ಮುಂಬೈ: ಬಯೋಪಿಕ್ ಸಿನಿಮಾ ಮಾಡೋಕೆ ರೋಚಕ ಕಥೆ ಬೇಕು.. ಸಾಧಕನ ಏಳು ಬೀಳಿನ ಇಂಟ್ರೆಸ್ಟಿಂಗ್ ಕಹಾನಿ ಬೇಕೇಬೇಕು.. ಬಯೋಪಿಕ್ ಸಿನಿಮಾ ಮಾಡೋಕೆ ಕ್ರಿಕೆಟಿಗ ಸೌರವ್ ಗಂಗೂಲಿ ಲೈಫ್ ಸ್ಟೋರಿಗಿಂತ ಮತ್ತೊಂದು ಸ್ಟೋರಿ ಬೇಕಾಗಿಲ್ಲ.. ಬಹಳ ದಿನಗಳಿಂದ ದಾದಾ ಕಥೆಯನ್ನು ಬೆಳ್ಳಿತೆರೆಗೆ ತರೋ ಪ್ರಯತ್ನ ನಡೀತಾನೇ ಇದೆ.. ಇದೀಗ ಖುದ್ದು ದಾದಾ ತಮ್ಮ ಜೀವನ ಚರಿತ್ರೆಯನ್ನು ತೆರೆಮೇಲೆ ನೋಡಲು ಮನಸ್ಸು ಮಾಡಿದ್ದಾರೆ..
ಇದನ್ನೂ ಓದಿ: ಕಾಲಿವುಡ್ಗೆ ಲಗ್ಗೆ ಇಟ್ರು ಇಬ್ಬರು ಕನ್ನಡದ ಸ್ಟಾರ್ಸ್…! ಡಿಫರೆಂಟ್ ಪಾತ್ರದಲ್ಲಿ ಆಶಿಕಾ-ಸತೀಶ್ ಕಮಾಲ್..!
ಪ್ರೈ ಮಿನಿಸ್ಟರ್ ಖ್ಯಾತಿಯ ಕಥೆಯಿಂದ ಹಿಡ್ದು ಗ್ಯಾಂಗ್ಸ್ಟರ್ಸ್ ಕುಖ್ಯಾತಿಯವರೆಗೂ ಬಾಲಿವುಡ್ ಅಂಗಳದಲ್ಲಿ ಬಯೋಪಿಕ್ ಸಿನಿಮಾಗಳು ನಿರ್ಮಾಣ ಆಗ್ತಿದೆ.. ಅದ್ರಲ್ಲೂ ಸ್ಪೋರ್ಟ್ಸ್ ಪರ್ಸನ್ ಲೈಫ್ ಸ್ಟೋರಿ ಸಿನಿಮಾಗಳಿಗಂತೂ ಭಾರೀ ಕ್ರೇಜ್ ಇದೆ.. ಮಿಲ್ಕಾ ಸಿಂಗ್, ಧೋನಿ ಬಯೋಪಿಕ್ ಗೆದ್ದಿದ್ದು ಸಚಿನ್ ಬಯೋಪಿಕ್ ಸೋತಿದ್ದು ನೋಡಿದ್ದೇವೆ.. ಈಗ ಟೀಂ ಇಂಡಿಯಾದ ಮೋಸ್ಟ್ ಸಕ್ಸಸ್ಫುಲ್ ಕ್ಯಾಪ್ಟನ್ ಸೌರವ್ ಗಂಗೂಲಿ ಸಾಧನೆಯ ಕಥೆ ಸಿಲ್ವರ್ ಸ್ಕ್ರೀನ್ ಮೇಲೆ ಬರೋ ಸಮಯ ಬಂದಿದೆ..
ಇದನ್ನೂ ಓದಿ: ಅಂದು ಗಬ್ಬರ್ ಸಿಂಗ್.. ಇಂದು ಭಗತ್ ಸಿಂಗ್.. ಪವನ್ ಕಲ್ಯಾಣ್ – ಹರೀಶ್ ಶಂಕರ್ ಜೋಡಿ ಹೊಸ ಪ್ರಾಜೆಕ್ಟ್.
ಧೋನಿ, ಸಚಿನ್ ಮಾತ್ರವಲ್ಲ ಅಜರುದ್ಧೀನ್ ಕಥೆ ಕೂಡ ತೆರೆಮೇಲೆ ಬಂದಿದೆ.. 83ರಲ್ಲಿ ಭಾರತ ತಂಡ ಕ್ರಿಕೆಟ್ ವಿಶ್ವಕಪ್ ಗೆದ್ದ ಕಥೆ ಕೂಡ ಸಿನಿಮಾ ರೂಪ ಪಡೆದಿದೆ.. ಸದ್ಯ ಸೌರವ್ ಗಂಗೂಲಿ ಬಯೋಪಿಕ್ ಭಾರೀ ಕುತೂಹಲ ಮೂಡಿಸಿದೆ.. ಅಂಗಳದಲ್ಲಿ ಭಾರತದ ತಂಡದ ಆಕ್ರಮಣಕಾರಿ ಆಟ ಶುರುವಾಗಿದ್ದೇ ದಾದಾ ನಾಯಕತ್ವದಲ್ಲಿ.. ಒಳ್ಳೆ ಬ್ಯಾಟ್ಸ್ಮನ್ ಮಾತ್ರವಲ್ಲ, ಒಳ್ಳೆ ಬೌಲರ್ ಆಗಿ ಒಳ್ಳೆ ಕ್ಯಾಪ್ಟನ್ ಆಗಿಯೂ ಭಾರತ ಕ್ರಿಕೆಟ್ಗೆ ಕೊಡುಗೆ ನೀಡಿದ್ದಾರೆ ಸೌರವ್ ಗಂಗೂಲಿ.. ಭಾರತ ಕ್ರಿಕೆಟ್ ತಂಡ ವಿಶ್ವದಲ್ಲೇ ಬಲಿಷ್ಠ ತಂಡವಾಗಿ ಇಂದು ಆಡುತ್ತಿದ್ರೆ, ಅಂದ್ರೆ ಅದಕ್ಕೆ ಬುನಾದಿ ಹಾಕಿದ್ದು ದಾದಾ..
ಬಹಳ ದಿನಗಳಿಂದ ಸೌರವ್ ಗಂಗೂಲಿ ಬಯೋಪಿಕ್ ಬಗ್ಗೆ ಚರ್ಚೆ ನಡೀತಿದೆ.. ಸದ್ಯ ಲವ್ ಫಿಲ್ಮ್ಸ್ ಸಂಸ್ಥೆ ಸಿನಿಮಾ ನಿರ್ಮಾಣಕ್ಕೆ ಕೈ ಹಾಕಿದೆ.. ತಮ್ಮ ಬಯೋಪಿಕ್ ಬಗ್ಗೆ ಪ್ರತಿಕ್ರಿಯಿಸಿರುವ ಗಂಗೂಲಿ, ‘ಕ್ರಿಕೆಟ್ ನನ್ನ ಜೀವನ. ಈ ಕ್ರೀಡೆಯು ನನಗೆ ಆತ್ಮವಿಶ್ವಾಸ ನೀಡಿದೆ. ಎಲ್ಲರ ಮುಂದೆ ತಲೆಯೆತ್ತಿ ನಡೆಯುವಂತೆ ಮಾಡಿದೆ. ಇದೀಗ ಅದೇ ಕಥೆಯನ್ನು ಲವ್ ಫಿಲಂಸ್ ಚಿತ್ರವಾಗಿಸುತ್ತಿದೆ. ನನ್ನ ಜೀವನವನ್ನು ದೊಡ್ಡ ಪರದೆಯಲ್ಲಿ ತೋರಿಸುತ್ತಿರುವ ಬಗ್ಗೆ ನಾನು ಕೂಡ ಥ್ರಿಲ್ ಆಗಿದ್ದೇನೆ’ ಅಂತ ಟ್ವೀಟ್ ಮಾಡಿದ್ದಾರೆ..
Cricket has been my life, it gave confidence and ability to walk forward with my head held high, a journey to be cherished.
Thrilled that Luv Films will produce a biopic on my journey and bring it to life for the big screen 🏏🎥@LuvFilms @luv_ranjan @gargankur @DasSanjay1812— Sourav Ganguly (@SGanguly99) September 9, 2021
ದಾದಾ ಬಯೋಪಿಕ್ ಕುತೂಹಲ ಕೆರಳಿಸಿರೋದ್ಯಾಕೆ ? ಸೌರವ್ ಪಾತ್ರದಲ್ಲಿ ಹೃತಿಕ್ or ರಣ್ಬೀರ್ ನಟಿಸ್ತಾರಾ ?
2 ದಶಕದ ಹಿಂದೆ ಮ್ಯಾಚ್ ಫಿಕ್ಸಿಂಗ್ ಕಳಂಕದಿಂದ ಭಾರತ ಕ್ರಿಕೆಟ್ ತಂಡ ಕುಗ್ಗಿ ಹೋಗಿದ್ದಾಗ ನಾಯಕತ್ವ ವಹಿಸಿಕೊಂಡು ತಂಡವನ್ನು ಕಟ್ಟಿಬೆಳೆಸಿದವರು ಸೌರವ್ ಗಂಗೂಲಿ.. ಪ್ರತಿಯೊಬ್ಬ ಕ್ರಿಕೆಟಿಗನನ್ನು ಅನುಮಾನದಿಂದ ನೋಡುವ ಸಮಯದಲ್ಲಿ ಒಳ್ಳೆ ಆಟದ ಮೂಲಕ ಎಲ್ಲವನ್ನು ಮರೆಸಿ, ಗೆದ್ದವರು ದಾದಾ.. ಇನ್ನು ದಾದಾ ಗರಡಿಯಲ್ಲಿ ಬೆಳೆದ ಯುವರಾಜ್ ಸಿಂಗ್, ಸೆಹ್ವಾಗ್, ಧೋನಿ, ಹರ್ಭಜನ್ ಮುಂದೆ ಭಾರತ ತಂಡ ವಿಶ್ವಕಪ್ ಗೆಲ್ಲುವಲ್ಲಿ ಮಹತ್ವದ ಪಾತ್ರ ವಹಿಸಿದ್ರು.. ವಿದೇಶಿ ಪಿಚ್ಗಳಲ್ಲಿ ಭಾರತ ತಂಡ ಗೆಲ್ಲಲು ಆರಂಭಿಸಿದ್ದು, ಆಟಗಾರರು ಆಕ್ರಮಣಕಾರಿ ಆಟ ರೂಢಿಸಿಕೊಂಡಿದ್ದು, ಎಲ್ಲವೂ ದಾದಾ ಗರಡಿಯಲ್ಲೇ.. ಆ ಕಥೆಯನ್ನೆಲ್ಲಾ ಬಯೋಪಿಕ್ ಚಿತ್ರದಲ್ಲಿ ಎಳೆಎಳೆಯಾಗಿ ಬಿಚ್ಚಿಡಲಾಗ್ತಿದೆ..
ಬಯೋಪಿಕ್ನಲ್ಲಿ ಯಾರು ದಾದಾ ಪಾತ್ರ ಮಾಡ್ತಾರೆ ಅನ್ನೋ ಕುತೂಹಲ ಸಹಜ.. ಈ ಹಿಂದೆ ಹೃತಿಕ್ ರೋಷನ್ ಹೆಸರು ಕೇಳಿಬಂದಿತ್ತು.. ಸದ್ಯ ಸಂಜಯ್ ದತ್ ಬಯೋಪಿಕ್ನಲ್ಲಿ ನಟಸಿದ್ದ ರಣ್ಬೀರ್ ಕಪೂರ್ ಹೆಸರು ಕೇಳಿಬರ್ತಿದೆ.. ದಾದಾ ಬಯೋಪಿಕ್ ಸಿನಿಮಾ ನಿರ್ಮಾಣದ ಬಗ್ಗೆ ಮಾತ್ರ ಮಾಹಿತಿ ಸಿಕ್ಕಿದ್ದು, ಯಾರು ನಟಿಸ್ತಾರೆ ಅನ್ನೋದ್ರ ಬಗ್ಗೆ ಶೀಘ್ರದಲ್ಲೇ ಮಾಹಿತಿ ಸಿಗಲಿದೆ..