ಬೆಂಗಳೂರು: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಇಂದು ಮೇಲುಕೋಟೆಗೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ ಅವರು ಬೀದಿ ವ್ಯಾಪಾರಿಯಿಂದ ಬುಟ್ಟಿಯನ್ನು ಖರೀದಿಸಿದ್ದಾರೆ.
ಮೇಲುಕೋಟೆಯಲ್ಲಿ ಬೀದಿ ವ್ಯಾಪಾರಿಗಳ ಜೊತೆ ಮಾತುಕತೆ ನಡೆಸಿದ ಶೋಭಾ ಕರಂದ್ಲಾಜೆ ಅವರು ಅವರ ಬಳಿ ಬುಟ್ಟಿ ಖರೀದಿಸಿದ್ದಾರೆ. ಬುಟ್ಟಿ ಖರೀದಿಸಿದ ವಿಚಾರವನ್ನು ಅವರು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿಕೊಂಡಿದ್ದು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಕನಸು, ವೋಕಲ್ ಫಾರ್ ಲೋಕಲ್ ಎಂದು ಹ್ಯಾಷ್ ಟ್ಯಾಗ್ ಹಾಕಿದ್ದಾರೆ.
ಇದನ್ನೂ ಓದಿ: ನಾರಾಯಣಪುರ ಬಲದಂಡೆ ಕಾಮಗಾರಿಯಲ್ಲಿ ಭಾರೀ ಭ್ರಷ್ಟಾಚಾರ… ಕೆಲಸವೇ ಮಾಡದೆ ಬಿಲ್ ಸ್ಯಾಂಕ್ಷನ್ ಮಾಡಿದ್ದಾರೆ: ಸಿದ್ದರಾಮಯ್ಯ…
‘ಇಂದು ಮಂಡ್ಯದ ಮೇಲುಕೋಟೆಯಲ್ಲಿ ಈ ಸುಂದರ ಬುಟ್ಟಿಯನ್ನು ಖರೀದಿಸಿದೆ. ಈ ಬುಟ್ಟಿಗಳನ್ನು ಸ್ವ ಸಹಾಯ ಗುಂಪಿನ ಮಹಿಳೆಯರು ತಯಾರಿಸಿದ್ದಾರೆ. ಸ್ವ ಸಹಾಯ ಗುಂಪುಗಳು ಗ್ರಾಮೀಣ ಭಾಗದ ಮಹಿಳೆಯರಲ್ಲಿ ಮಹತ್ವದ ಬದಲಾವಣೆ ತಂದಿವೆ’ ಎಂದು ತಿಳಿಸಿದ್ದಾರೆ.
Realising PM Sri @narendramodi Ji’s goal of #VocalForLocal.
Bought a beautifully crafted basket at Melukote village in Mandya.
Baskets are being made & sold by women associated with SHGs, and these SHGs have brought about a transformational change in the lives of rural women. pic.twitter.com/IyecIJlrCs
— Shobha Karandlaje (@ShobhaBJP) May 18, 2022