ಮುಂಬೈ: ಮಹಾರಾಷ್ಟ್ರ ರಾಜಕಾರಣದಲ್ಲಿ ಕ್ಷಣ ಕ್ಷಣಕ್ಕೂ ಟ್ವಿಸ್ಟ್ ಸಿಗುತ್ತಿದ್ದು, ಏಕನಾಥ್ ಶಿಂಧೆ (Eknath Shinde) ಯೊಂದಿಗೆ ತೆರಳಿದ್ದ ಶಿವಸೇನೆ ಶಾಸಕ ನಿತಿನ್ ದೇಶಮುಖ್ (Nitin Deshmukh) ಶಿಂಧೆ ಟೀಂ ಬಿಟ್ಟು ವಾಪಸ್ಸಾಗಿದ್ದಾರೆ.
ಸೂರತ್ ನಿಂದ ನಾಗಪುರಕ್ಕೆ ವಾಪಸ್ ಬಂದಿರುವ ನಿತಿನ್ ದೇಶಮುಖ್ ಅವರು ನನ್ನನ್ನು ಕಿಡ್ನಾಪ್ ಮಾಡಲಾಗಿತ್ತು. ಸುಮಾರು 100 ರಿಂದ 150 ಪೊಲೀಸರು ನನ್ನನ್ನು ಹಿಡಿದಿಟ್ಟಿದ್ದರು. ಆಸ್ಪತ್ರೆಗೆ ಕರೆದೋಯ್ದು ನನಗೆ ಟ್ರೀಟ್ ಮೆಂಟ್ ಕೊಡಿಸಲು ಮುಂದಾಗಿದ್ದರು.
ಇದನ್ನೂ ಓದಿ: ಪತನದ ಅಂಚಿನಲ್ಲಿ ಠಾಕ್ರೆ ಸರ್ಕಾರ.. ಮಹಾರಾಷ್ಟ್ರದಲ್ಲಿ ಆಪರೇಷನ್ ಕಮಲ ಕಾರ್ಯಾಚರಣೆಯಲ್ಲಿ ರಮೇಶ್ ಜಾರಕಿಹೊಳಿ ಕೈವಾಡ..?
ಜೊತೆಗೆ ನನ್ನ ಮೇಲೆ ಹಲ್ಲೆ ನಡೆಸುವ ಉದ್ದೇಶವೂ ಇತ್ತು. ದೇವರು ದೊಡ್ಡವನು, ನಾನು ಹೇಗೋ ತಪ್ಪಿಸಿಕೊಂಡು ಬಂದೆ. ಉದ್ಧವ್ ಠಾಕ್ರೆ ಮೇಲೆ ನನಗೆ ವಿಶ್ವಾಸ ಇದೆ ಎಂದು ನಿತಿನ್ ತಿಳಿಸಿದ್ದಾರೆ.
ಇನ್ನು ಶಿವಸೇನೆ ನಾಯಕರು ಬಂಡಾಯ ಶಾಸಕರಿಗೆ ಸಂಜೆ 5 ಗಂಟೆಯೊಳಗೆ ವಾಪಸ್ ಬನ್ನಿ ಎಂದು ಡೆಡ್ಲೈನ್ ಕೊಟ್ಟಿದ್ಧಾರೆ. ಕ್ಯಾಬಿನೆಟ್ ಸಭೆ ನಂತರ ಈ ಸಂಬಂಧ ಶಿವಸೇನೆಯ ಎಲ್ಲಾ ಸಚಿವರು ಮತ್ತು ಶಾಸಕರಿಗೂ ಮೆಸೇಜ್ ಕಳುಹಿಸಿದ್ದರು.