ಮುಂಬೈ: ಮಹಾರಾಷ್ಟ್ರದಲ್ಲಿ ರಾಜಕೀಯ ಬಿಕ್ಕಟ್ಟು ಹೆಚ್ಚುತ್ತಲೇ ಇದ್ದು ಮುಖ್ಯಮಂತ್ರಿ ಉದ್ಧವ್ ಠಾಕ್ರೆ (Uddhav Thackeray) ಕರೆದಿದ್ದ ಸಚಿವ ಸಂಪುಟ ಸಭೆಗೆ ಶಿವಸೇನೆ (Shiv Sena) ಸಚಿವರು ಗೈರಾಗಿದ್ದು, ಕೇವಲ ಕಾಂಗ್ರೆಸ್ ಮತ್ತು ಎನ್ ಸಿ ಪಿ ಸಚಿವರು ಮಾತ್ರ ಹಾಜರಾಗಿದ್ದಾರೆ.
ಸಚಿವ ಸಂಪುಟ ಸಭೆ ಆರಂಭವಾಗಿ 30 ನಿಮಿಷ ಕಳೆದರೂ ಸಹ ಶಿವಸೇನೆಯ ಸಚಿವರು ಸಭೆಗೆ ಹಾಜರಾಗಿಲ್ಲ. ಶಿವಸೇನೆಯ 6 ಸಚಿವರು ಏಕನಾಥ್ ಶಿಂಧೆ ಜೊತೆ ಗುರುತಿಸಿಕೊಂಡಿದ್ಧಾರೆ. ಈ ಹಿನ್ನೆಲೆಯಲ್ಲಿ ಸಚಿವ ಸಂಪುಟ ಸಭೆಯ ಬಳಿಕ ಉದ್ಧವ್ ಠಾಕ್ರೆ ರಾಜೀನಾಮೆ ನೀಡುತ್ತಾರಾ? ಅಥವಾ ಅವರು ವಿಧಾನಸಭೆಯನ್ನು ವಿಸರ್ಜಿಸಲು ತೀರ್ಮಾನ ತೆಗೆದುಕೊಳ್ಳುತ್ತಾರಾ ಎಂಬ ಪ್ರಶ್ನೆ ಕಾಡುತ್ತಿದೆ.
ಇದೇ ವೇಳೆ ನಮ್ಮದೇ ನಿಜವಾದ ಶಿವಸೇನೆ, ನಮ್ಮ ಮನವಿ ಪುರಸ್ಕರಿಸಿ, ಈ ಸರ್ಕಾರ ವಜಾ ಮಾಡಿ ಎಂದು ಏಕನಾಥ್ ಶಿಂಧೆ (Eknath Shinde) ನಾಯಕತ್ವದಲ್ಲಿ ರಾಜ್ಯಪಾಲರಿಗೆ ಪತ್ರ ಬರೆಯಲು ರೆಬಲ್ ಶಾಸಕರು ಸಿದ್ಧತೆ ನಡೆಸುತ್ತಿದ್ದಾರೆ. ಜೊತೆಗೆ 40 ಶಾಸಕರು ಈಗಾಗಲೇ ಏಕನಾಥ್ ಶಿಂಧೆಯನ್ನು ಬೆಂಬಲಿಸಿ ಪತ್ರ ನೀಡಿದ್ದಾರೆ. ಈ ಪತ್ರಗಳನ್ನು ರಾಜಭವನಕ್ಕೆ ತಲುಪಿಸಲು ಶಿಂಧೆ ಪ್ಲ್ಯಾನ್ ಮಾಡಿದ್ದಾರೆ.
#WATCH Gujarat | Shiv Sena's Eknath Shinde seen with party MLAs at a Surat hotel, yesterday, June 21
As of now, Shinde, as per his claim, is with at least 40 MLAs who are camping in Guwahati, Assam pic.twitter.com/yvYI4rXbhJ
— ANI (@ANI) June 22, 2022