ಮಂಡ್ಯ : ಮಂಡ್ಯ ರೈಲು ನಿಲ್ದಾಣದಲ್ಲಿ ಮನಕಲಕುವ ಘಟನೆ ನಡೆದಿದೆ. ಒಂದು ಟ್ರೈನ್ ಇಳಿದು ಹಳಿ ದಾಟುತ್ತಿದ್ದ ವೇಳೆ ಇನ್ನೊಂದು ಟ್ರೈನ್ಗೆ ಸಿಲುಕಿ ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ.
ಬೆಂಗಳೂರಿನಿಂದ ಬರುತ್ತಿದ್ದ ಕಾಚಿಗುಡ ಎಕ್ಸ್ಪ್ರೆಸ್ ಇಳಿದಿದ್ದ ಮಹಿಳೆಯರು ಹಳಿ ದಾಟುತ್ತಿದ್ದರು. ಈ ವೇಳೆ ಮೈಸೂರು ಕಡೆಯಿಂದ ಬಂದ ಮಾಲ್ಗುಡಿ ಎಕ್ಸ್ಪ್ರೆಸ್ ರೈಲು ಡಿಕ್ಕಿ ಹೊಡೆದಿದ್ದು, ಇಬ್ಬರು ಮಹಿಳೆಯರು ಸಾವನ್ನಪ್ಪಿದ್ದಾರೆ. ಒಬ್ಬರನ್ನು ಹುರಳಿಜವರನಕೊಪ್ಪಲು ನಿವಾಸಿ ಶಶಿ ಎಂದು ಗುರುತಿಸಲಾಗಿದೆ. ಇನ್ನೊಬ್ಬರ ಗುರುತು ಸಿಕ್ಕಿಲ್ಲ ಹೀಗಾಗಿ ರೈಲ್ವೇ ಪೊಲೀಸರು ಪರಿಶೀಲನೆ ಮಾಡಿ ಮಾಹಿತಿ ಕಲೆಹಾಕುತ್ತಿದ್ದಾರೆ.
ಇದನ್ನೂ ಓದಿ : ಒಕ್ಕಲಿಗರ ತಂಟೆಗೆ ಬಂದ್ರೆ ತಕ್ಕಪಾಠ ಕಲಿಸೋದಾಗಿ ಸಚಿವ ಮಾಧುಸ್ವಾಮಿಗೆ ಎಚ್ಚರಿಕೆ ಕೊಟ್ಟ ಒಕ್ಕಲಿಗರ ಸಂಘ…