ಬೆಂಗಳೂರು : ಡೆಲಿವರಿ ಬಾಯ್ ನಿಂದ ಸೆಕ್ಯೂರಿಟಿ ಮೇಲೆ ಹಲ್ಲೆ ನಡೆದಿದ್ದು, ನಗರದ ಸಂಪಿಗೆಹಳ್ಳಿಯಲ್ಲಿ ಘಟನೆ ನಡೆದಿದೆ. ಯುವಕ ಅಪಾರ್ಟ್‌ಮೆಂಟ್ ಗೆ ದಿನಸಿ ವಸ್ತುಗಳನ್ನ ಡೆಲಿವರಿ ಮಾಡಲು ಬಂದಿದ್ದ.
ಯುವಕ ವಾಪಸ್ ಬರುವ ವೇಳೆ ಸೆಕ್ಯೂರಿಟಿ ಗಾರ್ಡ್ ಬ್ಯಾಗ್ ಚೆಕ್ ಮಾಡಬೇಕು ಎಂದಿದ್ದರು. ಬ್ಯಾಗ್ ಚೆಕ್ ಮಾಡಬೇಕು ಎಂದಾಗ ಸೆಕ್ಯೂರಿಟಿ ಮೇಲೆ ಡೆಲಿವರಿ ಬಾಯ್ ಗಲಾಟೆ ಮಾಡಿದ್ದು, ನಂತರ ಪೋನ್ ಮಾಡಿ ಕೆಲವು ಹುಡುಗರನ್ನ ಕರೆಯಿಸಿ ಹಲ್ಲೆ ಮಾಡಿದ್ದಾರೆ. ನಾಲ್ಕೈದು ಜನ ಯುವಕರಿಂದ ಸೆಕ್ಯೂರಿಟಿ ಗಾರ್ಡ್ ಮೇಲೆ ಹಲ್ಲೆ ನಡೆದಿದೆ. ಸ್ಥಳೀಯರು ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸೆಕ್ಯೂರಿಟಿ ಮೇಲಿನ ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಂಪಿಗೆಹಳ್ಳಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಹಲ್ಲೆ ನಡೆಸಿದ ಯುವಕರನ್ನ ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ : ಅಂಬೇಡ್ಕರ್ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಕೆ.ಎಂ. ಸುರೇಶ್ ಕುಮಾರ್ ಸಸ್ಪೆಂಡ್…