ಶ್ರೀಮುರಳಿ.. ಸ್ಯಾಂಡಲ್ವುಡ್ನ ಟಾಪ್ ಸ್ಟಾರ್ಸ್ ಲೀಸ್ಟ್ನಲ್ಲಿರೋ ಹೀರೋ. ‘ಉಗ್ರಂ’ ‘ಮಫ್ತಿ’,‘ ರಥಾವರ’ ‘ಭರಾಟೆ’ ಹೀಗೆ ಬ್ಯಾಕ್ ಟು ಬ್ಯಾಕ್ ಸಕ್ಸಸ್ ಕಂಡತಹ ರೋರಿಂಗ್ ಸ್ಟಾರ್, ಈಗ ‘ಮದಗಜ’ನ್ನಾಗಿ ರಾ ಲುಕ್ನಲ್ಲಿ ಎಂಟ್ರಿ ಕೊಡೋಕ್ಕೆ ರೆಡಿಯಾಗಿದ್ದಾರೆ..ಸದ್ಯ ಎರಡನೇ ಹಂತದ ಶೂಟಿಂಗ್ ಶುರುವಾಗಿದ್ದು, ಉಗ್ರಂಸ್ಟಾರ್ ರೌದ್ರವತಾರಕ್ಕೆ ಮುಹೂರ್ತ ಫಿಕ್ಸ್ ಆಗಿದೆ..ಹಾಗಾದ್ರೆ ಶ್ರೀಮುರುಳಿಯ ಮದಗಜ ಅವತಾರದ ಅಬ್ಬರ ಯಾವಾಗ ಅಂತ ಯೋಚನೆ ಮಾಡ್ತಿದ್ದೀರಾ..?
ಸ್ಯಾಂಡಲ್ವುಡ್ನಲ್ಲಿ ‘ಉಗ್ರಂ’ ‘ಮಫ್ತಿ’ ‘ರಥಾವರ’ ‘ಭರಾಟೆ’ ನಂತ್ರ ರೋರಿಂಗ್ ಸ್ಟಾರ್ ಶ್ರೀಮುರುಳಿ ಸಖತ್ ಮಾಸ್ ಎಂಡ್ ಕ್ಲಾಸ್ ಆಗಿ ‘ರಾ’ ಲುಕ್ನಲ್ಲಿ ‘ಮದಗಜ’ನ್ನಾಗಿ ಅಬ್ಬರಿಸಲು ರೆಡಿಯಾಗಿದ್ದಾರೆ. ಈಗಾಗಲೇ ‘ಮದಗಜ’ ಪೋಸ್ಟರ್ ಹಾಗೂ ಮೋಷನ್ ಪೋಸ್ಟರ್ ವಿಡಿಯೋದಿಂದಲ್ಲೇ ಗಾಂಧಿನಗರದಲ್ಲಿ ಸಿಕ್ಕಾಪಟ್ಟೆ ಹಲ್ಚಲ್ ಎಬ್ಬಿಸುತ್ತ, ರೋರಿಂಗ್ ಫ್ಯಾನ್ಸ್ಗೆ ಸಖತ್ ಕ್ಯೂರಿಯಾಸಿಟಿ ಹುಟ್ಟಿಸಿದೆ.
ಇದನ್ನೂ ಓದಿ : ಟಾಲಿವುಡ್ ಪ್ರಿನ್ಸ್ಗೆ ಜೋಡಿಯಾಗ್ತಾರಂತೆ ಬಿಟೌನ್ ಚೆಲುವೆ..! ಮಹೇಶ್ ಬಾಬು ಸಿನಿಮಾದಲ್ಲಿ ನಟಿಸೋ ಆ ಸ್ಟಾರ್ ನಟಿ ಯಾರು..?
ಈ ಸಿನಿಮಾ ಸೆಟ್ಟೇರಿದ ದಿನದಿಂದಲ್ಲೂ ಸಖತ್ ಸದ್ದು ಸುದ್ದಿ ಮಾಡಿದ್ದು, ಫಸ್ಟ್ ಶೆಡ್ಯೂಲ್ ಕಂಪ್ಲೀಟ್ ಆಗೋದಕ್ಕು ಮುಂಚನೇ ಸಿನಿಮಾ ಬಗ್ಗೆ ಸಾಕಷ್ಟು ಕ್ಯೂರಿಯಾಸಿಟಿ ಮೂಡಿಸಿತ್ತು. ಇನ್ನು ಫರ್ ಧ ಫಸ್ಟ್ ಟೈಮ್ ಕನ್ನಡ ಚಿತ್ರರಂಗದ ಇತಿಹಾಸದಲ್ಲೇ ಮಾಡಿರದ ದಾಖಲೆಯೊಂದನ್ನ ಬರೆಯಲು ಮದಗಜ ಟೀಂ ರೆಡಿಯಾಗಿದೆ. ಅಷ್ಟಕ್ಕೂ ಏನಪ್ಪ ಅಂತ ಯೋಚನೆ ಮಾಡ್ತಿದ್ದೀರಾ..? ಹೌದು ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಆರ್ಶಿವಾದ ಪಡೆದುಕೊಂಡು, ಮೊದಲ ಹಂತದ ಚಿತ್ರೀಕರಣವನ್ನ ಸುಮಾರು 20 ದಿನಗಳ ಕಾಲ ವಾರಾಣಸಿಯ ಲೈವ್ ಲೋಕೆಷನ್ನಲ್ಲಿ ಸಖತ್ ಕಲರ್ಫುಲ್ ಆಗಿ ಚಿತ್ರೀಕರಿಸಿದ್ದಾರೆ..ನಂತ್ರ ಎರಡನೇ ಹಂತದ ಚಿತ್ರೀಕರಣ ಶುರು ಮಾಡುಬೇಕು ಅನ್ನೋವಷ್ಟರಲ್ಲಿ, ಡೆಡ್ಲಿ ಕೊರೋನಾದಿಂದ ಇಡೀ ಚಿತ್ರರಂಗವೇ ಲಾಕ್ಡೌನ್ ಆಗಿತ್ತು. ಹಾಗಾಗಿ ಮದಗಜ ಚಿತ್ರೀಕರಣ ಸ್ಟಾಪ್ ಆಗಿತ್ತು.
ಇದನ್ನೂ ಓದಿ : ಅ್ಯಂಕರ್ ಅಕುಲ್ ಬಾಲಾಜಿ ಹಣೆಬರಹವಿದು…! ಈ ಬ್ರಹ್ಮ ಬರಹದಲ್ಲಿ ಏನೇನಿತ್ತು ಗೊತ್ತಾ ?
ಈಗ ಡೆಡ್ಲಿ ಕೊರೋನಾದಿಂದ ಸ್ವಲ್ಪ ಮಟ್ಟಿಗೆ ಚೇತರಿಸಿಕೊಂಡಿದ್ದು, ಸದ್ಯ ಮದಗಜ ಟೀಂ ಮೈಸೂರಿನಲ್ಲಿ ಬೀಡುಬಿಟ್ಟಿದೆ. ಹೌದು ರೋರಿಂಗ್ ಸ್ಟಾರ್ ಮದಗಜ ಸಿನಿಮಾದ ಎರಡನೇ ಹಂತದ ಚಿತ್ರೀಕರಣ ಮೈಸೂರಿನಲ್ಲಿ ಶುರುವಾಗಿದೆ. ಬಹಳ ದಿನಗಳ ನಂತ್ರ ರೋರಿಂಗ್ ಸ್ಟಾರ್ ಶ್ರೀಮುರುಳಿ ಮೇಕ್ಅಪ್ ಮಾಡಿಕೊಂಡು ಚಿತ್ರೀಕರಣಕ್ಕೆ ಪಾಲ್ಗೂಡಿದ್ದಾರೆ. ಇದರ ಖುಷಿಯನ್ನ ಸ್ವತ: ಶ್ರೀಮುರುಳಿ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ.
ಇದನ್ನೂ ಓದಿ : ರಾಜಕಾಲುವೆ ಒತ್ತುವರಿಯಾದ್ರೂ ವರಿ ಮಾಡ್ಕೊಂಡಿಲ್ಲ ಬಿಬಿಎಂಪಿ..! ಬಡವರಿಗೊಂದು ಕಾನೂನು, ಶ್ರೀಮಂತರಿಗೊಂದು ಕಾನೂನಾ ?
ಸದ್ಯಕ್ಕಿರೋ ಅಪ್ಡೇಟ್ ಪ್ರಕಾರ, ‘ಮದಗಜ’ ಕ್ರಿಸ್ಮಸ್ ಹಬ್ಬದ ವಿಶೇಷವಾಗಿ ಡಿಸೆಂಬರ್ 25 ರಂದು ಸಖತ್ ಅದ್ಧೂರಿಯಾಗಿ ರಿಲೀಸ್ ಆಗಲಿದೆ..ಈಗಾಗಲೇ ಬರೀ ಮೋಷನ್ ಪೋಸ್ಟರ್ನಿಂದ ಸೌಂಡ್ ಮಾಡಿರೋ, ‘ಮದಗಜ’ ಸದ್ಯದಲ್ಲಿಯೇ ಟ್ರೇಲರ್ ಹಾಗೂ ಸಾಂಗ್ಗಳನ್ನ ರಿಲೀಸ್ ಮಾಡುವ ಮೂಲಕ, ಅಗಸ್ತ್ಯನ ಅಭಿಮಾನಿಗಳಿಗೆ ಕಲರ್ಫುಲ್ ಗಿಫ್ಟ್ ನೀಡಲಿದೆ.