ಸ್ಯಾಂಡಲ್ವುಡ್ನ ಕ್ರೇಜಿ ಸ್ಟಾರ್ ರವಿ ಚಂದ್ರನ್ ಅವರ ಜೊತೆ ರಣಧೀರ, ಯುಗ ಪುರುಷ, ಚಿತ್ರಗಳಲ್ಲಿ ನಟಿಸಿ ಸಿನಿ ಪ್ರಿಯರ ಮನಸ್ಸು ಕದ್ದಿದ್ದ ಒಂದು ಕಾಲದ ಬೋಲ್ಡ್ ಬ್ಯೂಟಿ ನಟಿ ಖುಷ್ಬೂ .
ಬಹುಭಾಷಾ ನಟಿಯಾಗಿ ತನ್ನ ನಟನೆಯಿಂದ ಭಾರತೀಯರ ಮನಸನ್ನು ಕದ್ದಿದ್ದ, ದೊಡ್ಡ ಅಭಿಮಾನಿ ಬಳಗವನ್ನ ಹೊಂದಿದ್ದ ಚೋರಿ. ಸದ್ಯ ನಟನೆ ಜೊತೆಗೆ ರಾಜಕೀಯದಲ್ಲಿಯೂ ಫುಲ್ ಬ್ಯುಸಿಯಾಗಿದ್ದಾರೆ. ಇಷ್ಟು ದಿನ ಬೆಳ್ಳಿಪರದೆಯ ಮೇಲೆ ಮಿಂಚುತ್ತಿದ್ದ ನಟಿ ಕಿರುತೆರೆಗೆ ಕಾಲಿಟ್ಟು ಕಿರುತೆರೆ ಪ್ರೇಕ್ಷಕರನ್ನೂ ಸಹಾ ಮೋಡಿ ಮಾಡ್ತಿದ್ದಾರೆ.
ಇದನ್ನೂ ಓದಿ : ಡಿ ಬಾಸ್ ನಾಯಕಿಯ ವರ್ಜಿನ್ ಸ್ಟೋರಿ.! ಬಾಲಿವುಡ್ನಲ್ಲೀಗ ಕನ್ಯತ್ವದ್ದೇ ಚರ್ಚೆ ! ಯಾರು ಆ ನಟಿ ಗೊತ್ತಾ..?
ಖುಷ್ಬೂ ಕನ್ನಡದಲ್ಲಿ ಕೊನೆಯದಾಗಿ 2005ರಲ್ಲಿ ರಿಲೀಸ್ ಆದ ಮ್ಯಾಜಿಕ್ ಅಜ್ಜಿ ಚಿತ್ರಕ್ಕೆ ಬಣ್ಣ ಹಚ್ಚಿದ್ರು. ಆ ನಂತರ ಜನನಿ ಸಿನಿಮಾದಲ್ಲಿ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು, ಬಳಿಕ ಕನ್ನಡ ಸಿನಿಮಾದಲ್ಲಿ ನಟಿಸಿಲ್ಲ ಖುಷ್ಬೂ. ಆದರೆ ಕಿರುತೆರೆ ಮೂಲಕ ಪ್ರೇಕ್ಷಕರನ್ನು ರಂಜಿಸುತ್ತಿದ್ದಾರೆ.
ಇದನ್ನೂ ಓದಿ : ಮೃತ ಸೋಂಕಿತನ ಅಂತ್ಯಸಂಸ್ಕಾರ : ಪಿಎಫ್ಐ ಕಾರ್ಯಕರ್ತರಿಗೆ ಚಾಮರಾಜನಗರ ಎಡಿಸಿ ಸಾಥ್..!
ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರೀಯರಾಗಿರುವ ಖುಷ್ಬೂ, ಇದೀಗ ಅವರ ಅದ್ಭುತ ರೂಪಾಂತರದ ಮೂಲಕ ಅಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದ್ದಾರೆ. ಇತ್ತೀಚಿಗೆ ಈ ಸುಂದರಿ ಸೋಷಿಯಲ್ ಮಿಡಿಯಾದಲ್ಲಿ ಫೋಟೋವೊಂದನ್ನ ಅಪ್ಲೋಡ್ ಮಾಡಿದ್ದು ಅಭಿಮಾನಿಗಳ ಗೊಂದಲಕ್ಕೆ ಕಾರಣರಾಗಿದ್ದಾರೆ.
ಇದನ್ನೂ ಈದಿ : ನೂರೆಂಟು ಜನರಿಗೆ ಅನ್ನ ಕೊಟ್ಟವರಿಗೆ- ಒಪ್ಪತ್ತಿನೂಟಕ್ಕೂ ಪರದಾಟ- ಕೊರೋನಾ ಏನಿದೂ ನಿನ್ನ ಮಾಯೆ…!
ಖುಷ್ಬೂ ಫೇಸ್ ಆಪ್ ಮೂಲಕ ಪುರುಷ ಅವತಾರ ತಾಳಿದ ಫೋಟೋವನ್ನು ಎಡಿಟ್ ಮಾಡಿ “ನಾನು ಪುರುಷನಾಗಿದ್ದರೆ…ನಿಜಕ್ಕೂ ಕೆಟ್ಟದಾಗಿಲ್ಲ” ಎಂದು ಬರೆದುಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದು, ಈ ಫೋಟೋಗೆ ಅಭಿಮಾನಿಗಳಿಂದ ತರಹೇವಾರಿ ಕಾಮೆಂಟ್ಗಳು ಹರಿದುಬಂದಿವೆ.
ಇದನ್ನೂ ಓದಿ : ಅಯೋಧ್ಯೆಯ ರಾಮ ಮಂದಿರ ಶಂಕುಸ್ಥಾಪನೆ ಪೂಜೆಗೆ ರಾಜ್ಯದ ಈ ಪವಿತ್ರ ಜಲ!
ಸೋಷಿಯಲ್ ಮಿಡಿಯಾದಲ್ಲಿ ಕೆಲವರು ಖುಷ್ಬೂ ಪುರುಷ ಅವತಾರತಾಳಿದ ಪೋಟೋ ನೋಡಿ ಇದು ನಿಜನಾ ಎಂದು ಅಚ್ಚರಿ ಪಡುತ್ತಿದ್ದಾರೆ. ಇನ್ನೂ ಕೆಲವರು ಪುರುಷ ಖುಷ್ಬೂ ಸುಂದರವಾಗಿ ಕಾಣಿಸುತ್ತಾರೆ ಎಂದು ಕಾಮೆಂಟ್ ಬಾಕ್ಸ್ನಲ್ಲಿ ಹುಡುಗಿಯರ ಫೋಟೋ ಹಾಕಿ ಕಾಲೆಳೆದ್ದಾರೆ.
ಇದನ್ನೂ ಈದಿ : ಈ ಆರೋಪಿ ಬೈಕ್ ಓಡಿಸಿದ ಸ್ಪೀಡ್ ಕೇಳಿದ್ರೆ ನೀವು ದಂಗಾಗ್ತೀರಾ!! ಈ ವಿಡಿಯೋ ನೋಡಿ
ಸದ್ಯ ಖುಷ್ಬೂ ಪುರುಷ ಅವತಾರತಾಳಿದ ಫೋಟೋ ನೆಟ್ವಲ್ಡ್ನಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಕೆಲವರು ಆಮೀರ್ ಖಾನ್ ಫೋಟೋ ಶೇರ್ ಮಾಡಿ ಆಮೀರ್ ಖಾನ್ ಹಾಗೆ ಕಾಣುತ್ತೀರಿ ಎಂದು ಲೈಕ್ಸ್ ಎಂಡ್ ಕಮೆಂಟ್ಸ್ಗಳ ಸುರಿಮಳೆ ಮೂಲಕ ಅಭಿಮಾನ ವ್ಯಕ್ತ ಪಡಿಸಿದ್ದಾರೆ….
And if I was a man.. not bad actually..😄😄😄😄😄😄😆😆😆😆 pic.twitter.com/mvYK5ob2RV
— KhushbuSundar (@khushsundar) July 21, 2020