ಬಾಗಲಕೋಟೆ: ನನಗೆ ಗೊತ್ತಿರುವ ಮಟ್ಟಿಗೆ ಕಾಂಗ್ರೆಸ್ ನವರು ಬಿಜೆಪಿಗೆ ಹೋಗುವುದಿಲ್ಲ, ರಮೇಶ್ ಜಾರಕಿಹೊಳಿ ಮಾತಿಗೆ ಕಿಮ್ಮತ್ತು ಕೊಡುವ ಅಗತ್ಯ ಇಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ತಿಳಿಸಿದ್ದಾರೆ.
ಬಾಗಲಕೋಟೆಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು ‘ರಮೇಶ್ ಜಾರಕಿಹೊಳಿ ಬಹಳ ವರ್ಷದಿಂದ ಇದನ್ನು ಹೇಳುತ್ತಲೇ ಇದ್ದಾರೆ. ನನಗೆ ಗೊತ್ತಿರುವ ಮಟ್ಟಿಗೆ ಯಾರೂ ಬಿಜೆಪಿ ಪಕ್ಷಕ್ಕೆ ಸೇರುವುದಿಲ್ಲ. ರಾತ್ರಿ ನೋಡಿದ ಬಾವಿಗೆ ಯಾರಾದ್ರೂ ಹಗಲು ಹೋಗಿ ಬೀಳ್ತಾರಾ ಎಂದು ಜಾರಕಿಹೊಳಿಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.
ರಮೇಶ್ ಜಾರಕಿಹೊಳಿ ಕಾಂಗ್ರೆಸ್ ನಿಂದ 16 ಜನರು ಬಿಜೆಪಿಗೆ ಸೇರುತ್ತಾರೆ. ನಾವ್ಯಾರೂ ಕಾಂಗ್ರೆಸ್ ಗೆ ಹೋಗುವುದಿಲ್ಲ, ಅವರೇ ನಮ್ಮ ಕಡೆಗೆ ಬರುತ್ತಾರೆ ಎಂದು ತಿಳಿಸಿದ್ದರು.