ಬೆಂಗಳೂರು : ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕುರಿತಾಗಿ ಅವಹೇಳನಕಾರಿ ವಿಚಾರದ ಬಗ್ಗೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯಿಸಿ ನನಗೆ ಸಿದ್ದರಾಮಯ್ಯನವರ ವಿಚಾರದಲ್ಲಿ ಯಾರು ಏನು ಮಾತನಾಡಿದ್ದಾರೋ ಗೊತ್ತಿಲ್ಲ, ನನಗೆ ಯಾರು ಹೇಳಿಲ್ಲ, ನಮ್ಮ ನಾಯಕರನ್ನ ಡಿ ಫೇಮ್ ಮಾಡಲು ತಂತ್ರಗಳು ನಡಿತಾ ಇದೆ ಅದನ್ನು ಮಾತ್ರ ಹೇಳುತ್ತೇನೆ ಎಂದಿದ್ದಾರೆ.
ಈ ಬಗ್ಗೆ ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್ ಅವರು ನನಗೆ ಸಿದ್ದರಾಮಯ್ಯನವರ ವಿಚಾರದಲ್ಲಿ ಯಾರು ಏನು ಮಾತನಾಡಿದ್ದಾರೋ ಗೊತ್ತಿಲ್ಲ, ನನಗೆ ಯಾರು ಹೇಳಿಲ್ಲ . ಇದು ಯಾರೇ ಮಾಡಿದರೂ ಅದು ಅವರ ಖಾಸಗಿ ವಿಚಾರವಾಗಿರುತ್ತದೆ. ಆ ವಿಚಾರದಲ್ಲಿ ಏನ್ ಮಾತನಾಡಿದ್ದಾರೋ ಗೊತ್ತಿಲ್ಲ, ಅದನ್ನ ತಿಳಿದುಕೊಂಡು ನಾನು ಮಾತನಾಡುತ್ತೇನೆಂದು ಹೇಳಿದ್ಧಾರೆ.
ಇದನ್ನೂ ಓದಿ : ಪ್ರಧಾನಿ ಮೋದಿ ಬೃಹತ್ ಸಮಾವೇಶಕ್ಕೆ ಅಂತಿಮ ಹಂತದ ಸಿದ್ದತೆ…! ಭುವನಹಳ್ಳಿ ಗೇಟ್ ಹೇಗೆ ತಯಾರಾಗ್ತಿದೆ ಗೊತ್ತಾ..?