ಬೆಂಗಳೂರು: ಇಂದು ಗುತ್ತಿಗೆದಾರರ ಸಂಘದ ಅಧ್ಯಕ್ಷ ಕೆಂಪಣ್ಣರಿಂದ ಸಿದ್ದರಾಮಯ್ಯ ಭೇಟಿಯಾಗಲಿದ್ದು, ಮತ್ತೆ ಜೀವ ಪಡೆಯುತ್ತಾ 40 ಪರ್ಸೆಂಟ್ ಕಮಿಷನ್ ಬಾಂಬ್..?
ಕೆಂಪಣ್ಣ ನೇತೃತ್ವದ ಗುತ್ತಿಗೆದಾರರ ನಿಯೋಗ ಮಧ್ಯಾಹ್ನ 12 ಗಂಟೆಗೆ ಸಿದ್ದರಾಮಯ್ಯ ಭೇಟಿ ಮಾಡಲಿದ್ದಾರೆ. ಬಿಜೆಪಿ ಸರ್ಕಾರದ ವಿರುದ್ದ 40% ಕಮಿಷನ್ ಆರೋಪ ಮಾಡಿದ್ದ ಕೆಂಪಣ್ಣ, ನೇರವಾಗಿ ಪತ್ರ ಬರೆದಿದ್ದು ದೊಡ್ಡ ವಿವಾದಕ್ಕೆ ಕಾರಣವಾಗಿತ್ತು. ಇದೀಗ ವಿರೋಧ ಪಕ್ಷದ ನಾಯಕರನ್ನು ಗುತ್ತಿಗೆದಾರರ ಸಂಘ ಭೇಟಿ ಮಾಡುತ್ತಿದ್ದಾರೆ. ಈ ಹಿನ್ನೆಲೆ ಗುತ್ತಿಗೆದಾರರ ಸಂಘ ಸಿದ್ದರಾಮಯ್ಯ ಕೈಗೆ ಸ್ಫೋಟಕ ದಾಖಲೆ ನೀಡುತ್ತಾ..? ಎಂಬ ಪ್ರಶ್ನೆ ಉಲ್ಭಣವಾಗಿದೆ.