ಮುಂಬೈ: ಮಹಾ ಪಾಲಿಟಿಕ್ಸ್ ಹೊತ್ತಲ್ಲೇ ಕಂಗನಾ ಫುಲ್ ವೈರಲ್ ಆಗುತ್ತಿದ್ದು, ಬಾಲಿವುಡ್ ನಟಿ ಕಂಗನಾ ಅಂದಿನ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
ಮುಂಬೈ ಪಾಲಿಕೆ ಫುಟ್ಪಾತ್ ಒತ್ತುವರಿ ತೆರವು ಮಾಡಲು ಮುಂಬೈನಲ್ಲಿ ಕಂಗನಾ ಮನೆ ತೆರವು ಮಾಡಿದ್ದರು. ಈ ವೇಳೆ ಸಿಎಂ ಉದ್ಧವ್ ಠಾಕ್ರೆ ಮೇಲೆ ಕಂಗನಾ ವಾಗ್ದಾಳಿ ನಡೆಸಿದ್ದರು. ಠಾಕ್ರೆ ಇವತ್ತು ನನ್ನ ಮನೆ ಒಡೆಸಿದ್ದೀರಾ. ಮುಂದೆ ನಿಮ್ಮ ಮನೆಯೂ ಚೂರು-ಚೂರಾಗುತ್ತೆ. ಯಾರು ಸ್ತ್ರೀಯರಿಗೆ ಅಪಮಾನ ಮಾಡುತ್ತಾರೋ ಅವರ ಪತನ ನಿಶ್ಚಿತ ಎಂದು ಹೇಳಿದ್ದರು. ಇದೀಗ ಶಿವಸೇನೆ ಬಂಡಾಯ ಮುಂದಿಟ್ಟು ಕಂಗನಾ ಹೇಳಿಕೆ ವೈರಲ್ ಆಗುತ್ತಿದೆ.