ಕೊರೊನಾ ಹಾವಳಿ ವಿಶ್ವವನ್ನೇ ತಲ್ಲಣಗೊಳಿಸಿದೆ. ಈ ನಡುವೆ ವಿಶ್ವದ ಎಲ್ಲಾ ರಾಷ್ಟ್ರಗಳು ಕೊರೋನಾಗೆ ಲಸಿಕೆ ಕಂಡುಹಿಡಿಯಲು ಹಲವಾರು ಪ್ರಯೋಗಗಳನ್ನು ನಡೆಸುತ್ತಲೇ ಬಂದಿದ್ದಾರೆ. ಈ ನಡುವೆ ಭಾರತದಲ್ಲಿ ಕೊರೋನಾ ಸೋಂಕಿಗೆ ಎರಡು ಲಸಿಕೆಗಳು ತಯಾರಾಗಿದೆ. ಇದರ ನಡುವಲ್ಲೇ ಇಂದು ಭಾರತದ ಅನೇಕ ರಾಜ್ಯಗಳಿಗೆ ಡಿಸ್ಪಾಚ್ ಆಗಿರುವ ಕೋವಿಶೀಲ್ಡ್ ಲಸಿಕೆಯ ಮೇಲೆ ಬರೆದಿರುವ ಸಂಸ್ಕೃತ ಶ್ಲೋಕವೊಂದು ಎಲ್ಲರ ಗಮನ ಸೆಳೆದಿದೆ. ಹಾಗಾದ್ರೆ ಲಸಿಕೆಯ ಕೋಲ್ಡ್ ಬಾಕ್ಸ್ ಮೇಲೆ ಬರೆದಿದ್ದೇನು..? ಈ ಸ್ಟೋರಿ ನೋಡಿ..!
ಕಳೆದ ಒಂದು ವರ್ಷದಿಂದ ಕೊರೋನಾ ಸೋಂಕು ವಿಶ್ವದಾದ್ಯಂತ ಮಾಡಿರುವ ಹಾವಳಿ ಅಷ್ಟಿಷ್ಟಲ್ಲ.. ಈ ನಡುವೆ ಭಾರತ ನಿರ್ಮಿತ ಎರಡು ವ್ಯಾಕ್ಸಿನ್ಗಳು ವಿಶ್ವಸಂಸ್ಥೆಯಿಂದ ಮಾನ್ಯತೆ ಪಡೆದಿದೆ. ಇನ್ನು ಪೂನೆಯ ಸೆರಂ ಲ್ಯಾಬ್ನಿಂದ ಎಲ್ಲಾ ರಾಜ್ಯಗಳಿಗೂ ಕೋವಿಶೀಲ್ಡ್ ಲಸಿಕೆ ಕಳುಹಿಸಲಾಗುತ್ತಿರುವ ನಡುವೆ , ಸೆರಂ ಇನ್ಸ್ಟಿಟ್ಯೂಟ್ನ ಮುಖ್ಯಸ್ಥ ಪೂನಾವಾಲಾ ಟ್ವೀಟ್ ಮಾಡಿದ್ದು, ಅಂದುಕೊಂಡಂತೆ ವ್ಯಾಕ್ಸಿನ್ ಕೊಟ್ಟ ಸಾರ್ಥಕ ಭಾವ ನಮ್ಮಲ್ಲಿದೆ ಎಂದಿದ್ದಾರೆ, ಇನ್ನು ಕೋವಿಶೀಲ್ಡ್ ವ್ಯಾಕ್ಸಿನ್ ಬಾಕ್ಸ್ನಲ್ಲಿ ಸಂಸ್ಕೃತ ಶ್ಲೋಕವಾದ “ಸರ್ವೇ ಸಂತು ನಿರಾಮಯ” ಎಂದು ಬರೆಯಲಾಗಿದ್ದು ಎಲ್ಲರ ಗಮನ ಸೆಳೆಯುತ್ತಿದೆ. ಕೋವಿಶೀಲ್ಡ್ ವ್ಯಾಕ್ಸಿನ್ ಬಾಕ್ಸ್ನಲ್ಲಿ ವ್ಯಾಕ್ಸಿನ್ ಬಗ್ಗೆ ಮಾಹಿತಿಯ ಜೊತೆಗೆ ಸಂಸ್ಕೃತದಲ್ಲಿ ಸರ್ವೇ ಸಂತು ನಿರಾಮಯ ಮತ್ತು ಇಂಗ್ಲಿಷ್ನಲ್ಲಿ May All Be Free From Disease ಎಂದು ಬರೆಯಲಾಗಿದೆ. ಒಟ್ಟಿನಲ್ಲಿ ಲಸಿಕೆ ವಿಶ್ವದ ಗಮನ ಸೆಳೆಯುವುದರ ಜೊತೆಯಲ್ಲೇ ಸಂಸ್ಕೃತದ ಈ ಘೋಷ ವಾಕ್ಯ ಕೂಡಾ ಗಮನ ಸೆಳೆದಿರುವುದಂತೂ ಸುಳ್ಳಲ್ಲ..!
ಇನ್ನು ಕೋವಿಶೀಲ್ಡ್ ವ್ಯಾಕ್ಸಿನ್ನ ಒಂದು ಬಾಕ್ಸ್ನಲ್ಲಿ 10 ಡೋಸೆಜ್ನ 1200ವಯಲ್ಸ್ಗಳಿದ್ದು, ಈ ವ್ಯಾಕ್ಸಿನ್ ಅನ್ನು +2ಡಿಗ್ರಿ ಸೆಲ್ಸಿಯಸ್ನಿಂದ +8 ಡಿಗ್ರಿ ಸೆಲ್ಸಿಯಸ್ನಲ್ಲಿ ಶೇಖರಿಸಿ ಇಡಬೇಕು ಎಂದು ಬರೆದಿದೆ.