ಮುಂಬೈ: 24 ಗಂಟೆಯೊಳಗೆ ಮುಂಬೈಗೆ ಬನ್ನಿ ಎಂದು ಏಕನಾಥ್ ಶಿಂಧೆ ಟೀಂ ಗೆ ಸಂಜಯ್ ರಾವತ್ ಡೆಡ್ ಲೈನ್ ನೀಡಿದ್ದಾರೆ.
ಉದ್ಧವ್ ಠಾಕ್ರೆ ನಿವಾಸದ ಬಳಿ ಮಾತನಾಡಿದ ಸಂಜಯ್ ರಾವತ್ ಜಾರಿ ನಿರ್ದೇಶನಾಲಯದ (ಇಡಿ) ಭೀತಿಯಿಂದ ಏಕನಾಥ್ ಶಿಂಧೆ ಈ ರೀತಿ ಮಾಡುತ್ತಿದ್ದಾರೆ. ವಿಶ್ವಾಸ ಮತ ಯಾಚನೆ ವೇಳೆ ಎಲ್ಲರ ಬಣ್ಣ ಬಯಲಾಗುತ್ತದೆ. ಕೂಡಲೇ ಎಲ್ಲಾ ಶಾಸಕರೂ ಮುಂಬೈಗೆ ಬರಲಿ. ಯಾರಿಗೆ ಶಾಸಕರ ಬೆಂಬಲ ಇದೆ ಅನ್ನೋದು ಗೊತ್ತಾಗುತ್ತೆ. ನಾವು ವಿಶ್ವಾಸ ಮತ ಪರೀಕ್ಷೆಯಲ್ಲಿ ಗೆದ್ದೇ ಗೆಲ್ಲುತ್ತೇವೆ. ಎಂದು ಏಕನಾಥ್ ಶಿಂಧೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.