ಸ್ಯಾಂಡಲ್ವುಡ್ನ ಸ್ಟಾರ್ ಡೈರಕ್ಟರ್ ಇಂದ್ರಜಿತ್ ಲಂಕೇಶ್ ಸಿಡಿಸಿದ ಡ್ರಗ್ಸ್ ಮಾಫಿಯಾ ವಿಚಾರವೀಗ ದಿನದಿಂದ ದಿನಕ್ಕೊಂದು ಹೊಸ ತಿರುವು ಪಡೆದುಕೊಂಡು ಇಡೀ ಚಂದನವನ್ನೇ ನಡುಗುವಂತೆ ಮಾಡಿದೆ.
ಸಿನಿಮಾಗಳಲ್ಲಿ ಚಾನ್ಸ್ ಬೇಕು ಅಂದ್ರೆ ರೇವ್ ಪಾರ್ಟಿಗೂ ಹೋಗ್ಬೇಕು, ನೈಟ್ ಪಾರ್ಟಿಗಳಿಗೆ ಕರೆದ್ರೂ ಹೋಗ್ಬೇಕು ಎಂದು, ಬಿಟಿವಿಯಲ್ಲಿ ಮಾತನಾಡಿದ ಕಿರುತೆರೆ ನಟಿ ಚಿತ್ರಾಲ್ ರಂಗಸ್ವಾಮಿ ಸ್ಫೋಟಕ ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ : ನಶೆಯ ರಾಜ ರಾಣಿಯರ ಬಗ್ಗೆ ನಟ ಜಗ್ಗೇಶ್ ಖಡಕ್ ಮಾತು!! ಅವರ ಕಾಲವನ್ನು ಸ್ಮರಿಸಿಕೊಂಡ ನವರಸ ನಾಯಕ!!
ಸಿನಿಮಾಗಳಲ್ಲಿ ನಟಿಸಲು ಚಾನ್ಸ್ ಸಿಗ್ಬೇಕಂದ್ರೆ ನಾವು ಮೊದಲು ಕಮಿಟ್ ಆಗ್ಬೇಕು, ಹಲವು ಡೈರೆಕ್ಟರ್ಗಳು, ನಟರು ಆಫರ್ ಕೊಡಲು ನಮ್ಮನ್ನು ಧಹಿಕವಾಗಿ ಬಳಸಿಕೊಳ್ತಾರೆ, ಟ್ಯಾಲೆಂಟ್ ಇರೋರಿಗೆ ಇಲ್ಲಿ ಆಫರ್ ಸಿಗ್ತಿಲ್ಲ ಎಂದು ಸ್ಯಾಂಡಲ್ವುಡ್ನ ಕರ್ಮಕಾಂಡವನ್ನ ಬಟಾ ಬಯಲು ಮಾಡಿದ್ದಾರೆ.
ಕಿರುತರೆ ನಟಿ ಚಿತ್ರಾಲ್ ರಂಗಸ್ವಾಮಿ ಯವರು ಬಿಟಿವಿಯ ಬಳಿ ಮಾತನಾಡಿ, ನನಗೆ ಈ ಮಾಫಿಯಾ ವಿಚಾರವಾಗಿ ಶಾಕಿಂಗ್ ಏನು ಅನ್ನಿಸೋದಿಲ್ಲ, ಯಾಕಂದ್ರೆ ಸುಮಾರು 9 ವರ್ಷಗಳಿಂದ ನಾನು ಸೀರಿಯಲ್ನಲ್ಲಿ ಆ್ಯಕ್ಟ್ ಮಾಡುತ್ತಿದ್ದೀನಿ, ಹಾಗೂ ಸಿನಿಮಾಗಳಲ್ಲೂ ಚಾನ್ಸ್ಗಾಗಿ ಟ್ರೈ ಮಾಡ್ತಾ ಇದ್ದೀನಿ, ಆದರೆ ಸಿನಿಮಾನಗಳಲ್ಲಿ ಅವಕಾಶ ಸಿಗೋದು ತುಂಬಾ ಕಷ್ಟ ಇದೆ.
ಇದನ್ನೂ ಓದಿ : ನಿಶಾಚರಿ ನಶೆಕನ್ಯೆಯರ ಸ್ಪೋಟಕ ಭವಿಷ್ಯ ! ಇಂದ್ರಜಿತ್ಗೂ ಮೊದಲು ನಟಿಯರ ಡ್ರಗ್ ಮಾಫಿಯಾ ಬಯಲಾಗಿತ್ತು !
ಚಿತ್ರಗಳಲ್ಲಿ ನಾಯಕಿಯಾಗಿ ಅವಕಾಶ ಸಿಗಬೇಕು ಅಂದ್ರೆ ತುಂಬಾ ಕಷ್ಟವಿದೆ. ಯಾಕಂದ್ರೆ ನನ್ನ ಫ್ರೆಂಡ್ಸ್ ಸರ್ಕಲ್ನಲ್ಲಿ ಆಗಿರ್ಬಹುದು, ಅಥವಾ ಇಂಡಸ್ಟ್ರಿ ಫ್ರೆಂಡ್ಸ್ ಸರ್ಕಲ್ನಲ್ಲಿ ಆಗಿರ್ಬಹುದು ಈ ರೀತಿಯ ಮಾತುಗಳನ್ನ ಹೇಳಿರುವುದನ್ನ ಕೇಳಿದ್ದೀನಿ. ನೀವು ಅವರ ಜೊತೆ ಹೋಗಿ ಪಾರ್ಟಿಗಳನ್ನ ಅಟೆಂಡ್ ಮಾಡಿದ್ರೆ ಒಂದಷ್ಟು ಪ್ರಾಜೆಕ್ಟ್ಗಳು ಸಿಗುತ್ತೆ, ಈ ರೀತಿ ಮಾಡುವುದರಿಂದ ನಿಮ್ಮನ್ನ ನೀವು ಪರಿಚಯ ಮಾಡಿಕೊಳ್ಳ ಬಹುದು, ಒಂದಷ್ಟು ಕಾಂಟಾಕ್ಟ್ಗಳು ಸಿಗುತ್ತೆ, ಕಾಂಟಾಕ್ಟ್ಗಳು ಇದ್ರೇನೆ ಪ್ರಾಜೆಕ್ಟ್. ಈ ರೀತಿಯ ಮಾತುಗಳನ್ನ ಕೇಳಿದ್ದೀನಿ ಆದರೆ ಆ ಪಾರ್ಟಯೋಳಗೆ ಡ್ರಗ್ಸ್ ಇರುತ್ತಾ, ಇನ್ನೋಂದು ಇರುತ್ತಾ ಅದು ನನಗೆ ಗೊತ್ತಿಲ್ಲ ಎಂದಿದ್ದಾರೆ.
ಇದನ್ನೂ ಓದಿ : ಇಂದು ನಿರ್ಧಾರವಾಗಲಿದೆ ಸ್ಯಾಂಡಲ್ವುಡ್ ಹಣೆಬರಹ ! ಸಿಸಿಬಿಗೆ ಇಂದ್ರಜಿತ್ ನೀಡಲಿದ್ದಾರೆ ನಶೆಕನ್ಯೆಯರ ಪಟ್ಟಿ !
ನಾನು ರಿಯಾಲಿಟಿ ಇವೆಂಟ್ಸ್ಗಳಿಗೆ ಹೋದಾಗ, ಬೇರೆ ಬೇರೆ ಕಡೆ ಶೂಟಿಂಗ್ ಇರುತ್ತೆ ಅಂತ ಕಡೆ ಹೋದಾಗ ಬೆಳಗ್ಗೆ ಶೂಟಿಂಗ್ ಇರುತ್ತೆ, ಮೂರುವರೆ-ನಾಲ್ಕು ಗಂಟೆಯಾದ್ರು ಮಾತಾಡ್ತಾ ಕೂತಿರ್ತಾರೆ ಕೆಲವು ಆರ್ಟಿಸ್ಟ್ಗಳು, ಆದರೆ ಅವರು ಡ್ರಗ್ಸ್ ತೆಗೆದುಕೊಳ್ಳೋದನ್ನ ನೊಡಿದ್ದೀನಿ, ಇದರಲ್ಲಿ ಆಶ್ಚರ್ಯ ಪಡುವಂತದ್ದು ಏನಿಲ್ಲ, ಕೆಲವು ಆರ್ಟಿಸ್ಟ್ಗಳು ಡ್ರಗ್ಸ್ಗೆ ಅಡಿಟ್ ಆಗಿರ್ತಾರೆ ಸಿನಿ ರಂಗದ ಕರಾಳ ಮುಖವನ್ನು ಚಿತ್ರಾಲ್ ರಂಗಸ್ವಾಮಿ ಇದಿಗ ಜಗತ್ ಜಾಹಿರ ಮಾಡಿದ್ದಾರೆ.