ಕಿಚ್ಚ ಸುದೀಪ್ ಸಹಾಯ ಮಾಡೋದರಲ್ಲಿ ಎತ್ತಿದ ಕೈ. ಅವರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಬಡ ಜನರಿಗೆ, ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಿನ ಹಸ್ತ ಚಾಚಿದ್ದಾರೆ. ಅಲ್ಲದೆ ಲಾಕ್ ಡೌನ್ ನಿಂದ ಸಂಕಷ್ಟಕ್ಕೆ ಸಿಲುಕಿದ ಜನರ ಕಷ್ಟಕ್ಕೂ ಟ್ರಸ್ಟ್ ನೆರವಾಗಿದೆ. ಆಹಾರ, ದಿನಸಿ ಹಂಚುವ ಮೂಲಕ ಕಷ್ಟದಲ್ಲಿದ್ದರ ನೆರವಿಗೆ ದಾವಿಸಿತ್ತು. ಇತ್ತೀಚಿಗೆ ಮುಸ್ಲಿಂ ಯುವತಿಯೊಬ್ಬರ ಮದುವೆಗೂ ಸುದೀಪ್ ಚಾರಿಟೇಬಲ್ ಟ್ರಸ್ಟ್ ಹಣಕಾಸಿನ ನೆರವು ನೀಡಿತ್ತು. ಇದೀಗ ಅಭಿನಯ ಚಕ್ರವರ್ತಿ ಸರ್ಕಾರಿ ಶಾಲೆಯನ್ನು ದತ್ತು ತೆಗೆದುಕೊಳ್ಳುವ ಮೂಲಕ ಅದರ ಅಭಿವೃದ್ಧಿಗೆ ಕೈಜೋಡಿಸಿದ್ದಾರೆ.
ಸರ್ಕಾರಿ ಶಾಲೆಗಳು ಮುಚ್ಚುವ ಸ್ಥಿತಿಯಲ್ಲಿರುವುದು ಕಳವಳದ ಸಂಗತಿಯಾಗಿದ್ದು, ಅಳಿವಿನ ಅಂಚಿನಲ್ಲಿರುವ ಸರ್ಕಾರಿ ಶಾಲೆಗಳನ್ನು ಉಳಿಸುವ ಆಭಿಯಾನದಲ್ಲಿ ಅನೇಕರು ಕೈಜೋಡಿಸುತ್ತಿದ್ದಾರೆ. ಇತ್ತೀಚಿಗೆ ಸ್ಯಾಂಡಲ್ ವುಡ್ ನಿರ್ದೇಶಕ ರಿಷಬ್ ಶಿಟ್ಟಿ, ನಟಿ ಪ್ರಣೀತಾ, ಅಕುಲ್ ಬಾಲಾಜಿ ಸೇರಿದ್ದಂತೆ ಅನೇಕರು ಸರ್ಕಾರಿ ಶಾಲೆಯನ್ನು ದತ್ತು ಪಡೆದು ಅಭಿವೃದ್ದಿ ಪಡಿಸುವ ಕೆಲಸ ಮಾಡಿದ್ದಾರೆ.
ಈಗ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಸಹ ನಾಲ್ಕು ಸರ್ಕಾರಿ ಶಾಲೆಯನ್ನು ದತ್ತು ಪಡೆದಿದ್ದಾರೆ. ಸುದೀಪ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ 4 ಶಾಲೆಯನ್ನು ದತ್ತು ಪಡೆದಿದ್ದು, ಚಿತ್ರದುರ್ಗ ಜಿಲ್ಲೆಯ ಪಿ. ಒಬವನಹಳ್ಳಿ, ಚಳ್ಳಕೆರೆ ಶಾಲೆ, ಪರುಶರಾಂಪುರ ಶಾಲೆ ಮತ್ತು ಚಿತ್ರದುರ್ಗದ ಶಾಲೆಯನ್ನುದತ್ತು ಪಡೆದು ಶಾಲೆಯ ಸಂಪೂರ್ಣ ಅಭಿವೃದ್ಧಿಯನ್ನು ವಹಿಸಿಕೊಂಡಿದ್ದಾರೆ.
ಐದು ದಿನ ಕಳೆದರೂ ‘ಸಾಧನೆ’ಗೆ ದಾಖಲೆ ಒದಗಿಸದ ಡ್ರೋಣ್ ಪ್ರತಾಪ್ ! ಮಳೆ ಟೈಮಲ್ಲಿ ಗಾಳಿಪಟ ಹಾರಿಸಿದ ಪ್ರತಾಪ್ !
ಶಾಲೆಯ ಮೂಲ ಸೌಕರ್ಯ, ಪೀಠೋಪಕರಣ, ಗುಣಮಟ್ಟದ ಶಿಕ್ಷಣ ಸೇರಿದ್ದಂತೆ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಕರೆತರುವ ಪ್ರಯತ್ನ ಈ ಮೂಲಕ ಮಾಡಲಾಗುತ್ತಿದೆ. ಜೊತೆಗೆ ಅನೇಕ ಯೋಜನೆಗಳನ್ನು ಟ್ರಸ್ಟ್ ಹಮ್ಮಿಕೊಂಡಿದೆ.
ಒಟ್ನಲ್ಲಿ ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿಕೊಂಡು ಬರುತ್ತಿರುವ ಸುದೀಪ್ ಚಾರಿಟೇಬಲ್ ಟ್ರಸ್ಟ್ ಈಗ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಮುಂದಾಗಿರುವುದು ಖುಷಿಯ ವಿಚಾರ. ಈ ಟ್ರಸ್ಟ್ ಮತ್ತಷ್ಟು ಒಳ್ಳೆಯ ಕೆಲಸಗಳನ್ನು ಮಾಡಲಿ ಎನ್ನುವುದು ನಮ್ಮ ಮತ್ತು ಅಭಿಮಾನಿಗಳ ಆಶಯ.