ಬೆಂಗಳೂರು: ಬಾಂಗ್ಲಾದೇಶದ ಯುವತಿ ಮೇಲೆ ನಡೆದಿದ್ದ ಗ್ಯಾಂಗ್ ರೇಪ್ ಪ್ರಕರಣದಲ್ಲಿ ಕೋರ್ಟ್ ಏಳು ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದೆ.
2021ರ ಮೇ18 ರಂದು ರಾಮಮೂರ್ತಿ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬಾಂಗ್ಲಾ ಯುವತಿ ಮೇಲೆ ಗ್ಯಾಂಗ್ ರೇಪ್ ನಡೆದಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ 54ನೇ ಸಿಸಿಹೆಚ್ ಕೋರ್ಟ್ 9 ಆರೋಪಿಗಳು ತಪ್ಪಿತಸ್ಥರು ಎಂದು ಇಂದು ತೀರ್ಪು ನೀಡಿದೆ. ನ್ಯಾಯಾಧೀಶರಾದ ಎನ್. ಸುಬ್ರಹ್ಮಣ್ಯ ಅವರು 7 ಅಪರಾಧಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿದ್ದರೆ, ಒಬ್ಬ ಆರೋಪಿಗೆ 20 ವರ್ಷ ಮತ್ತು ಮತ್ತೊಬ್ಬ ಅಪರಾಧಿಗೆ 5 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ.
ಇದನ್ನೂ ಓದಿ: ಮೈಸೂರಿನಲ್ಲಿ ಪೊಲೀಸರಿಂದ ತಪ್ಪಿಸಿಕೊಳ್ಳುವಾಗ ರಸ್ತೆ ಅಪಘಾತ..! ಸ್ಥಳದಲ್ಲೇ ಇಬ್ಬರು ಯುವಕರು ಸಾವು.. ಓರ್ವನ ಸ್ಥಿತಿ ಗಂಭೀರ..!
ಮೇ 27ರಂದು ಗ್ಯಾಂಗ್ ರೇಪ್ ಕೇಸ್ ಸಂಬಂಧ ಎಫ್ಐಆರ್ ದಾಖಲಾಗಿತ್ತು, ತನಿಖೆ ನಡೆಸಿದ ರಾಮ ಮೂರ್ತಿ ನಗರ ಪೊಲೀಸರು 12 ಮಂದಿ ಆರೋಪಿಗಳ ವಿರುದ್ಧ ಕೋರ್ಟ್ ಗೆ ಚಾರ್ಜ್ ಶೀಟ್ ಸಲ್ಲಿಸಿದ್ದರು. ಇವರ ಪೈಕಿ ಮೂವರ ವಿರುದ್ಧದ ಆರೋಪ ಸಾಬೀತಾಗಿಲ್ಲ. ಉಳಿದಂತೆ A1 ಸೋಭುಜ್ ಶೇಖ್, A2 ರಿದಯ್ ಬಾಬು, A3 ರಕಿಬುಲ್ ಇಸ್ಲಾಂ ಸಾಗರ್, A4 ಮಹಮ್ಮದ್ ಬಾಬು, A5 ರಫ್ಸಾನ ಮಂಡಲ್, A7 ದಾಲಿಮ್ ಮತ್ತು A8 ಅಜೀಂಗೆ ಜೀವಾವಧಿ ಶಿಕ್ಷೆ ನೀಡಿದ್ದರೆ. A6 ತಾನಿಯಾ ಲೇ ಗೆ 20 ವರ್ಷ ಜೈಲು ಶಿಕ್ಷೆ ಹಾಗೂ A9 ಜಮಾಲ್ಗೆ ಫಾರಿನ್ ಆ್ಯಕ್ಟ್ ಅಡಿ 5 ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.