ಬೆಂಗಳೂರು: ಬಹುಭಾಷಾ ನಟಿ ಸಂಜನಾ ಗಲ್ರಾನಿ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಸಂಜನಾ ಗಲ್ರಾನಿ ಗಂಡು ಮಗುವಿಗೆ ಜನ್ಮ ನೀಡಿದ್ದರೆ, ಸಂಜನಾ ತಂಗಿ ನಿಕ್ಕಿ ಗಲ್ರಾನಿ ಮತ್ತು ಖ್ಯಾತ ನಟ ಆದಿ ಪಿನಿಸೆಟ್ಟಿ ಅವರ ವಿವಾಹ ಇಂದು ನೆರವೇರಿದೆ. ಈ ಹಿನ್ನೆಲೆಯಲ್ಲಿ ಇಂದು ಸಂಜನಾ ಕುಟುಂಬದಲ್ಲಿ ದುಪ್ಪಟ್ಟು ಸಂಭ್ರಮ ಮನೆ ಮಾಡಿದೆ.
ಸಂಜನಾ ಗಲ್ರಾನಿ 2020 ರಲ್ಲಿ ಡಾ. ಅಜೀಜ್ ಪಾಷಾ ಅವರನ್ನು ವಿವಾಹವಾಗಿದ್ದರು. ಸಂಜನಾ ಗಲ್ರಾನಿ ಇತ್ತೀಚೆಗೆ ಬೇಬಿ ಬಂಪ್ ಫೋಟೋಶೂಟ್ ನ ಫೋಟೋಗಳನ್ನು ಹಂಚಿಕೊಂಡಿದ್ದರು. ಬಳಿಕ ಸೀಮಂತ ಶಾಸ್ತ್ರದ ಫೋಟೋಗಳನ್ನು ಹಂಚಿಕೊಂಡಿದ್ದರು. ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಂಜನಾ ಗಂಡು ಮಗುವಿಗೆ ಜನ್ಮ ನೀಡಿದ್ದು, ತಾಯಿ ಮತ್ತು ಮಗು ಆರೋಗ್ಯವಾಗಿದ್ದಾರೆ.