ಬೆಂಗಳೂರು : ಸ್ಯಾಂಟ್ರೋ ರವಿ ಆ ವಿಷಯ ಮುಚ್ಚಿಟ್ಟಿದ್ನಾ , ಸ್ಯಾಂಟ್ರೋ ರವಿ ಪತ್ನಿಗೆ ಆ ವಿಷ್ಯ ಗೊತ್ತೇ ಇರಲಿಲ್ವಾ..?
ಆ ವಿಷ್ಯ ತಿಳಿದುಕೊಳ್ಳೋಕೆ ನಾಲ್ಕು ವರ್ಷ ಬೇಕಾಯ್ತಾ..? ಸ್ಯಾಂಟ್ರೋ ರವಿಯ ಮತ್ತೊಂದು ಸೀಕ್ರೆಟ್ ಔಟ್ ಆಗಿದ್ದು,
ಸಿಐಡಿ ತನಿಖೆ ವೇಳೆ ಕುತೂಹಲದ ಸಂಗತಿ ಬೆಳಕಿಗೆ ಬಂದಿದೆ.
ಸ್ಯಾಂಟ್ರೋ ರವಿ ವಿಗ್ ಸೀಕ್ರೆಟ್ ವಿಚಾರಣೆ ವೇಳೆ ಬಯಲಾಗಿದೆ. ಗಂಡ ವಿಗ್ ಹಾಕುವ ವಿಚಾರ ಸ್ವತಃ ಪತ್ನಿಗೇ ಗೊತ್ತಿರಲಿಲ್ಲ, ನಾಲ್ಕು ವರ್ಷದ ನಂತರ ಗಂಡನ ಒರಿಜಿನಲ್ ವೇಷ ಕಂಡು ಸ್ಯಾಂಟ್ರೋ ಪತ್ನಿ ತಬ್ಬಿಬ್ಬಾಗಿದ್ದಾಳೆ. ಸ್ಯಾಂಟ್ರೋ ರವಿ ಪ್ರತಿ ಕ್ಷಣ ವಿಗ್ ಧರಿಸಿಯೇ ಇರ್ತಾ ಇದ್ದನು. ಸ್ನಾನ ಮಾಡಿದ್ರೂ, ತಲೆ ಬಾಚಿದ್ರೂ ಗೊತ್ತಾಗ್ತಾ ಇರಲಿಲ್ಲ, ತನ್ನ ಪತ್ನಿಗೂ ತಿಳಿಯದಂತೆ ವಿಗ್ ಮೇಂಟೇನ್ ಮಾಡ್ತಿದ್ದ. ಸ್ನಾನದ ಕೋಣೆ, ಪ್ರೈವೇಟ್ ರೂಂಗೆ ಹೆಂಡ್ತಿಯನ್ನೂ ಬಿಡ್ತಿರಲಿಲ್ಲವಂತೆ.
ಅರೆಸ್ಟ್ ಮಾಡಿ ಫೋಟೋ ರಿಲೀಸ್ ಮಾಡಿದಾಗಲೇ ವಿಗ್ ಅಸಲಿ ಕಥೆ ಬಯಲಾಗಿದೆ. ಅಲ್ಲಿಯವರೆಗೆ ಸ್ಯಾಂಟ್ರೋ ರವಿ ವಿಗ್ ಧರಿಸುವ ವಿಚಾರ ಪತ್ನಿಗೆ ಗೊತ್ತಿರಲಿಲ್ಲ. ಪತ್ನಿ ಪೊಲೀಸರ ಫೋಟೋ ನೋಡಿ ಇದು ಸ್ಯಾಂಟ್ರೋ ರವಿ ನಾ ಎಂದುಕೊಂಡಿದ್ದು, ಸ್ಯಾಂಟ್ರೋ ರವಿ ವಿಗ್ ವಿಚಾರ ಪತ್ನಿಗೆ ತಿಳಿಸದೇ ಮುಚ್ಚಿಟ್ಟಿದ್ದನು. ಸ್ಯಾಂಟ್ರೋ ಪತ್ನಿ ನಿನ್ನೆ ವಿಚಾರಣೆ ಸಂದರ್ಭದಲ್ಲಿ ವಿಗ್ ವಿಷ್ಯ ಬಿಚ್ಚಿಟ್ಟಿದ್ದಾರೆ.
ಇದನ್ನೂ ಓದಿ : ಡೇಟಿಂಗ್ ಆ್ಯಪ್ ಮೂಲಕ ಪ್ರೀತಿ, ಮದುವೆ… ಬೆಂಗಳೂರಿನಲ್ಲಿ ಅಕ್ರಮವಾಗಿ ನೆಲೆಸಿದ್ದ ಪಾಕ್ ಮಹಿಳೆ ಬಂಧನ…