ಕೊರೋನಾ ನಡುವೆಯೂ ನಾಳೆಯಿಂದ ಶಾಲಾ-ಕಾಲೇಜುಗಳು ಆರಂಭವಾಗಲಿದ್ದು, 5 ತಿಂಗಳ ಬಳಿಕ ತರಗತಿಗಳು ಶುರುವಾಗುತ್ತಿದೆ. ವಸತಿ ಶಾಲೆಗಳ ಆರಂಭಕ್ಕೂ ಗ್ರೀನ್ ಸಿಗ್ನಲ್ ನೀಡಲಾಗಿದ್ದು, ಪಾಸಿಟಿವಿಟಿ ರೇಟ್ ಶೇ.2ಕ್ಕಿಂತ ಕಮ್ಮಿ ಇರೋ ಕಡೆ ತರಗತಿ ಸ್ಟಾರ್ಟ್ ಆಗಲಿದ್ದು, ಯಾವುದೇ ಆತಂಕವಿಲ್ಲದೆ ಮಕ್ಕಳು ಶಾಲೆಗೆ ಬರಬಹುದು ಎಂದು ಸಿಎಂ ಬೊಮ್ಮಾಯಿ ತಿಳಿಸಿದ್ದಾರೆ.
ಜಯನಗರದ ಶಿವಾಜಿ ಮಿಲಿಟರಿ ಹೋಟೆಲ್ ಬಗ್ಗೆ ನೆಟ್ಟಿಗರಿಂದ ಆಕ್ರೋಶ… ಫೇಸ್ ಬುಕ್ ನಲ್ಲಿ ವ್ಯಾಪಕ ಚರ್ಚೆ…!
9 ರಿಂದ 12ನೇ ಕ್ಲಾಸಿನ ಭೌತಿಕ ತರಗತಿ ನಡೆಯಲಿದ್ದು, ಹೈಸ್ಕೂಲ್ ಹಾಗೂ ಪಿಯು ಮಕ್ಕಳಿಗೆ ಭೌತಿಕ ತರಗತಿ. ಈಗಾಗಲೇ ಸರ್ಕಾರ ಮಾರ್ಗಸೂಚಿ ಬಿಡುಗಡೆ ಮಾಡಇದ್ದು, ಇದರ ಪ್ರಕಾರವೇ ಶಾಲಾ- ಕಾಲೇಜು ಆರಂಭವಾಗಲಿದೆ. ತರಗತಿ ನಡೆಸಲು ಎಲ್ಲಾ ರೀತಿಯ ತಯಾರಿ ನಡೆಸಿರುವ ಸರ್ಕಾರ, ಪೋಷಕರ ಅನುಮತಿ ಮೇರೆಗೆ ಮಕ್ಕಳು ಶಾಲೆಗೆ ತೆರಳಬಹುದು ಎಂದು ತಿಳಿಸಿದೆ. ಇನ್ನು ಶಾಲೆ ಪ್ರಾರಂಭ ಬಗ್ಗೆ ಸಿಎಂ ಬೊಮ್ಮಾಯಿ ಪ್ರತಿಕ್ರಿಯೆ ನೀಡಿದ್ದು, ಯಾವುದೇ ಆತಂಕ ಇಲ್ಲದೆ ಮಕ್ಕಳು ಶಾಲೆಗೆ ಬರಬಹುದು
ಬೆಂಗಳೂರಿನ ಕೆಲ ಶಾಲೆಗಳಿಗೆ ನಾನು, ಶಿಕ್ಷಣ ಸಚಿವರು ಭೇಟಿ ನೀಡ್ತೀವಿ ಎಂದು ತಿಳಿಸಿದ್ದಾರೆ.
ಸರ್ಕಾರ ಬಿಡುಗಡೆ ಮಾಡಿರುವ ಮಾರ್ಗಸೂಚಿಯಲ್ಲಿ ಏನೇನಿದೆ?
ಶಾಲಾ- ಕಾಲೇಜು ಆವಾರಣದಲ್ಲಿ ಸಾಮಾಜಿಕ ಅಂತರ ಕಡ್ಡಾಯ, ಶಿಕ್ಷಕರು, ಸಿಬ್ಬಂದಿ ಮತ್ತು ವಿದ್ಯಾರ್ಥಿಗಳಿಗೆ ಮಾಸ್ಕ್ ಕಡ್ಡಾಯ,
ವಿದ್ಯಾರ್ಥಿಗೆ ಕೋವಿಡ್ ನೆಗೆಟಿವ್ ರಿಪೋರ್ಟ್ ಕಡ್ಡಾಯ, ಪ್ರತಿ ವಿದ್ಯಾರ್ಥಿಯಿಂದ ಆರೋಗ್ಯದ ಸ್ಥಿತಿಯ ಬಗ್ಗೆ ವಿವರ ಪಡೆಯಬೇಕು.
ಶಾಲಾ-ಕಾಲೇಜಿಗೆ ಹಾಜರಾತಿ ಕಡ್ಡಾಯ ವಲ್ಲ, ತರಗತಿಗಳು, ಶೌಚಾಲಯ, ಪೀಠೋಪಕರಣಗಳ ಕ್ಲೀನಿಂಗ್ಗೆ ಸೂಚಿಸಲಾಗಿದ್ದು,
ಒಂದು ಕೊಠಡಿಯಲ್ಲಿ 20, ಒಂದು ಬೆಂಚಿನಲ್ಲಿ ಇಬ್ಬರು ವಿದ್ಯಾರ್ಥಿಗೆ ಮಾತ್ರ ಅವಕಾಶ. ಶಿಕ್ಷಕ ಹಾಗೂ ಶಾಲಾ ಸಿಬ್ಬಂದಿಗೆ ವ್ಯಾಕ್ಸಿನ್ ಕಡ್ಡಾಯ.
ಶಿಕ್ಷಕರು ಶಾಲೆಗೆ ಹಾಜರಾಗುವಾಗ ನೆಗೆಟಿವ್ ರಿಪೋರ್ಟ್ ಸಲ್ಲಿಸಬೇಕು, ಪ್ರತಿ ಶಾಲೆಯಲ್ಲಿ ಶಿಕ್ಷಕರೇ ನೋಡಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸಬೇಕು. ಪೋಷಕರೊಂದಿಗೆ ಸಭೆ ನಡೆಸಿ ನಿಯಮ ಅನುಷ್ಠಾನಕ್ಕೆ ಸಹಕರಿಸುವಂತೆ ಮನವರಿಕೆ ಮಾಡಬೇಕು.
ಕಡ್ಡಾಯವಾಗಿ ಪೋಷಕರಿಂದ ಲಿಖಿತ ಅನುಮತಿ ಪತ್ರ ಪಡೆಯಬೇಕು. ಕೋವಿಡ್ ಪ್ರಮಾಣ ಹೆಚ್ಚಿರುವ ಜಿಲ್ಲೆಗಳಲ್ಲಿ ಅರ್ಧದಿನ ಮಾತ್ರ ಶಾಲೆ ಓಪನ್ ಆಗಿರುತ್ತದೆ. 2ಕ್ಕಿಂದ ಹೆಚ್ಚು ಪಾಸಿಟಿವಿಟಿ ರೇಟ್ ಇರೊ ಜಿಲ್ಲೆಗಳಲ್ಲಿ ಶಾಲೆ ಬಂದ್ ಮಾಡಲಾಗುತ್ತದೆ.
ಇದನ್ನೂ ಓದಿ:ಯುಪಿ ಮಾಜಿ ಸಿಎಂ ಕಲ್ಯಾಣ್ ಸಿಂಗ್ ಇನ್ನಿಲ್ಲ..! ಬಿಜೆಪಿಯ ಮೊದಲ ಸಿಎಂ ಇನ್ನು ನೆನಪು ಮಾತ್ರ..!