ಡಿ.ಜೆ.ಹಳ್ಳಿ ಗಲಭೆಕೋರರಿಗೆ ಕಾದಿದೆ ದಿಲ್ಲಿ ಟ್ರೀಟ್ಮೆಂಟ್. ಕಿಡಿ ಹಚ್ಚಲು ಹೋಗಿ ಲೈಫನ್ನೇ ಭಸ್ಮ ಮಾಡ್ಕೋತಾರಾ 61 ಮಂದಿ? ಬೆಂಕಿ ಹಚ್ಚಿದ ಆ 61 ಮಂದಿ ಮೇಲೆ ಬಿದ್ದಿರೋ ಕೇಸ್ ಯಾವುದು..? ಆ ಕೇಸ್ನ ರೂಪು ರೇಷೆ ಏನು..? ಆ ಕೇಸ್ ಎಷ್ಟು ಸ್ಟ್ರಾಂಗ್..? ಈ ಸ್ಟೋರಿ ಓದಿ ನಿಮಗೆ ತಿಳಿಯುತ್ತದೆ.
ಕೆಜಿ ಹಳ್ಳಿ ಮತ್ತು ಡಿಜೆ ಹಳ್ಳಿ ವ್ಯಾಪ್ತಿಗಳಲ್ಲಿ ನಡೆದ ಗಲಭೆ ತನಿಕೆಗೆ NIA ತನಿಖಾ ತಂಡ ಎಂಟ್ರಿಯಾಗೋದು ಫಿಕ್ಸ್ ಆಗಿದೆ. ಗಲಭೆಕೋರರಿಗೆ ಉಗ್ರ ಸಂಘಟನೆಯ ಸಂಪರ್ಕ ಹಿನ್ನೆಲೆಯಲ್ಲಿ NIAಗೆ ತನಿಖಾ ಫೈಲ್ ಹೋಗುತ್ತಿದೆ.
ಇದನ್ನೂ ಓದಿ : ಡಿಜೆ ಹಳ್ಳಿ ಗಲಭೆಕೋರರಿಗೆ ಹಣ ಎಲ್ಲಿಂದ ಬಂತು ಗೊತ್ತಾ ? ಭಯೋತ್ಪಾದನೆಗೂ ಬೆಂಗಳೂರು ಬೆಂಕಿಗೂ ಇತ್ತಾ ನಂಟು ?
NIA ತನಿಖಾ ತಂಡಕ್ಕೆ ಸಿಸಿಬಿ ಮಾಹಿತಿ ನೀಡಿದೆ. ಪ್ರಕರಣ ಸಂಬಂಧ 2 FIR ಕೂಡಾ NIA ಕೋರ್ಟ್ಗೆ ಸಲ್ಲಿಸಲ್ಲಿದ್ದು, ಆ 2 ಪ್ರಕರಣಗಳನ್ನು ರಾಜ್ಯ ಸರಕಾರ ಗಂಭೀರವಾಗಿ ತೆಗೆದುಕೊಂಡಿರುವ.
ಕೆ.ಜಿ ಹಳ್ಳಿ – ಡಿ.ಜೆ ಹಳ್ಳಿ ಗಲಭೆಕೋರರ ಮೇಲೆ UAPA ( Unlawfull Activities Prevention Act ) ಕಾನೂನು ಬಾಹಿರ ಚಟುವಟಿಕೆಗಳನ್ನು ತಡೆಯುವ ಕಾಯ್ದೆಯಡಿ ಪ್ರಕರಣ ದಾಖಲಿಸಲು ಕೋರ್ಟ್ ಅನುಮತಿ ನೀಡಿದೆ.
ಇದನ್ನೂ ಓದಿ : ಡಿ ಜೆ ಹಳ್ಳಿ, ಕೆ ಜೆ ಹಳ್ಳಿ ಗಲಭೆ ಪ್ರಕರಣಕ್ಕೆ ಟ್ವಿಷ್ಟ್ ! ಗಲಭೆ ಮಾಡಿದವರ್ಯಾರು?ಆತ 60000 ಜನರಿಗೆ ಲೈವ್ ಕೊಟ್ನಾ?
ಪ್ರಮುಖ 61 ಆರೋಪಿಗಳ ವಿರುದ್ಧ UAPA ಅಡಿ ಕೇಸ್ ದಾಖಲಾಗಲಿದೆ. 40ಕ್ಕೂ ಹೆಚ್ಚು ಗಲಭೆಕೋರರಿಗೆ ವಿವಿಧ ಉಗ್ರರ ಜೊತೆ ಸಂಪರ್ಕ ಇರುವುದು ಬಯಲಾಗಿದ್ದು, ಕಿಂಗ್ಪಿನ್ಗಳಾದ ಮುಜಾಮಿಲ್ ಪಾಷ, ಸೈಮುದ್ದೀನ್ಗೆ ಟೆರರ್ ಲಿಂಕ್ ಇರುವುದು ಕೂಡ ಈಗಾಗಲೇ ತನಿಖೆಯಿಂದಾಗಿ ಬಟಾಬಯಲಾಗಿದೆ.
ಸೈಮುದ್ದೀನ್ನ ನಾರಿ ಫೌಂಡೇಶನ್ ಟ್ರಸ್ಟ್ಗೆ ಫಾರಿನ್ ಫಂಡ್ ISISಗೆ ಸೈಮುದ್ದೀನ್ ನೇಮಕಾತಿ ಮಾಡ್ತಿದ್ದ ಬಗ್ಗೆಯೂ ಸಿಸಿಬಿಗೆ ಸುಳಿವು ಸಿಕ್ಕಿದೆ. ಈ ಎಲ್ಲಾ ಮಾಹಿತಿಗಳನ್ನು ನಿನ್ನೆ NIA ಜೊತೆ ಸಿಸಿಬಿ ಟೀಂ ಹಂಚಿಕೊಂಡಿದ್ದು, ಗಲಭೆ -ಟೆರರ್ ಲಿಂಕ್ ತನಿಖೆಗೆ NIA ಟೀಂ ಶೀಘ್ರವೇ ಬೆಂಗಳೂರಿಗೆ ಎಂಟ್ರಿ ಕೊಡಲಿದೆ.