ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅಮೂಲ್ಯ ಗೆ ಇಂದು ಸೀಮಂತ ಶಾಸ್ತ್ರ ನೆರವೇರಿಸಲಾಯಿತು.
ಅಮೂಲ್ಯ ಮತ್ತು ಜಗದೀಶ್ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದು, ಇಂದು ಅಮೂಲ್ಯಗೆ ಗ್ರ್ಯಾಂಡ್ ಆಗಿ ಸೀಮಂತ ನೆರವೇರಿಸಲಾಯಿತು. ಸೀಮಂತದ ವೇದಿಕೆಯನ್ನು ಗ್ರೀನ್ ಕಲರ್ ಥೀಮ್ ನಲ್ಲಿ ಅಲಂಕರಿಸಲಾಗಿತ್ತು. ಕುಟುಂಬಸ್ಥರು ಮತ್ತು ಆಪ್ತರ ಸಮ್ಮುಖದಲ್ಲಿ ಅಮೂಲ್ಯ ಸೀಮಂತ ನೆರವೇರಿದೆ.
ಇತ್ತೀಚೆಗೆ ಅಮೂಲ್ಯ ಅವರು ತಾವು ಗರ್ಭಿಣಿಯಾಗಿರುವ ವಿಷಯವನ್ನು ಬಹಿರಂಗಪಡಿಸಿದ್ದು, ಈಗ ಅಮೂಲ್ಯ 7 ತಿಂಗಳ ಗರ್ಭಿಣಿ. ಅವರು ತಾಯಿ ಆಗುತ್ತಿರುವ ಸುದ್ದಿ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದರು.