ನಟ ಸುಶಾಂತ್ ಸಿಂಗ್ ಸಾವಿನ ಬಳಿಕ ಖಿನ್ನತೆ ಬಗ್ಗೆ ಚಿತ್ರರಂಗದಲ್ಲಿ ದೊಡ್ಡ ಮಟ್ಟದ ಚರ್ಚೆ ನಡೆಯುತ್ತಿದ್ದು, ಇದೀಗ ಸ್ಯಾಂಡಲ್ವುಡ್ನ ಖ್ಯಾತ ಸಂಗೀತಗಾರ, ಗಾಯಕ ರಘು ದೀಕ್ಷಿತ್, ತಾವು ಖಿನ್ನತೆಗೆ ಒಳಗಾಗಿದ್ದ ಬಗ್ಗೆ ಮಾತನಾಡಿದ್ದಾರೆ.
ನಿರೂಪಕಿ ಅನುಶ್ರಿ ಅವರೊಟ್ಟಿಗಿನ ಯೂಟ್ಯೂಬ್ ಸಂವಾದದಲ್ಲಿ, ರಘು ದೀಕ್ಷಿತ್ ಅವರು ತಾವು ಅನುಭವಿಸಿದ ಖಿನ್ನತೆ ಬಗ್ಗೆ ಮನಬಿಚ್ಚಿ ಮಾತನಾಡಿದ್ದು ಆತ್ಮಹತ್ಯೆಯ ಅಂಚಿಗೆ ಹೋಗಿ ಹೊರಗೆ ಬಂದ ಅನುಭವವನ್ನು ಅವರು ಹಂಚಿಕೊಂಡಿದ್ದಾರೆ.
ಇದನ್ನೂ ಓದಿ : ರಂಗಿನ ದುನಿಯಾದ ಗ್ಲಾಮರ್ ಡಾಲ್ ಅಮಲಾ ಪೌಲ್.! ಬಿಕಿನಿ ತೊಟ್ಟು ಪಡ್ಡೆಗಳಿಗೆ ಅಮಲೇರಿಸಿದ್ಲು ಅಮಲಾ..!
ಲಾಕ್‌ಡೌನ್ ಸಮಯದಲ್ಲಿ ಬದುಕುವುದೋ-ಸಾಯುವುದೋ ಎಂಬ ಆಲೋಚನೆಗಳು ನನ್ನ ತಲೆಗೆ ಬಂದಿತ್ತು. ಆಗ ನಾನು ತುಂಬಾ ಕಷ್ಟ ಪಟ್ಟು, ಸೂಕ್ತ ಚಿಕಿತ್ಸೆಗಳನ್ನು ಪಡೆದುಕೊಂಡು ಖಿನ್ನತೆಯಿಂದ ಹೊರಗೆ ಬಂದೆ ಎಂದಿದ್ದಾರೆ.
ಇದನ್ನೂ ಓದಿ : ಹೆಂಡತಿ ಗಂಡನಿಗೆ ಬೈದ್ರೆ ಏನಾಗುತ್ತೆ ಗೊತ್ತಾ..? ಇನ್ಮುಂದೆ ಗಂಡ ಹೆಂಡ್ತಿ ಜಗಳ ಉಂಡು ಮಲಗೋ ತನಕವಲ್ಲ..!!
ಅನುಶ್ರೀ ಜೊತೆಗೆ ಮಾತುಕತೆಯಲ್ಲಿ ತಮ್ಮ ಖಿನ್ನತೆಯ ಬಗ್ಗೆ ಮಾತನಾಡಿದ ರಘು, ಕಳೆದ 3-4 ವರ್ಷಗಳಿಂದಲೂ ಖಿನ್ನತೆಯಿಂದ ಬಳಲುತ್ತಿದ್ದ ನಾನು, ಇತ್ತೀಚೆಗೆ ಅದಕ್ಕೆ ಸೂಕ್ತ ಚಿಕಿತ್ಸೆ ಪಡೆದುಕೊಂಡು ಖಿನ್ನತೆಯನ್ನು ಹೋಗಲಾಡಿಸಿಕೊಂಡಿದ್ದೇನೆ .
ಇದನ್ನೂ ಓದಿ : ಸಿನಿ ದುನಿಯಾದಲ್ಲಿ ಕಡಲ ಕನ್ನಿಕೆಯದ್ದೇ ಹವಾ.! ಯಶ್ ಜೊತೆ ನಟಿಸಬೇಕು ಅಂತ ಏನೇನೆಲ್ಲಾ ಮಾಡಿದ್ರು ಗೊತ್ತಾ ಶ್ರೀನಿಧಿ ಶೆಟ್ಟಿ.!
ಲಾಕ್‌ಡೌನ್ ಸಮಯದಲ್ಲಂತೂ ನಾನು ತೀವ್ರ ಖಿನ್ನತೆ ಅನುಭವಿಸಿದೆ. ಸದಾ ಬೆಡ್ ಮೇಲೆ ಮಲಗಿರುತ್ತಲೇ ಇದ್ದೆ. ಸ್ವಿಗ್ಗಿಯಿಂದ ಊಟ ಆರ್ಡರ್ ಮಾಡಿಕೊಂಡು ತಿನ್ನುತ್ತಿದ್ದೆ. ಶೌಚಾಲಯಕ್ಕೆ ಮಾತ್ರವೇ ಎದ್ದು ನಡೆದುಕೊಂಡು ಹೋಗುತ್ತಿದ್ದೆ, ವಿಪರೀತ ದೇಹ ತೂಕ ಹೆಚ್ಚಿಸಿಕೊಂಡಿದ್ದೆ ಎಂದಿದ್ದಾರೆ.
ಹಳೆಯಾ ದಿನಗಳ ಪೋಟೋಗಳನ್ನ ನೋಡುತ್ತಾ ಹಿಂದಿನ ನೆನಪುಗಳನ್ನ ಮೆಲಕು ಹಾಕುತ್ತಿದೆ.
ಇದನ್ನೂ ಓದಿ : ಇಂದು ನಟ ಪ್ರಥಮ್ಗೆ ಪೊಲೀಸ್ ನೋಟಿಸ್ ! ಧಾರ್ಮಿಕ ಭಾವನೆಗೆ ಧಕ್ಕೆ ತಂದು ಗಲಭೆಗೆ ಪ್ರಚೋದನೆ ಆರೋಪ !
ನನ್ನ ಹಳೆಯ ಪೋಟೋಗಳೇ ನನ್ನ ದೇಹದ ತೋಕವನ್ನ ಇಳಿಸಿಕೊಳ್ಳಲು ಸಹಾಯವಾಯಿತು ಎಂದು ಖುಷಿಯಿಂದ ಹಂಚಿಕೊಂಡಿದ್ದಾರೆ.