ದಾವಣಗೆರೆ: ಒಂದು ಕುಟುಂಬಕ್ಕೆ ಒಂದೇ ಟಿಕೆಟ್ (One family, one ticket) ನಿಯಮ ನಮಗೆ ಅನ್ವಯಿಸುವುದಿಲ್ಲ, ನಮ್ಮ ಮನೆಯಲ್ಲಿ ನಾಲ್ಕು ಜನರಿಗೆ ಟಿಕೆಟ್ ಕೊಡುತ್ತಾರೆ ಎಂದು ಶಾಸಕ ಶಾಮನೂರು ಶಿವಶಂಕರಪ್ಪ (Shamanuru Shivashankarappa) ತಿಳಿಸಿದ್ದಾರೆ.
ದಾವಣಗೆರೆಯಲ್ಲಿ ಪ್ರತಿಕ್ರಿಯಿಸಿದ ಶಾಮನೂರು ಶಿವಶಂಕರಪ್ಪ ಅವರು ನಮ್ಮ ಮನೆ ರಾಜಕೀಯ ಪವರ್ ಸೆಂಟರ್ ಯಾಕೆ ಆಗಬಾರದು. ಜಗದೀಶ್ ಶೆಟ್ಟರ್, ಸಿಎಂ ಬಸವರಾಜ ಬೊಮ್ಮಯಿ, ನಾವೆಲ್ಲಾ ವೀರಶೈವ ಲಿಂಗಾಯತರು ಅದಕ್ಕೆ ಸಂಬಂಧ ಬೆಳೆಸುತ್ತೇವೆ.
ಇದನ್ನೂ ಓದಿ: ನಮ್ಮ ಮನೆ ಮುಂದೆ ಚಡ್ಡಿ ಪ್ರೊಟೆಸ್ಟ್ ಮಾಡುವಾಗ ಕೊರೋನಾ ಇರಲಿಲ್ವಾ..? ಸುಧಾಕರ್ ಹೇಳಿಕೆಗೆ ಸಿದ್ದು ತಿರುಗೇಟು…!
ಇನ್ನು ಸಿಎಂ ಆಗುವ ವಿಚಾರದ ಕುರಿತು ಪ್ರತಿಕ್ರಿಯಿಸಿದ ಅವರು ಮುಂದೆ ಏನ್ ಆಗುತ್ತೋ ಯಾರಿಗೆ ಗೊತ್ತು,. ಭವಿಷ್ಯ ಹೇಳೋಕೆ ಆಗೋಲ್ಲ, ಬೇಕಿದ್ರೆ ಕೋಡಿಮಠದ ಸ್ವಾಮಿಜಿಯನ್ನು ಕೇಳಿ. ಒಂದು ಕುಟುಂಬಕ್ಕೆ ಒಂದೇ ಟಿಕೆಟ್ ನಿಯಮ ನಮಗೆ ಅನ್ವಯಿಸುವುದಿಲ್ಲ, ನಮ್ಮ ಮನೆಯಲ್ಲಿ ನಾಲ್ಕು ಜನರಿಗೆ ಟಿಕೆಟ್ ಕೊಡುತ್ತಾರೆ. ಮುಂದಿನ ಚುನಾವಣೆಯಲ್ಲಿ ತಾನು ಕೂಡ ನಿಲ್ಲುತ್ತೇನೆ ಎಂದು ತಿಳಿಸಿದ್ಧಾರೆ.
ಇದನ್ನೂ ಓದಿ: ರಾಜ್ಯಾದ್ಯಂತ ಸಿಇಟಿ ಪರೀಕ್ಷೆ ಆರಂಭ..! ಪರೀಕ್ಷಾ ಕೇಂದ್ರದ ಹೊರಾಂಗಣದಲ್ಲಿ ಹಿಜಾಬ್ ತೆಗೆದ ವಿದ್ಯಾರ್ಥಿಗಳು..!