ಮಹರಾಷ್ಟ್ರ: ಸಸ್ಪೆಂಡ್ ಅಸ್ತ್ರಕ್ಕೆ ಏಕನಾಥ್ ಶಿಂಧೆ ಟಾಂಗ್ಕೊಟ್ಟಿದ್ದು, ಅನರ್ಹತೆ ಬೆದರಿಕೆಗೆ ನಾವು ಜಗ್ಗೋದಿಲ್ಲ,
ನಾವು ಬಾಳಾಸಾಬ್ ಕಟ್ಟಿದ ಶಿವಸೇನೆ ಕಟ್ಟಾಳುಗಳು. ನಮಗೂ ಕಾನೂನು ಗೊತ್ತಿದೆ, ನಮ್ಮನ್ನು ಬೆದರಿಸಬೇಡಿ ಎಂದು ವಾಗ್ದಾಳಿ ನಡೆಸಿದ್ದಾರೆ.
ಸದನ ನಡೆಯುವಾಗ ಮಾತ್ರ ವಿಪ್ಗೆ ಕಿಮ್ಮತ್ತಿದೆ, ನನ್ನ ಬಳಿ 37ಕ್ಕೂ ಹೆಚ್ಚು ಶಾಸಕರು ಇದ್ದಾರೆ ಎಂದು ಉದ್ಧವ್ ಠಾಕ್ರೆ ಟೀಂಗೆ ಏಕನಾಥ್ ಶಿಂಧೆ ಠಕ್ಕರ್ ಕೊಟ್ಟಿದ್ದಾರೆ. ಒಬ್ಬೊಬ್ಬರೇ ಶಾಸಕರು ಶಿಂಧೆ ಟೀಂಗೆ ಜಂಪ್ ಆಗುತ್ತಿದ್ದು, ದಿಲೀಪ್ ಲಾಂಡೆ ಕಳೆದ ರಾತ್ರಿ ಅಸ್ಸಾಂ ಹೋಟೆಲ್ ಸೇರಿದ್ದಾರೆ. ಏಕನಾಥ್ ಶಿಂಧೆ ಶಿವಸೇನೆ ಟೀಂನ ಬಲ 38ಕ್ಕೆ ಏರಿಕೆಯಾಗಿದ್ದು, ಶಿವಸೇನೆಯ 55 ಶಾಸಕರ ಪೈಕಿ ಶಿಂಧೆಗೆ 38 ಮಂದಿ ಬೆಂಬಲ ನೀಡಿದ್ದಾರೆ. ಶಿಂಧೆ ನಮ್ಮ ನಾಯಕ ಎಂದು ಡೆಪ್ಯೂಟಿ ಸ್ಪೀಕರ್ಗೆ ಪತ್ರ ಬರೆಯಲಾಗಿದ್ದು, ಉಪ ಸಭಾಧ್ಯಕ್ಷರಿಗೆ ಶಿಂಧೆ ಕ್ಯಾಂಪ್ನ 37 ಶಾಸಕರು ಪತ್ರ ಬರೆದಿದ್ದಾರೆ.
ಇದನ್ನೂ ಓದಿ:ನಕಲಿ ವೆಬ್ಸೈಟ್ ಕ್ರಿಯೇಟ್ ಮಾಡಿದ್ದ ಗಾಣಗಾಪುರ ದತ್ತ ದೇಗುಲದ ಅರ್ಚಕರ ಮೇಲೆ FIR..!