ಬೆಂಗಳೂರು : ಸಿದ್ದು ಸರ್ಟಿಫಿಕೇಟ್ ನನಗೆ ಬೇಕಿಲ್ಲ, ಅವರ ಕಾಲದಲ್ಲಿ ಹೇಗೆ ನಿಭಾಯಿಸಿದ್ರು..? ಪೊಲೀಸ್ ಸಿಬ್ಬಂದಿ ಬೀದಿಗೆ ಬಂದು ಹೋರಾಡಿದ್ರು, ಒಂದೊಂದು ಸ್ಟೇಷನ್ ವರ್ಗಾವಣೆಗೂ ಹಣ ಫಿಕ್ಸ್ ಆಗಿತ್ತು ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ಗುಡುಗಿದ್ದಾರೆ.
ಬೆಂಗಳೂರಿನಲ್ಲಿ ಆರಗ ಜ್ಞಾನೇಂದ್ರ ಮಾತನಾಡಿ ನಮ್ಮ ಸರ್ಕಾರದ ಬಂದ್ಮೇಲೆ ಇದೆಲ್ಲಾ ಸರಿ ಹೋಗಿದೆ. ಸ್ಯಾಂಟ್ರೋ ರವಿ ಕೇಸ್ ಮುಕ್ತ ತನಿಖೆ ಆಗುತ್ತೆ, ಸ್ಯಾಂಟ್ರೋ ಸಂಪರ್ಕದ ಮಾಹಿತಿ ಕಲೆ ಹಾಕ್ತಿದ್ದಾರೆ. ಅವರ ಅವಧಿಯಲ್ಲೂ ಈತ ಇರಲಿಲ್ಲವೇ..?
20 ವರ್ಷದಿಂದ ಸ್ಯಾಂಟ್ರೋ ಈ ಮಟ್ಟಕ್ಕೆ ಬೆಳೆದಿದ್ದಾನೆ, ಮುಂದಿನ ಮೂರು ತಿಂಗಳಲ್ಲಿ ಇವರ ಬಣ್ಣ ಬಯಲಾಗುತ್ತೆ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ : ಹಾಸನದಲ್ಲಿ ನಾನೇ ಜೆಡಿಎಸ್ ಅಭ್ಯರ್ಥಿ.. ಸ್ಪರ್ಧೆ ಗುಟ್ಟು ರಟ್ಟು ಮಾಡಿದ ಭವಾನಿ ರೇವಣ್ಣ…