ಹಲವಾರು ನಿರ್ಬಂಧಗಳ ನಡುವೆ ಶಾಲೆ ತೆರೆಯಲು ಸಾರ್ವಜನಿಕ ಶಿಕ್ಷಣ ಇಲಾಖೆಯಿಂದ ಮಾರ್ಗಸೂಚಿ ಬಿಡುಗಡೆಯಾಗಿದೆ. ಶಾಲೆಗೆ ಬರುವ ಮಕ್ಕಳು ಕಡ್ಡಾಯವಾಗಿ ಈ ನಿಯಮಗಳನ್ನು ಪಾಲಿಸಲೇಬೇಕು.
ಖಾತೆ ವಿಚಾರ ಇನ್ನೂ ಬಗೆಹರಿದಿಲ್ಲ.. ಟೆನ್ಷನ್ ಮಧ್ಯೆ ರಥ ವೀಕ್ಷಣೆಗೆ ತೆರಳಿದ ಸಚಿವ ಆನಂದ್ ಸಿಂಗ್
ಶಿಕ್ಷಣ ಇಲಾಖೆ ಬಿಡುಗಡೆ ಮಾಡಿರುವ ಎಸ್ ಒ ಪಿ ಯಲ್ಲಿರುವ ಪ್ರಮುಖ ಅಂಶಗಳೆಂದರೆ… ಶಾಲೆ ಆರಂಭ ಮುನ್ನ ತರಗತಿ ಸ್ವಚ್ಚತೆ ಮಾಡಬೇಕು. ಒಂದು ಕೊಠಡಿಯಲ್ಲಿ ಕೇವಲ 20 ಮಕ್ಕಳಿಗೆ ಮಾತ್ರ ಕೂರಲು ಅವಕಾಶ. ಶಾಲಾ ಆವರಣದಲ್ಲಿ ಇತರ ವ್ಯಕ್ತಿಗಳಿಗೆ ನಿರ್ಬಂಧ ವಿಧಿಸಲಾಗಿದೆ. ಒಂದು ಬೆಂಚ್ ನಲ್ಲಿ ಒಂದೇ ಮಗುವಿಗೆ ಕೂರಲು ಅವಕಾಶವಿದೆ. ಮಕ್ಕಳಿಗೆ ಥರ್ಮಲ್ ಸ್ಕ್ಯಾನಿಂಗ್ ಮತ್ತು ಮಾಸ್ಕ್ ಬಳಸುವಂತೆ ಸೂಚನೆ ನೀಡಿದ್ದು, ಕಡ್ಡಾಯವಾಗಿ ವಿದ್ಯಾರ್ಥಿಗಳು ಕೊರೊನಾ ನೆಗಟಿವ್ ರಿಪೋರ್ಟ್ ತರಲೇಬೇಕು. ಬಿಸಿನೀರು , ಸ್ಯಾನಿಟೈಸ್ ಕಡ್ಡಾಯವಾಗಿರಬೇಕು. ಮಕ್ಕಳಿಗೆ ಕೊರೊನಾ ಮಾರ್ಗಸೂಚಿ ಪಾಲಿಸುವಂತೆ ಸೂಚನೆ ನೀಡಲಾಗಿದೆ. ಹೊರಗಡೆಯಿಂದ ಬಂದವರು ಮಕ್ಕಳ ಜೊತೆ ಬೆರೆಯಬಾರದು.
ಇದನ್ನೂ ಓದಿ: ಆಡಳಿತ ಮಾಡಕ್ಕೆ ಆಗ್ಲಿಲ್ಲ ಅಂದ್ರೆ ರಾಜೀನಾಮೆ ಕೊಡಿ..! ಕಾಂಗ್ರೆಸ್, ಬಿಜೆಪಿ ನಡುವೆ ವಾಗ್ವಾದ..
ಯಾರೇ ಆಗಲಿ ಶಾಲೆಯ ಆವರಣದ ಮುಂದೆ ಎಲ್ಲೆಂದರಲ್ಲಿ ಉಗುಳದಂತೆ ಸೂಚನೆ ನೀಡಲಾಗಿದೆ. ಇನ್ನು ಕೋವಿಡ್ ಇರುವ ಜಿಲ್ಲೆಗಳಲ್ಲಿ ಅರ್ಧ ದಿನ ಬೆಳಗಿನ ಅವಧಿಯಲ್ಲಿ ಶಾಲೆ ತೆರೆಯಲು ಮಾತ್ರ ಅವಕಾಶವಿದೆ. 9 ರಿಂದ 10 ನೇ ತರಗತಿ ವಿದ್ಯಾರ್ಥಿಗಳು ಮನೆಯಿಂದಲೇ ಕುಡಿಯುವ ನೀರು ತರಬೇಕು. ಮಕ್ಕಳು ಶಾಲೆಗೆ ಹಾಜರಾಗುವ ಮುನ್ನ ಅನುಮತಿ ಪತ್ರ ತರಲೇಬೇಕಾಗಿದ್ದು, ಅನುಮತಿ ಪತ್ರದಲ್ಲಿ ಕೋವಿಡ್ ಸೋಂಕು ಇಲ್ಲವೆಂಬ ನೆಗಟಿವ್ ರಿಪೋರ್ಟ್ ಇರುವುದು ಕಡ್ಡಾಯವಾಗಿದೆ. ಇನ್ನು ಶಿಕ್ಷಕರು ಮತ್ತು ಸಿಬ್ಬಂದಿ ಒಂದು ಡೋಸ್ ಲಸಿಕೆ ಪಡೆದಿರಬೇಕು. ಆನ್ ಲೈನ್ , ಆಫ್ ಲೈನ್ ಎರಡಕ್ಕೂ ಅವಕಾಶ ಮಾಡಿಕೊಡಲಾಗಿದೆ.