ಬೆಂಗಳೂರು: ಬಾಗಲಕೋಟೆ ಜಿಲ್ಲಾಧಿಕಾರಿ (Bagalkot DC) ಏನು ಆಕಾಶದಿಂದ ಬಂದಿದ್ದಾನಾ? ಅವು ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯಷ್ಟೇ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaih) ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬಾಗಲಕೋಟೆಯಲ್ಲಿ ನಡೆಯಲಿರುವ ಯೋಗ ದಿನಾಚರಣೆ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಉಲ್ಲೇಖಿಸಿದ್ದಕ್ಕೆ ಗರಂ ಆದ ಸಿದ್ದರಾಮಯ್ಯ ಅವರು ಜಿಲ್ಲಾಧಿಕಾರಿ ಸುನಿಲ್ ಕುಮಾರ್ ಗೆ ಫೋನ್ ಮಾಡಿ ಕ್ಲಾಸ್ ತೆಗೆದುಕೊಂಡಿದ್ದಾರೆ.
ಕೇಳದೆ ಆಮಂತ್ರ ಪತ್ರಿಕೆಯಲ್ಲಿ ಹೆಸರು ಹಾಕಿದ್ದು ಯಾಕೆ? ಅಧಿಕಾರಿಗಳೆಲ್ಲಾ ಕೊಬ್ಬಿ ಹೋಗಿದ್ದಾರೆ. ಕಲೆಕ್ಟರ್, ತಹಶೀಲ್ದಾರ್ ಅವೆಲ್ಲ ಆ ಕಾಲಕ್ಕೆ ಹೊರಟೋಯ್ತು ಎಂದು ಕಿಡಿ ಕಾರಿದ್ದಾರೆ.