ಹಾಸನ: ಹಾಸನದ ಹಿಮ್ಸ್ನಲ್ಲಿ ವಿದ್ಯಾರ್ಥಿನಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಲಾಗಿದ್ದು, ಲಿಫ್ಟ್ನಲ್ಲಿ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ್ದ ಡಾಕ್ಟರ್ ನನ್ನು ಸಸ್ಪೆಂಡ್ ಮಾಡಲಾಗಿದೆ.
ವೈದ್ಯ ಪದವಿ ಪೂರೈಸಿ ತರಬೇತಿ ಪಡೆಯುತ್ತಿದ್ದ ವಿದ್ಯಾರ್ಥಿನಿಗೆ ಹಾಸನ ಹಿಮ್ಸ್ ನ ಸಹಾಯಕ ಪ್ರಾಧ್ಯಾಪಕ ಡಾ. ಲೋಕೇಶ್ ಲಿಫ್ಟ್ನಲ್ಲಿ ಕಿಸ್ ಕೊಟ್ಟು ಸಸ್ಪೆಂಡ್ ಆಗಿದ್ದಾರೆ. ಜನವರಿ 12ರಂದು ಕರ್ತವ್ಯದಲ್ಲಿದ್ದಾಗ ಲೈಂಗಿಕ ಕಿರುಕುಳ ನೀಡಿದ್ದಾರೆ ಎಂದು ತರಬೇತಿ ನಿರತ ವೈದ್ಯೆ ವಿಭಾಗದ ಮುಖ್ಯಸ್ಥರಿಗೆ ಲಿಖಿತ ದೂರು ನೀಡಿದ್ದಾರೆ. ತರಬೇತಿ ನಿರತ ವೈದ್ಯೆ ನೀಡಿದ ದೂರನ್ನ ವಿಭಾಗದ ಮುಖ್ಯಸ್ಥರು ಹಿಮ್ಸ್ ನಿರ್ದೇಶಕ ರಿಗೆ ರವಾನೆ ಮಾಡಿದ್ದು, ದೂರು ಆಧರಿಸಿ ವೈದ್ಯಕೀಯ ಶಿಕ್ಷಣ ಇಲಾಖೆ ಡಾಕ್ಟರ್ ಅನ್ನು ಸಸ್ಪೆಂಡ್ ಮಾಡಿ ಆದೇಶ ಹೊರಡಿಸಿದೆ.
ಇಲಾಖಾ ತನಿಖೆ ಕಾಯ್ದಿರಿಸಿ ಡಾಕ್ಟರ್ ಲೋಕೇಶ್ ರನ್ನು ಸಸ್ಪೆಂಡ್ ಮಾಡಲಾಗಿದ್ದು, ಈ ಬಗ್ಗೆ ಹಿಮ್ಸ್ ಆಡಳಿತ ಮಂಡಳಿ ಉಪಾಧ್ಯಕ್ಷ ನವೀನ್ ರಾಜ್ ಸಿಂಗ್ ಆದೇಶ ಹೊರಡಿಸಿದ್ದಾರೆ. ಮೂರು ವಾರದಲ್ಲಿ ತನಿಖೆ ಮಾಡಿ ರಿಪೋರ್ಟ್ ನೀಡಲು ಸೂಚನೆ ನೀಡಲಾಗಿದ್ದು, ಹಾಸನ ಹೆಚ್ಚುವರಿ ಡಿಸಿ ಕವಿತಾ ರಾಜಾರಾಂ ನೇತೃತ್ವದಲ್ಲಿ ತನಿಖೆ ನಡೆಯಲಿದೆ.
ಇದನ್ನೂ ಓದಿ:ರಾಜ್ಯದ ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ ಬ್ಯಾನ್…? ಸಮವಸ್ತ್ರ ಸಂಹಿತೆ ಪರ ಸರಕಾರದ ಒಲವು..!