ಕನ್ನಡ ಚಿತ್ರರಂಗದ ಬಾಸ್… ಸಾರಥಿ.. ಹೀರೋಗಳ ಹೀರೋ ಅಂದ್ರೆ ಈಗೇನಿದ್ರೂ ಒನ್ ಅಂಡ್ ಓನ್ಲಿ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್. ಚಂದನವನದ ಚುಕ್ಕಾಣಿ ಹಿಡಿದಿರೋ ದೊಡ್ಮನೆ ಭಜರಂಗಿ ಶಿವಣ್ಣ ಅಂದ್ರೆ ಹೀರೋಗಳಿಗೆ ಅದೇನೂ ಗೌರವ. ಶಿವಣ್ಣ ಒಂದು ಸಭೆ ಮಾಡ್ತಿದ್ದೇನೆ. ಕನ್ನಡ ಚಿತ್ರರಂಗದ ಸಮಸ್ಯೆ ಬಗ್ಗೆ ಚರ್ಚೆ ನಡೆಸ್ತೇನೆ ಅಂದ್ರೆ ಸಾಕು ಎಲ್ಲಾ ಹೀರೋಗಳ ಥಟ್ ಅಂತಾ ಪ್ರತ್ಯಕ್ಷರಾಗ್ತಾರೆ. ನಾವೆಲ್ಲರೂ ಶಿವಣ್ಣನ ಜೊತೆಗಿದ್ದೇವೆ ಅನ್ನೋ ಸಂದೇಶ ಸೇರ್ತಾರೆ. ಬಟ್ ಈ ಬಾರಿ ಎಲ್ಲವೂ ಉಲ್ಟ ಪಲ್ಟವಾಗಿದೆ. ಆ ಕಲಾವಿದರನ್ನ ಬಿಟ್ಟು ಬೇರೆಲ್ಲಾ ತಾರಾಬಣ ಪವರ್ ಹೌಸ್ ನಾಗವಾರದಲ್ಲಿ ಹಾಜರಿದ್ರು.
ಕೊರೋನಾ ಕಷ್ಟದಿಂದಾಗಿ ಕನ್ನಡ ಚಿತ್ರರಂಗ ಸಂಕಷ್ಟದಲ್ಲಿ ಸಿಲುಕಿಕೊಂಡಿದೆ. ಕಷ್ಟದಲ್ಲಿರೋ ಸಿನಿ ಕಾರ್ಮಿಕರಿಗೆ ಇಂದು ಸಹಾಯದ ಹಸ್ತಬೇಕಿದೆ. ಇಂತಹ ಸಮಯದಲ್ಲಿ ಶಿವಣ್ಣ ಸಾರಥ್ಯದಲ್ಲಿ ಅವ್ರ ನಿವಾಸ ನಾಗವಾರದಲ್ಲಿ ಚರ್ಚೆ ನಡೆಸಲಾಯ್ತು. ಚಿತ್ರರಂಗದ ಬಹುತೇಕ ಕಲಾವಿದರ ಒಗ್ಗಡೂವಿಕೆಗೆಯಲ್ಲಿ ಈ ಸಭೆ ನಡೆಸಲಾಯ್ತು. ಈ ಸಭೆಯಲ್ಲಿ ಹಿರಿಯ ಕಲಾವಿದರಾದ ರವಿಚಂದ್ರನ್, ರಮೇಶ್ ಅರವಿಂದ್,ಉಪೇಂದ್ರ, ಪುನೀತ್ ರಾಜ್‌ಕುಮಾರ್, ಯಶ್, ಶ್ರೀಮುರಳಿ, ರಕ್ಷಿತ್ ಶೆಟ್ಟಿ, ಗಣೇಶ್, ದುನಿಯಾ ವಿಜಯ್, ನಿರ್ಮಾಪಕ ಕೆಪಿ ಶ್ರೀಕಾಂತ್, ಪುಷ್ಕರ್ ಮಲ್ಲಿಕಾರ್ಜುನಯ್ಯ ಭಾಗಿಯಾದ್ರೂ. ಬಟ್ ಆ ಮೂವರನ್ನ ಹೊರತುಪಡಿಸಿ.
ಕನ್ನಡ ಚಿತ್ರರಂಗಕ್ಕೆ ಇಂದು ವಿಶೇಷ ಪ್ಯಾಕೇಜ್ ಅವಶ್ಯಕಥೆ ಇದೆ. ಈ ನಿಟ್ಟಿನಲ್ಲಿ ಸಚಿವ ಸಿಟಿ ರವಿ ಶಿವಣ್ಣನ ಮನೆಗೆ ಆಗಮಿಸಿ ಎಲ್ಲಾ ಸ್ಟಾರ್ ನಟರ ಜೊತೆ ಸಭೆ ನಡೆಸಿದ್ದಾರೆ. ಈ ಸಭೆಯಲ್ಲಿ ಆ ಮೂವರು ಅನುಪಸ್ಥಿತಿ ಎದ್ದು ಕಾಣ್ತಿತ್ತು. ಅವ್ರೇ ದರ್ಶನ್, ಸುದೀಪ್ ಹಾಗೂ ಹಿರಿಯ ನಟ ಜಗ್ಗೇಶ್. ಅಷ್ಟಕ್ಕೂ ಈ ನಟರು ಯಾಕೆ ಬಂದಿಲ್ಲ..? ಈ ಮೂವರು ಹೀರೋ ಅನುಪಸ್ಥಿತಿಗೆ ಕಾರಣವೇನು..? ಅನ್ನೋ ಚರ್ಚೆ ಗಾಂಧಿನಗರದಲ್ಲಿ ಶುರುವಾಗಿದೆ. ಸುದೀಪ್ ದರ್ಶನ್ ಒಂದೇ ಜಾಗದಲ್ಲಿ ಒಟ್ಟಿಗೆ ಕಾಣಿಸಿಕೊಳ್ಳದಿರಲು ಇಷ್ಟವಿಲ್ಲದಿರುವುದಕ್ಕೆ, ಇವರಿಬ್ಬರು ಬಂದಿಲ್ಲ ಅಂತಾ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ. ಬಟ್ ಅಸಲಿ ಕಾರಣವೇ ಬೇರೆ ಇದೆ.
ನಟಿ ಸುಧಾರಾಣಿಗೆ ಸಂಕಷ್ಟ ತಂದ ಅಪೊಲೋ ಆಸ್ಪತ್ರೆಗೆ ಕಂಟಕ ಶುರುವಾಯ್ತಾ? ಡಿ. ಸುಧಾಕರ್ ಏನಂದ್ರು?
ಕನ್ನಡದ ಸಿನಿಮಾ ಸ್ಟಾರ್ ಚಿತ್ರೋದ್ಯಮ, ಕನ್ನಡ ಚಿತ್ರರಂಗ ಅಂದ್ರೆ ವೈಯಕ್ತಿಕ ಕಾರಣ ಏನೇ ಇದ್ರೂ ಎಲ್ಲವನ್ನ ಬದಿಗಿಡ್ತಾರೆ. ಅಂಥ ಒಗ್ಗಟ್ಟು ಕನ್ನಡ ಸಿನಿಮಾ ಇಂಡಸ್ಟ್ರೀಯಲ್ಲಿದೆ. ಶಿವಣ್ಣ ಅಂದ್ರೆ ಮೊದಲಿನಿಂದಲೂ ಪ್ರೀತಿಸೋ, ಗೌರವಿಸೋ ಕಿಚ್ಚ ಸುದೀಪ್ ಶಿವಣ್ಣ ನೇತೃತ್ವದ ಸಭೆಗೆ ಬದಿರಲಿಲ್ಲ. ಅಷ್ಟಕ್ಕೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಚಿತ್ರರಂಗದ ಸಭೆಗೆ ಬರದೇ ಇರೋದಿಕ್ಕೆ ಕಾರಣ ಫ್ಯಾಂಟಮ್ ಸಿನಿಮಾದ ಶೂಟಿಂಗ್..
ಯಸ್, ಕಿಚ್ಚ ಸುದೀಪ್ ಕಳೆದೊಂದು ಹದಿನೈದು ದಿನಗಳಿಂದ ಹೈದ್ರಾಬಾದ್ನಲ್ಲಿಯೇ ಬೀಡು ಬಿಟ್ಟಿದ್ದಾರೆ. ಫ್ಯಾಂಟಮ್ ಸಿನಿಮಾದ ಶೂಟಿಂಗ್ಗಾಗಿ ಹೈದ್ರಾಬಾದ್ನಲ್ಲಿರೋ ಸುದೀಪ್, ಈ ಸಭೆಗೆ ಬರೋದಿಕ್ಕೆ ಆಗಿಲ್ಲ ಅನ್ನೋದನ್ನ ಬಿಟ್ರೆ ಬೇರೆ ಯಾವ ಕಾರಣವೂ ಇಲ್ಲ ಅನ್ನುತ್ತಿದೆ ಗಾಂಧಿನಗರದ ಮಂದಿ.
ಶಿವಣ್ಣನ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಗೈರಾಗಿದ್ರು. ಅದಕ್ಕೂ ಕಾರಣವಿದೆ. ದರ್ಶನ್ ಕಳೆದ 5 ದಿನಗಳಿಂದಲೂ ಬೆಂಗಳೂರಿನಲ್ಲಿಲ್ಲ.. ಅರಣ್ಯ ಇಲಾಖೆಯ ರಾಯಭಾರಿಯಾಗಿರೋ ದಚ್ಚು, ಕೊಳ್ಳೇಗಾಲ ಸಮೀಪದ ಕಾಡಿನಲ್ಲಿ ಪರಿಸರ ರಕ್ಷಣೆಯ ಸಂಬಂಧಿತವಾದ ಕಾರ್ಯದಲ್ಲಿ ತೊಡಗಿ ಕೊಂಡಿದ್ದಾರೆ. ಹೀಗಾಗಿ ಈ ಸಭೆಗೆ ಗೈರಾಗಿದ್ರು.
ಕನ್ನಡ ಚಿತ್ರರಂಗದ ಈ ಸಭೆಗೆ ದರ್ಶನ್, ಸುದೀಪ್ ಸೇರಿದಂತೆ ಮತ್ತೊಬ್ಬ ಹಿರಿಯ ಕಲಾವಿದರೊಬ್ಬರು ಗೈರಾಗಿದ್ರು. ಅವರೇ ನವರಸ ನಾಯಕ ಜಗ್ಗೇಶ್. ಚಂದನವನದಲ್ಲಿ 4 ದಶಕಗಳ ಅನುಭವ ಹೊಂದಿರುವ ನಟ ಜಗ್ಗೇಶ್ ಯಾಕೆ ಬಂದಿಲ್ಲ ಅನ್ನೋ ಚರ್ಚೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗ್ತಿದ್ದಂತೆ ಅದಕ್ಕೆ ಟ್ವೀಟ್ ಮೂಲಕ ಉತ್ತರ ಕೊಟ್ಟಿದ್ದಾರೆ.
ಯಾವುದೇ ಕಾರಣಕ್ಕೂ ಕೊರೋನಾ ಔಷಧ ಬರುವವರೆಗೂ ಎಲ್ಲಿಯೂ ಹೋಗುವುದಿಲ್ಲಾ. ಯಾರ ಭೇಟಿಯೂ ಮಾಡುವುದಿಲ್ಲ. ಶಿವಣ್ಣ, ಪಾಪ ಕರೆದರು, ನಾನೇ ಬರುವುದಿಲ್ಲ ಎಂದು ತಿಳಿಸಿದೆ. ನನ್ನ ಸಂಪೂರ್ಣ ಬೆಂಬಲ ನಮ್ಮ ಉದ್ಯಮಕ್ಕಿದೆ. ಎಲ್ಲಾ ಕಾರ್ಯಕ್ಕೆ ವೈಯಕ್ತಿಕವಾಗಿ ಹೋಗದಿದ್ದರೂ, ಆನ್‌ಲೈನ್ ಚರ್ಚೆ ನಡೆಯುತ್ತಿದೆ! ನೀವು ಕ್ಷೇಮವಾಗಿರಿ ಧನ್ಯವಾದ ಅಂತಾ ಉತ್ತರ ಕೊಟ್ಟಿದ್ದಾರೆ.
ಒಟ್ನಲ್ಲಿ ಶಿವಣ್ಣನ ನೇತೃತ್ವದಲ್ಲಿ ನಡೆದ ಈ ಸಭೆಯಲ್ಲಿ ಕಿಚ್ಚ-ದಚ್ಚು ಹಾಗೂ ಜಗ್ಗೇಶ್ ಅನುಪಸ್ಥಿತಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ನಡೆಯುತ್ತಿದೆ. ಆದ್ರೆ ಈ ಚರ್ಚೆ ಬಗ್ಗೆ ಈ ಮೂವರು ತಲೆಕೆಸಿಕೊಂಡಿಲ್ಲ. ಯಾಕಂದ್ರೆ ಶಿವಣ್ಣನ ಜೊತೆಗಿನ ಅವರ ಸಂಬಂಧವೇನು..? ಆತ್ಮೀಯತೆ ಏನು ಅನ್ನೋದು ಅವರಿಗೆ ಗೊತ್ತು.