ವಿಜಯಪುರ: ವಿಜಯಪುರದ ಶಾಸಕರೊಬ್ಬರು ಪಕ್ಷ ಬಿಡುತ್ತಾರೆ, ಈಗಾಗಲೇ ಅವರು ಹಲವರನ್ನು ಸಂಪರ್ಕ ಮಾಡಿದ್ದಾರೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಂದು ಬಾಂಬ್ ಸಿಡಿಸಿದ್ದಾರೆ.
ವಿಜಯಪುರದಲ್ಲಿ ಮಾತನಾಡಿದ ಯತ್ನಾಳ್ ‘ಹಲವು ಸಚಿವರು ಕಾಂಗ್ರೆಸ್ಗೆ ಹೋಗುತ್ತಿದ್ದಾರೆ, ಹೋಗುವವರು ಹೋಗುತ್ತಾರೆ. ಗುಸು-ಗುಸು, ಪಿಸು ಪಿಸು ಇದ್ದೇ ಇರುತ್ತೆ. ನಮ್ಮಲ್ಲಿ ಕೆಲವರು ಅಡ್ಜಸ್ಟ್ಮೆಂಟ್ ರಾಜಕಾರಣ ಮಾಡುತ್ತಿದ್ದಾರೆ. ಈಗ ಅವರಿಗೆಲ್ಲಾ ಕಡಿವಾಣ ಹಾಕುವ ಕಾಲ ಬಂದಿದೆ. ಈಗ ಸಲಹೆ ಕೊಡುವ ನಾಯಕರಷ್ಟೇ ಪಕ್ಷದಲ್ಲಿ ಉಳಿದಿದ್ದಾರೆ ಎಂದು ಹೇಳಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ನಲ್ಲೇ ಅಭದ್ರತೆ ಕಾಡ್ತಾ ಇದೆ… ಬಿಜೆಪಿಯಿಂದ ಯಾರೂ ಕಾಂಗ್ರೆಸ್ಗೆ ಹೋಗುವ ಪ್ರಶ್ನೆಯೇ ಇಲ್ಲ: ಸಿಎಂ ಬೊಮ್ಮಾಯಿ…