ಬೆಂಗಳೂರು: ತನ್ನ ಅಪ್ಪನಿಗೆ ಅವರ ಎರಡನೇ ಪತ್ನಿ ಸ್ಲೋ ಪಾಯಿಸನ್ ನೀಡಿದ್ದಾರೆಂದು ಆರೋಪಿಸಿ ಮಗ ಪೊಲೀಸ್ ಠಾಣೆಯ ಮೆಟ್ಟಿಲೇರಿದ್ದಾನೆ.
ಮಂಡ್ಯದ ನಿವೃತ್ತ ಚೀಫ್ ಎಂಜಿನಿಯರ್ ಶಿವಲಿಂಗಯ್ಯ ನವರು ಆನಂದ ಟ್ರಸ್ಟ್, ಅಂಬೇಡ್ಕರ್ ಡೆಂಟಲ್ ಕಾಲೇಜು ನಡೆಸುತ್ತಿದ್ದರು. ಮೊದಲ ಪತ್ನಿ ನಿಧನ ನಂತರ ಶಿವಲಿಂಗಯ್ಯ ಧನಮಣಿ ಎಂಬುವವರನ್ನು ಮದುವೆಯಾಗಿದ್ದರು. ಅದಾಗಲೇ ಧನಮಣಿಗೆ ಮದುವೆಯಾಗಿ ಎರಡು ಮಕ್ಕಳೂ ಇದ್ದರು.
ಶಿವಲಿಂಗಯ್ಯ ಇತ್ತೀಚೆಗೆ ಅನಾರೋಗ್ಯದಿಂದ ಬೆಂಗಳೂರು ಆಸ್ಪತ್ರೆ ಸೇರಿದ್ದರು, ರಕ್ತ ಪರೀಕ್ಷೆ ವೇಳೆ ಶಿವಲಿಂಗಯ್ಯ ದೇಹದಲ್ಲಿ ಅಲ್ಯುಮಿನಿಯಂ ಅಂಶ ಪತ್ತೆಯಾಗಿದೆ. ಇದರಿಂದ ಅನುಮಾನಗೊಂಡ ಪುತ್ರ ರವಿಶಂಕರ್ ಪೊಲೀಸರಿಗೆ ದೂರು ಕೊಟ್ಟಿದ್ದಾರೆ. ನಮ್ಮ ತಂದೆ ಆಸ್ತಿ ಕಬಳಿಸಲು ಸ್ಲೋ ಪಾಯ್ಸನ್ ನೀಡಿದ್ದಾರೆ ಎಂದು ಚಿಕ್ಕಮ್ಮ ಮತ್ತು ತಂದೆಯ ಪಿಎ ವೆಂಕಟೇಶ ಮೂರ್ತಿ ವಿರುದ್ಧ ದೂರು ನೀಡಿದ್ದಾರೆ. ಈ ಪ್ರಕರಣ ಸದಾಶಿವನಗರ ಠಾಣೆಯಲ್ಲಿ ದಾಖಲೆಯಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಇದನ್ನೂ ಓದಿ : ಕಾಂಗ್ರೆಸ್ ಕೇಸರಿ ಶಾಲು ಧರಿಸಿ ರಾಮನವಮಿ ಆಚರಣೆ..! ಕಾಂಗ್ರೆಸ್ ನಾಯಕರು ಶ್ರೀರಾಮನಿಂದಲೇ ಪರಿವರ್ತನೆಯಾಗಿದ್ದಾರೆ : ಸಿಎಂ ಬೊಮ್ಮಾಯಿ..!