ಕೋಲಾರ: ಸಿದ್ದು v/s ಸುಧಾಕರ್ ಮಾತಿನ ಕಾಳಗ ತಾರಕಕ್ಕೇರಿದ್ದು, ಹಳೇ ಗುರುವಿಗೆ ಹಳೇ ಶಿಷ್ಯನಿಂದ ಸವಾಲ್ ಮೇಲೆ ಸವಾಲ್ ಹಾಕಲಾಗಿದೆ. ಹಳೇ ಶಿಷ್ಯನಿಗೆ ಗುರುವಿನಿಂದ ಕೌಂಟರ್ ಮೇಲೆ ಕೌಂಟರ್ ಕೊಡಲಾಗಿದ್ದು, ಸುಧಾಕರ್ ಕೊರೋನಾ ಟೈಮಲ್ಲಿ 3 ಸಾವಿರ ಕೋಟಿ ಲೂಟಿ ಮಾಡಿದ್ಧಾರೆ ಎಂದು ಸಿದ್ದರಾಮಯ್ಯ ಬೆಂಗಳೂರಿನಲ್ಲಿ ಗಂಭೀರ ಆರೋಪ ಮಾಡಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಿದ್ದರಾಮಯ್ಯ, ಅಲಿಬಾಬಾ ಮತ್ತು 40 ಕಳ್ಳರ ಟೀಂನ ಸದಸ್ಯ ಸುಧಾಕರ್, ಹಣ ಮತ್ತು ಮಂತ್ರಿಗಿರಿಗಾಗಿ ಬಿಜೆಪಿಗೆ ಹೋಗಿದ್ದಾನೆ. ಬಿಜೆಪಿಯಲ್ಲಿ ಸುಳ್ಳು ಹೇಳೋ ಗಿರಾಕಿಗಳಿದ್ದಾರೆ ಎಂದಿದ್ದಾರೆ.
ಇದಕ್ಕೆ ಸಚಿವ ಸುಧಾಕರ್ ಪ್ರತಿಕ್ರಿಯಿಸಿದ್ದು, ನಾನು ರಾಜಮಾರ್ಗದಲ್ಲೇ ಬಿಜೆಪಿಗೆ ಹೋಗಿದ್ದು, ಸಿದ್ದರಾಮಯ್ಯ ಜೊತೆ ಚರ್ಚಿಸಿಯೇ ಪಕ್ಷ ಬಿಟ್ಟಿದ್ದು ಎಂದು ಕೌಂಟರ್ ಕೊಟ್ಟಿದ್ದಾರೆ. ಸಿದ್ದು 35 ಸಾವಿರ ಕೋಟಿ ಹಗರಣಕ್ಕೆ ಸಾಕ್ಷಿ ಇದೆ, CAG ವರದಿಯಲ್ಲೇ ಎಲ್ಲದರ ಉಲ್ಲೇಖ ಇದೆ, ಕೋವಿಡ್ ಕಾಲದಲ್ಲಿ 3 ಸಾವಿರ ಕೋಟಿ ಖರ್ಚೇ ಆಗಿಲ್ಲ, ಎಲ್ಲದರ ಶ್ವೇತ ಪತ್ರ ಕೊಡೋಕ್ಕೆ ರೆಡಿ ಎಂದಿದ್ದಾರೆ.
ಇದನ್ನೂ ಓದಿ:ಭವಾನಿ ರೇವಣ್ಣ ಸ್ಪರ್ಧೆ ಮಾಡುವ ಅವಶ್ಯಕತೆ ಇಲ್ಲ…. ಹಾಸನದಲ್ಲಿ ಸಮರ್ಥ ಅಭ್ಯರ್ಥಿ ಇದ್ದಾರೆ : ಹೆಚ್ಡಿಕೆ..!