ಚಿತ್ರದುರ್ಗ : ಮೇಕೆದಾಟು ಪಾದಯಾತ್ರೆ ವಿಚಾರಕ್ಕೆ ಸಂಬಂಧಿಸಿದಂತೆ ಕೆ.ಎಸ್ ಈಶ್ವರಪ್ಪ ಪ್ರತಿಕ್ರಿಯಿಸಿದ್ದು, ಮೇಕೆದಾಟು ಪಾದಯಾತ್ರೆ ಮಾಡಲಿ ಬೇಡ ಅನ್ನುವುದಿಲ್ಲ, ಆದರೆ ರಿಸ್ಕ್ ತೆಗೆದುಕೊಳ್ಳಬಾರದು, ಬಿಎಸ್‌ವೈ, ದೇವೇಗೌಡರಂತೆ ಸಿದ್ಧರಾಮಯ್ಯ ಸಹ ರಾಜ್ಯದ ಆಸ್ತಿ , ಕೊವಿಡ್‌ನಿಂದಾಗಿ ಏನಾದರು ಹೆಚ್ಚು ಕಡಿಮೆ ಆದರೆ ಯಾರು ಹೊಣೆ ಎಂದು ಪ್ರಶ್ನಿಸಿದ್ದಾರೆ
ಈ ಬಗ್ಗೆ ಚಿತ್ರದುರ್ಗದಲ್ಲಿ ಮಾತನಾಡಿದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್ ಈಶ್ವರಪ್ಪ, ಕೊವೀಡ್ ಅನುಭವಿಸಿದವರಲ್ಲಿ ನಾನು, ಸಿದ್ದರಾಮಯ್ಯ ಕೂಡಾ ಒಬ್ಬರು, ಮೇಕೆದಾಟು ಪಾದಯಾತ್ರೆ ಮಾಡಲಿ ಬೇಡ ಅನ್ನುವುದಿಲ್ಲ, ಆದರೆ ರಿಸ್ಕ್ ತೆಗೆದುಕೊಳ್ಳಬಾರದು. ಯಡಿಯೂರಪ್ಪ, ದೇವೇಗೌಡರ ರೀತಿಯಲ್ಲಿ ಸಿದ್ದರಾಮಯ್ಯ ಕೂಡಾ ರಾಜ್ಯದ ಆಸ್ತಿ. ನಾಳೆ ಕೊವೀಡ್ ಯಿಂದ ಹೆಚ್ಚು ಕಡಿಮೆ ಆದರೆ ಯಾರು ಹೊಣೆ. ಕೊವೀಡ್ ಸೋಂಕಿಗೆ ಬಿಜೆಪಿ , ಕಾಂಗ್ರೆಸ್, ಜೆಡಿಎಸ್ ಅಂತ ಗೊತ್ತಿಲ್ಲ. ಮೇಕೆದಾಟು ಯೋಜನೆಗೆ ಹೋರಾಟ ಕೊವೀಡ್ ಮುಗಿದ ಬಳಿಕ ನಾವೇ ವ್ಯವಸ್ಥೆ ಮಾಡುತ್ತೇವೆ, ಪಾದಯಾತ್ರೆ ಮಾಡಲಿ ಎಂದು ಹೇಳಿದ್ದಾರೆ.
ಇದನ್ನೂ ಓದಿ:ಅಭದ್ರತೆ ಮಾಡಿದರೂ ಮೋದಿ ಕೂದಲು ಅಲ್ಲಾಡಿಸಲು ಆಗಲ್ಲ, ಇಡೀ ಪ್ರಪಂಚ ಅವರ ಜೊತೆಗಿದೆ : ಕೆ.ಎಸ್ ಈಶ್ವರಪ್ಪ…!