ಬೆಂಗಳೂರು : ಯುವಕ- ಯುವತಿ ಶಾಪಿಂಗ್ ಕಾಂಪ್ಲೆಕ್ಸ್ನಿಂದ ಕಾಲು ಜಾರಿ ಬಿದಿದ್ದು, ಯುವತಿ ಸಾವನ್ನಪ್ಪಿದ್ದು, ಯುವಕನ ಸ್ಥಿತಿ ಗಂಭೀರವಾಗಿದೆ. ಬೆಂಗಳೂರಿನ ಬ್ರಿಗೇಡ್ ರೋಡ್ನಲ್ಲಿರೋ ಶಾಪಿಂಗ್ ಕಾಂಪ್ಲೆಕ್ಸ್ನಲ್ಲಿ ಈ ಘಟನೆ ನಡೆದಿದೆ.
18 ವರ್ಷದ ಯುವತಿ ಲಿಯಾ ತನ್ನ ಪ್ರಿಯಕರ ಕ್ರಿಸ್ಪೀಟರ್ ಜೊತೆ ಶಾಪಿಂಗ್ ಬಂದಿದ್ದಾಳೆ. ಶಾಪಿಂಗ್ ವೇಳೆ ಕಾಲು ಜಾರಿ ಬಿದ್ದು ಇಬ್ಬರೂ ಆಸ್ಪತ್ರೆ ಪಾಲಾಗಿದ್ದರು. ದುರಾದೃಷ್ಟವಶಾತ್ ಚಿಕಿತ್ಸೆ ಫಲಿಸದೆ ನಿಮ್ಹಾನ್ಸ್ ಆಸ್ಪತ್ರೆಯಲ್ಲೇ ಯುವತಿ ಲಿಯಾ ಕೊನೆಯುಸಿರೆಳೆದಿದ್ದಾಳೆ. ಯುವಕನಿಗೆ ನಿಮ್ಹಾನ್ಸ್ನಲ್ಲಿ ಚಿಕಿತ್ಸೆ ಮುಂದುವರಿದಿದೆ.
ಯುವತಿ ಲಿಯಾ ಬೆಂಗಳೂರಿನ ಕಾಕ್ಸ್ಟೌನ್ ನಿವಾಸಿಯಾಗಿದ್ದಾಳೆ. 18 ವರ್ಷದ ಯುವಕ ಕ್ರಿಸ್ಪೀಟರ್ HAL ನಿವಾಸಿಯಾಗಿದ್ದಾನೆ. ಶಾಪಿಂಗ್ ವೇಳೆ ಕಾಲು ಜಾರಿ ಯುವತಿ ಮೊದಲು ಬಿದ್ದಿದ್ದಾಳೆ, ಯುವತಿಯನ್ನ ಹಿಡಿದುಕೊಳ್ಳಲು ಹೋಗಿ ಯುವಕ ಕೂಡ ಬಿದ್ದಿದ್ದಾನೆ. ಯುವತಿಯ ಮೇಲೆ ಯುವಕ ಬಿದ್ದಿದ್ದರಿಂದ ಕ್ರಿಸ್ಪೀಟರ್ ಬಚಾವ್ ಆಗಿದ್ದಾನೆ. ಯುವಕನ ಕಾಲು ಮುರಿದಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಬ್ಬರೂ ಸೆಂಟ್ ಜೋಸೆಫ್ ಆಫ್ ಕಾಮರ್ಸ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಕಾಮರ್ಸ್ ವಿಭಾಗದ ವಿದ್ಯಾರ್ಥಿಗಳಾಗಿದ್ದಾರೆ. ಈ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.