ಬೆಂಗಳೂರು : CID ಮುಂದೆ ಸ್ಯಾಂಟ್ರೋ ರವಿ ಪತ್ನಿ ಹಾಜರು ಸಾಧ್ಯತೆಗಳಿದೆ. ರವಿ ಪತ್ನಿ ಇಂದು ಸಿಐಡಿ DySP ನರಸಿಂಹಮೂರ್ತಿ ಮುಂದೆ ಹಾಜರಾಗಲಿದ್ದು, ತನ್ನ ಮೇಲಾದ ದೌರ್ಜನ್ಯದ ಬಗ್ಗೆ ಹೇಳಿಕೆ ನೀಡಲಿದ್ದಾರೆ. CID ಸಂತ್ರಸ್ತೆ ಹೇಳಿಕೆ ಬಳಿಕ ಮಹಜರು ಪ್ರಕ್ರಿಯೆ ನಡೆಸಲಿದ್ದಾರೆ. ಸ್ಯಾಂಟ್ರೋ ರವಿ ಪತ್ನಿ ಹಾಜರಿಂದ ಹಲವು ಮಾಹಿತಿ ಲಭ್ಯ ಸಾಧ್ಯತೆಗಳಿವೆ. ಸಿಐಡಿ ಹಲವು ವಿಚಾರಗಳ ಕುರಿತು ಮಾಹಿತಿ ಕಲೆಹಾಕಲಿದ್ದಾರೆ.
ಸ್ಯಾಂಟ್ರೋ ಪತ್ನಿಯ ಹೇಳಿಕೆಯನ್ನ ಲಿಖಿತ ರೂಪದಲ್ಲಿ ಪಡೆಯುತ್ತಾರೆ. ಮಹಿಳಾ ಅಧಿಕಾರಿಯಿಂದ ಸ್ಯಾಂಟ್ರೋ ರವಿ ಪತ್ನಿಯ ವಿಚಾರಣೆ ನಡೆಸಲಾಗುತ್ತದೆ. ಮಹಿಳಾ ತಂಡ ವಿಚಾರಣೆ ಮೂಲಕ ಪತ್ನಿಯ ಹೇಳಿಕೆ ಪಡೆಯಲಿದ್ದಾರೆ. ವಿಚಾರಣೆ ಬಳಿಕ ಶೇಷಾದ್ರಿಪುರಂ ಬಳಿ ವಾಸವಿದ್ದ ಫ್ಲ್ಯಾಟ್ಗೆ ಮಹಜರು ಮಾಡಲಾಗುತ್ತದೆ. ಬಸವನಗುಡಿಯಲ್ಲಿರೋ ಮನೆಗೂ ಸಂತ್ರಸ್ತೆಯನ್ನ ಕರೆದೊಯ್ಯಲಾಗುತ್ತೆ , ಗರ್ಭಪಾತ ನಡೆದಿದೆ ಎನ್ನಲಾದ ಆಸ್ಪತ್ರೆಗೂ ಕರೆದೊಯ್ಯುವ ಸಾಧ್ಯತೆಗಳಿವೆ. CID ಪಂಚನಾಮೆಗೆ ಇಬ್ಬರು ಅಧಿಕಾರಿಗಳನ್ನ ಕರೆದೊಯ್ಯಲಿದ್ದಾರೆ. ಈಗಾಗಲೇ ಮಹಜರು ಪ್ರಕ್ರಿಯೆಗೆ ಹಾಜರಾಗುವಂತೆ CID ನೋಟಿಸ್ ನೀಡಿದ್ದಾರೆ.
ಇದನ್ನೂ ಓದಿ : ವಿಜಯಪುರದ ಸಿಂಧಗಿ ಕ್ಷೇತ್ರದ JDS ಅಭ್ಯರ್ಥಿ ಶಿವಾನಂದ ಸೋಮಜಾಳ ನಿಧನಕ್ಕೆ HDK ಸಂತಾಪ…