ಬೆಂಗಳೂರು: ಸೆಲ್ಫಿ ತೆಗೆದುಕೊಳ್ಳಲು ಹೋಗಿ ಸಾಫ್ಟ್ವೇರ್ ಎಂಜಿನಿಯರ್ ಸಾವನಪ್ಪಿದ್ದಾರೆ. ಚಿಕ್ಕಬಳ್ಳಾಪುರದ ಜಕ್ಕಲಮಡಗು ಡ್ಯಾಂನ ಹಿನ್ನೀರಲ್ಲಿ ಘಟನೆ ನಡೆದಿದ್ದು ಸ್ನೇಹಿತನ ಬರ್ತ್ಡೇ ಪಾರ್ಟಿಗೆ ಹೋಗಿ ಈಜೂ ಬಾರದಿದ್ರೂ, ನೀರಿಗೆ ಇಳಿದಿದ್ದ ರೋಹಿತ್ ಸ್ನೇಹಿತರು ಡ್ಯಾಂನ ಮರ ಹತ್ತಿ ಸೆಲ್ಫಿ ವಿಡಿಯೋ ತೆಗೆಯುವ ವೇಳೆ ನೀರಿಗೆ ಬಿದ್ದು, ಸಾವನಪ್ಪಿದ್ದಾರೆ.
ಇದನ್ನೂ ಓದಿ: ಪಕ್ಕದ ಮನೆಯವನ ಜೊತೆ ಲವ್ವಿಡವ್ವಿ..! ಪ್ರೀತಿಸಿ ಮದ್ವೆ ಆದವಳು ಕೈಕೊಟ್ಟಿದ್ದಕ್ಕೆ ಪತಿ ಲೈವ್ ಸೂಸೈಡ್…!
ಬೆಂಗಳೂರಿನ ಸುಂಕದಕಟ್ಟೆ ನಿವಾಸಿ ರೋಹಿತ್, ಖಾಸಗಿ ಕಂಪನಿಯಲ್ಲಿ ಸಾಫ್ಟ್ವೇರ್ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದ ಈತ,
5 ಜನ ಸ್ನೇಹಿತರೊಂದಿಗೆ ಬರ್ತ್ ಡೇ ಪಾರ್ಟಿಗೆ ಹೋಗಿದ್ದು, ಜಕ್ಕಲಮಡಗು ಡ್ಯಾಂನ ಹಿನ್ನೀರಲ್ಲಿ ಮರ ಹತ್ತಿ ಸೆಲ್ಫಿ ವಿಡಿಯೋ ಮಾಡಲು ಮುಂದಾಗಿದ್ದಾರೆ. ಈ ವೇಳೆ ಆಯಾ ತಪ್ಪಿ ರೋಹಿತ್ ಮರದಿಂದ ನೀರಿಗೆ ಬಿದ್ದಿದ್ದಾನೆ. ಈಜೂ ಬಾರದಿದ್ರೂ, ನೀರಿಗೆ ಇಳಿಸಿದ್ದ ರೋಹಿತ್ ಸ್ನೇಹಿತರು, ಮೇಲೆ ಇದೀಗ ಕುಡಿದ ಅಮಲಿನಲ್ಲಿ ಮರದ ಮೇಲೆ ಸೆಲ್ಫಿ ತೆಗೀತಿದ್ರಾ ರೋಹಿತ್.? ಎಂಬ ಅನುಮಾನಕ್ಕೆ ದಾರಿ ಮಾಡಿಕೊಟ್ಟಿದ್ದು, ಸೆಲ್ಫಿ ಕ್ರೇಜ್ ನಿಂದಾಗಿ ಬಲಿಯಾಗಿರುವ ಮೃತನ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ಪೋಷಕರು ಸ್ನೇಹಿತರ ವಿರುದ್ಧ ಆಕ್ರೋಶ ಹೋರ ಹಾಕುತ್ತಿದ್ದಾರೆ. ಸದ್ಯ ಈ ಬಗ್ಗೆ ನಂದಿಗಿರಿಧಾಮ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ:ಆನ್ ಲೈನ್ ನಲ್ಲಿ ಹಣ್ಣು, ತರಕಾರಿ ಮಾರಾಟ ಆರಂಭಿಸಿದ ಹಾಫ್ ಕಾಮ್ಸ್…