ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಸದಸ್ಯರಾಗಿ ಹಿರಿಯ ಐಎಎಸ್ ಅಧಿಕಾರಿ ಡಾ.ಸಂಜೀವ್ ಕುಮಾರ್ ನೇಮಕವಾಗಿದ್ದಾರೆ.
ಸುಪ್ರೀಂ ಕೋರ್ಟ್ ನೇತೃತ್ವದ ಕಮಿಟಿ ಡಾ. ಸಂಜೀವ್ ಕುಮಾರ್ರನ್ನು ಆಯ್ಕೆ ಮಾಡಿದೆ. ತಮ್ಮ ಮೌಲ್ಯಯುತ ಸೇವೆ ಮತ್ತು ಕಟ್ಟುನಿಟ್ಟಿನ ಆಡಳಿತದ ಮೂಲಕ ಕಾರ್ಯಾಂಗದಲ್ಲಿ ಡಾ. ಸಂಜೀವ್ ಕುಮಾರ್ ಹೆಸರಾಗಿದ್ದಾರೆ. ಕರ್ನಾಟಕ ಚುನಾವಣಾ ಆಯೋಗದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ ಕೆಲಸ ಮಾಡಿದ್ದ ಸಂಜೀವ್ ಕುಮಾರ್, 2018 ಅಸೆಂಬ್ಲಿ ಚುನಾವಣೆ ಮತ್ತು ಲೋಕಸಭಾ ಚುನಾವಣೆ 2019ರ ಲೋಕಸಭಾ ಚುನಾವಣೆಯ ಸಾರಥ್ಯವಹಿಸಿ ಯಶಸ್ವಿಯಾಗಿ ನಡೆಸಿದ್ದರು. 1986 ಬ್ಯಾಚ್ನ ಐಎಎಸ್ ಅಧಿಕಾರಿ ಸಂಜೀವ್ ಕುಮಾರ್, ಐಎಎಸ್ ಮತ್ತು ಐಪಿಎಸ್ ಹುದ್ದೆಗಳ ಸೇವಾ ವಿವಾದ ಸಂಬಂಧಿಸಿದ ವಿಷಯಗಳನ್ನು ಪರಿಹರಿಸುವ ಮಹತ್ವದ ಹೊಣೆ ಇರುವ ಸಿಎಟಿ ನೇತೃತ್ವ ವಹಿಸಿದ್ದಾರೆ. ಕೇಂದ್ರ ಸರ್ಕಾರದ ನೇಮಕಾತಿ ಮತ್ತು ಸೇವಾ ನಿಯಮಗಳಲ್ಲಿ ಕಂಡುಬರುವ ವ್ಯಾಜ್ಯಗಳಿಗೆ ನ್ಯಾಯ ಒದಗಿಸುವ ಕೆಲಸವನ್ನು ಸಿಎಟಿ ಮಾಡುತ್ತಿದೆ. ಕೋರ್ಟ್ ಗಳಲ್ಲಿರುವ ದೀರ್ಘಕಾಲದ ಸರ್ವಿಸ್ ಮ್ಯಾಟರ್ ಗಳನ್ನು ಶೀಘ್ರವಾಗಿ ಇತ್ಯರ್ಥ ಪಡಿಸುವ ಹೊಣೆಯನ್ನು ಸಮಿತಿ ಹೊತ್ತಿದೆ. ಹೈಕೋರ್ಟ್ ಹಾಲಿ ಅಥವಾ ವಿಶ್ರಾಂತ ನ್ಯಾಯಮೂರ್ತಿಗಳ ಅಧ್ಯಕ್ಷತೆಯಲ್ಲಿ ಸಿಎಟಿ ಕಾರ್ಯನಿರ್ವಹಿಸಲಿದೆ.
ಇದನ್ನೂ ಓದಿ:ಕಾವೇರಿ ನಿಸರ್ಗಧಾಮದ ತೂಗು ಸೇತುವೆಯ ದುರಸ್ತಿ ಕಾರ್ಯ… 1 ತಿಂಗಳ ಕಾಲ ಪ್ರವಾಸಿಗರಿಗೆ ನಿಷೇಧ..!