ಸಾಮಾನ್ಯವಾಗಿ ಹೆಣ್ಣಿಗೆ ಅಂದ ಮುಖ್ಯ ವಾಗಿರುತ್ತದೆ. ಅದರಲ್ಲಿಯೂ ವಿಶೇಷವಾಗಿ ಸಮಾರಂಭಗಳಿಗೆ ಹೋಗುವಾಗ ತಾನು ಸುಂದರವಾಗಿ ಕಾಣಬೇಕೆಂದು ಬಯಸುತ್ತಾಳೆ. ಕೆಲವರು ಸಮಾರಂಭದ ಒಂದು ವಾರದ ಮೊದಲೇ ಪಾರ್ಲರ್ಗಳಿಗೆ ಹೋಗುತ್ತಾರೆ. ಆದರೆ ನೀವು ಅಂದವಾಗಿ ಕಾಣಲು ನೀವು ಪಾರ್ಲರ್ಗಳಿಗೆ ಹೋಗದೇ ಮನೆಯಲ್ಲಿಯೇ ಮಾಡಬಹುದು.
ಎಣ್ಣೆಯುಕ್ತ ಮುಖ ಹೊಂದಿರುವವರಿಗೆ ವಾತಾವರಣದಲ್ಲಿರುವ ಮಾಲಿನ್ಯಕಾರಕಗಳನ್ನು ಆಕರ್ಷಿಸುತ್ತದೆ. ಹಾಗಾಗಿ ಇಂತಹ ಚರ್ಮ ಹೊಂದಿರುವವರಲ್ಲಿ ಮೊಡವೆ, ಗುಳ್ಳೆಗಳು, ಸ್ಕಿನ್ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಇದರಿಂದ ಅವರು ಚರ್ಮದ ಕಾಂತಿ ಕಳೆದುಕೊಳ್ಳುತ್ತಾರೆ. ಹಾಗಾಗಿ ಆಯಿಲ್ ಸ್ಕೀನ್ ಹೊಂದಿರುವವರು ತಕ್ಷಣ ಬೆಳ್ಳಗಾಗಲು ಈ ಫೇರ್ ನೆಸ್ ಫೇಸ್ ಪ್ಯಾಕ್ ಅನ್ನು ಹಚ್ಚಿ. ಶ್ರೀಗಂಧದ ಪುಡಿ ಮತ್ತು ನಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ತೆಗೆದುಕೊಂಡು ಫೇಸ್ ಪ್ಯಾಕ್ ತಯಾರಿಸಿ ಮುಖಕ್ಕೆ ಹಚ್ಚಿ ಒಣಗಿದ ಬಳಿಕ ವಾಶ್ ಮಾಡಿ. ಇದನ್ನು ವಾರದಲ್ಲಿ 3 ಬಾರಿ ಬಳಸಬಹುದು. ಹಾಗೇ ಅಲೋವೆರಾ ಜೆಲ್ ಮತ್ತು ಕಿತ್ತಳೆ ಜ್ಯೂಸ್ ನ್ನು ಬೆರೆಸಿ ಮುಖಕ್ಕೆ ಹಚ್ಚಿ 20 ನಿಮಿಷ ಬಿಟ್ಟು ವಾಶ್ ಮಾಡಿ. ಹೀಗೆ ಮಾಡಿದರೆ ಆಯಿಲ್ ಸ್ಕಿನ್ ನವರ ಚರ್ಮ ಬೆಳ್ಳಗಾಗುತ್ತದೆ.