ಮುಂಬೈ: ಹಿಂದೆ ಜನರ ಮನಸ್ಸಿನಲ್ಲಿ ಉಳಿಯೋ ಸಾಂಗ್ ಸೂಪರ್ ಹಿಟ್ ಅಂತಿದ್ರು.. ಆದ್ರೀಗ ಹಾಗಲ್ಲ.. ಸೋಷಿಯಲ್ ಮೀಡಿಯಾದಲ್ಲಿ ಎಷ್ಟು ವೈರಲ್ ಆಗುತ್ತೆ ಅನ್ನೋದನ್ನ ನೋಡಿ ಹಿಟ್ಟಾ, ಡಬ್ಬಾನ ಅನ್ನೋದು ಡಿಸೈಡ್ ಆಗ್ಬಿಡುತ್ತೆ.. ಅದ್ಯಾವ್ದುರೀ ಅದು ಪರಮ ಸುಂದ್ರಿ.. ದಿನಕ್ ಒಂದ್ ಸಲ ಆದ್ರು, ಆ ಸಾಂಗ್ ಕಿವಿ ಮೇಲೆ ಬೀಳ್ದೆ ಇರಲ್ಲ.. ಮಿಮಿ ಬಂದೋಗಿ ತಿಂಗಳು ಕಳೆದ್ರು, ಪರಮ ಸುಂದ್ರಿ ಮಾತ್ರ ಎಲ್ಲರ ಬಾಯಲ್ಲೂ ನಲಿದಾಡ್ತಿದ್ದಾಳೆ..
ಇದನ್ನೂ ಓದಿ: ಅನುಶ್ರೀ ಎನರ್ಜಿ ಹಿಂದಿದೆ ಈ ಸೀಕ್ರೆಟ್…! ಇದು ಅ್ಯಂಕರ್ ಕಮ್ ನಟಿಯ ‘ತಾಕತ್’ ಸ್ಟೋರಿ..!
ವಾಟ್ಸಾಪ್ ಸ್ಟೇಟಸ್, ಫೇಸ್ಬುಕ್ ಅಥವಾ ಇನ್ಸ್ಟಾ ಸ್ಟೋರಿ ಮೇಲೆ ಒಂದು ಲುಕ್ ಹಾಕಿ.. ಈ ಪರಮ ಸುಂದರಿ ಹಾಡು ಹೇಳಿಸ್ದೇ ಇದ್ರೆ ಕೇಳಿ.. ಅದೇನೋ ಗೊತ್ತಿಲ್ಲ, ಈ ಹಾಡಿಗೆ ಜನ ಫಿದಾ ಆಗೋಗ್ಬಿಟ್ಟಿದ್ದಾರೆ.. ಎಷ್ಟು ಸಲ ಕೇಳಿದ್ರು, ಪದೇ ಪದೇ ಕೇಳ್ತಿದ್ದಾರೆ.. ಒಮ್ಮೆ ಕೇಳಿದ್ರೆ ಸಾಕು ಇಡೀ ದಿನ ಗುಂಗು ಹಿಡಿಸಿ ಕಾಡುತ್ತೆ.. ಇನ್ನು ಸೋಷಿಯಲ್ ಮೀಡಿಯಾದಲ್ಲಿ ರೀಲ್ಗಳನ್ನ ಮಾಡೋರಿಗೆ ಪರಮ ಸುಂದ್ರಿ, ಹಾರ್ಟ್ ಫೇವರಿಟ್ ಆಗ್ಬಿಟ್ಟಿದ್ದಾಳೆ..
ಇದನ್ನೂ ಓದಿ: ಬುಲೆಟ್ ಪ್ರಕಾಶ್ ಮಗನ ಮೇಲೆ ಮಂಗಳಮುಖಿಯರ ದಾಳಿ ..! ದಾಳಿ ಹೇಗಾಯ್ತು.?
ಮಿಮಿ ಚಿತ್ರದ ಪರಮ ಸುಂದ್ರಿ ಸಾಂಗ್ ರಿಲೀಸ್ ಆಗಿ ಹೆಚ್ಚು ಕಮ್ಮಿ ಒಂದೂವರೆ ತಿಂಗಳಾಯ್ತು.. ಈ ಸಿನಿಮಾ ಬಗ್ಗೆ ಅಷ್ಟೇನು ನಿರೀಕ್ಷೆ ಇರ್ಲಿಲ್ಲ.. ಹಂಗಾಗಿ ಸಾಂಗ್ ರಿಲೀಸ್ ಆದಾಗ ಯಾರು ಜಾಸ್ತಿ ತಲೆ ಕೆಡಿಸಿಕೊಳ್ಳಿಲ್ಲ.. ಅದೇನೋ ಗೊತ್ತಿಲ್ಲ ಕೇಳ್ತಾ ಕೇಳ್ತಾ ಜನ ಇಷ್ಟಪಡೋಕೆ ಶುರು ಮಾಡಿದ್ರು.. ಇಷ್ಟ ಪಟ್ಟವರು ಹಾಡೋಕೆ ಶುರು ಮಾಡಿದ್ರು, ಇನ್ನು ಕೆಲವರು ಕುಣಿಯೋಕೆ ಮುಂದಾದ್ರು.. ಅದೆಲ್ಲದರ ಪ್ರತಿಫಲ ಅನ್ನುವಂತೆ ಈಗ ಸೋಷಿಯಲ್ ಮೀಡಿಯಾ ತುಂಬೆಲ್ಲಾ ಪರಮ ಸುಂದ್ರಿ ಗುಂಗು ಹಿಡಿಸಿಬಿಟ್ಟಿದ್ದಾಳೆ..
ಡ್ಯಾನ್ಸ್ ವಿಡಿಯೋಸ್ ಫುಲ್ ವೈರಲ್ ! ಹಾಡಿಗೆ ಡಾ. ರಾಜ್, ಅಪ್ಪುನು ಕುಣಿಸಿಬಿಟ್ರು ಅಭಿಮಾನಿಗಳು !
ಪರಮ ಸುಂದ್ರಿ ಕ್ರೇಜ್ ಹೇಗಿದೆ ಅಂದ್ರೆ, ಯೂಟ್ಯೂಬ್, ಇನ್ಸ್ಟಾಗ್ರಾಂ ತುಂಬೆಲ್ಲಾ ಇದೇ ಡ್ಯಾನ್ಸ್ ವೀಡಿಯೋಗಳು ತುಂಬಿ ತುಳುಕುತ್ತಿದೆ.. ಚಿಕ್ಕಮಕ್ಕಳಿಂದ ಹಿಡಿದು ಹಣ್ ಹಣ್ ಮುದುಕರವರೆಗೂ ಎಲ್ಲರೂ ಪರಮ ಸುಂದ್ರಿ ತರ ಕುಣಿದವರೇ.. ಡ್ಯಾನ್ಸ್ ಸ್ಕೂಲ್ಗಳಲ್ಲಿ ಡ್ಯಾನ್ಸರ್ಸ್ ಪರಮ ಸುಂದ್ರಿ, ಕವರ್ ವರ್ಷನ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ತೇಲಿ ಬಿಟ್ಟಿದ್ದಾರೆ.. ತಮ್ಮದೇ ಸ್ಟೈಲ್ನಿಂದ ಬೊಂಬಾಟ್ ಸ್ಟೆಪ್ಸ್ ಹಾಕಿದ್ದಾರೆ ಎಂಜಾಯ್ ಮಾಡ್ತಿದ್ದಾರೆ.. ಪಬ್ಬು, ಪಾರ್ಟಿ, ಸಂಗೀತ್ ಫಂಕ್ಷನ್ ಎಲ್ಲೇ ಹೋದ್ರು, ಈ ಹಾಡು ಕಿವಿ ಮೇಲೆ ಬೀಳುತ್ತೆ.. ನೀವು ಒಮ್ಮೆ ಮೈ ಕುಣಿಸಿಬಿಡ್ತೀರಾ.. ಎ. ಆರ್ ರಹಮಾನ್ ಟ್ಯೂನು, ಶ್ರೇಯಾ ಘೋಷಾಲ್ ವಾಯ್ಸ್ನಲ್ಲಿರೋ ಕಿಕ್ಕೇ ಅಂಥಾದ್ದು ಕಣ್ರೀ..
ಇನ್ನು ಅಭಿಮಾನಿಗಳು ಪರಮ ಸುಂದರಿ ಸಾಂಗ್ಗೆ ತಮ್ಮ ನೆಚ್ಚಿನ ಹೀರೋಗಳ ಡ್ಯಾನ್ಸ್ ವೀಡಿಯೋಗಳನ್ನ ಮಿಕ್ಸ್ ಮಾಡಿ ಖುಷಿ ಪಡ್ತಿದ್ದಾರೆ.. ಪುನೀತ್ ರಾಜ್ಕುಮಾರ್ ಮತ್ತು ಡಾ. ರಾಜ್ಕುಮಾರ್, ಪರಮ ಸುಂದ್ರಿ ವರ್ಷನ್ ಈಗ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ..
ಕಳೆದ ತಿಂಗಳು ಮಿಮಿ ಸಿನಿಮಾ ಓಟಿಟಿಯಲ್ಲಿ ಬಂದು ಸಕ್ಸಸ್ ಆಯ್ತು.. ಜನ ಸಿನಿಮಾ ಮರೆತ್ರು, ಸದ್ಯಕ್ಕೆ ಪರಮ ಸುಂದರಿ ಗುಂಗಿನಿಂದ ಹೊರ ಬರೋತರ ಕಾಣ್ತಿಲ್ಲ.. ಈ ಸಾಂಗ್ನ ಮೀರಿಸೋ ಮತ್ತೊಂದು ಸಾಂಗ್ ಬರೋವರ್ಗೂ ಪರಮ ಸುಂದ್ರಿ ಹವಾ ಮುಂದುವರೆಯುತ್ತೆ.