಕಾಶ್ ರಾಜ್, ಜಯರಾಮ್ , ಪ್ರಭು, ಐಶ್ವರ್ಯ ರೈ, ಶೋಬಿತಾ ಧುಲಿಪಲ, ಲಾಲ್ ಸೇರಿದಂತೆ ಬಹುತಾರಾಗಣವನ್ನು ಹೊಂದಿದೆ. ಎ, ಆರ್ ರೆಹಮಾನ್ ಅವರ ಸಂಗೀತವಿದೆ. ಚಿತ್ರ ಎರಡು ಭಾಗದಲ್ಲಿ ಬರಲಿದ್ದು, 2022ಕ್ಕೆ ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.