ಮಂಡ್ಯ : ನಿವೃತ್ತ ಯೋಧ ಕುಮಾರ್ ಬಲಿಯಾಗಿದ್ದ ರಸ್ತೆಯ ಗುಂಡಿಯನ್ನು ತಾವೇ ಮುಚ್ಚುವ ಮೂಲಕ ಮಂಡ್ಯ ಜಿಲ್ಲಾ ಜೆಡಿಎಸ್ ವಕ್ತಾರ ಮಹಾಲಿಂಗೇಗೌಡ ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾರೆ.
ಮಂಡ್ಯದ ಕಾರೆಮನೆ ಗೇಟ್ ಬಳಿ ರಸ್ತೆ ಗುಂಡಿ ಎಡವಟ್ಟಿಗೆ ನಿವೃತ್ತ ಯೋಧ ಕುಮಾರ್ ಬಲಿಯಾಗಿದ್ದರು. ಗುಂಡಿ ಬಿದ್ದಿದ್ದ ಜಾಗಕ್ಕೆ ಜಲ್ಲಿ, ವೈಟ್ ಮಿಕ್ಸರ್ ಹಾಕಿ ಮುಚ್ಚಲಾಗಿತ್ತು. ಮಹಾಲಿಂಗೇಗೌಡ ರಸ್ತೆ ಗುಂಡಿ ಮುಚ್ಚುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ಧಾರೆ. ಸರ್ಕಾರ ಜಿಲ್ಲೆಯಾದ್ಯಂತ ಗುಂಡಿ ಬಿದ್ದ ರಸ್ತೆ ರಿಪೇರಿ ಮಾಡದೇ ಇದ್ರೆ ಹೋರಾಟ ನಡೆಸೋದಾಗಿ ಮಹಾಲಿಂಗೇಗೌಡ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ : ಮಾಜಿ MLC ಗಾಯತ್ರಿ ಶಾಂತೇಗೌಡ ಮನೆ ಮೇಲೆ ಐಟಿ ರೇಡ್… ಅನುಮಾನ ಬಾರದಿರಲಿ ಎಂಬ ಕಾರಣಕ್ಕೆ ಮದುವೆ ಬೋರ್ಡ್ ಹಾಕ್ಕೊಂಡು ಬಂದಿದ್ದ ಐಟಿ ಟೀಂ…