ಮೈಸೂರು: ಸ್ಯಾಂಡಲ್ ವುಡ್ ನ ಖ್ಯಾತ ನಟ, ನಿರ್ಮಾಪಕ ಎಂ.ಪಿ. ಶಂಕರ್ ಅವರ ಪತ್ನಿ ಮಂಜುಳಾ (75) ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಮೈಸೂರಿನ ವಿಜಯನಗರದಲ್ಲಿ ವಾಸವಾಗಿದ್ದ ಮಂಜುಳಾ ಅವರಿಗೆ ಕೆಲವು ದಿನಗಳ ಹಿಂದೆ ಹೃದಯಾಘಾತವಾಗಿತ್ತು. ಅವರಿಗೆ ಬೈಪಾಸ್ ಸರ್ಜರಿ ಮಾಡಲಾಗಿತ್ತು. ಇಂದು ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮಂಜುಳಾ ಅವರ ಅಂತ್ಯಕ್ರಿಯೆಯನ್ನು ಮೈಸೂರಿನ ಸಿ.ಎಸ್. ಫಾರ್ಮ್ ನಲ್ಲಿ ಇಂದು ಮಧ್ಯಾಹ್ನ ನಡೆಸಲಾಗಿದೆ.
ಎಂಪಿ ಶಂಕರ್ ಅವರು ನಟ ಮತ್ತು ನಿರ್ಮಾಪಕರಾಗಿದ್ದರು. ಅವರು ಸತ್ಯ ಹರಿಶ್ಚಂದ್ರ, ಶನಿಪ್ರಭಾವ, ಬಂಗಾರದ ಮನುಷ್ಯ, ಗಂಧದಗುಡಿ, ಭೂತಯ್ಯನ ಮಗ ಅಯ್ಯು ಮುಂತಾದ ಚಿತ್ರಗಳಲ್ಲಿ ನಟಿಸಿದ್ದರು. ಜೊತೆಗೆ ಅವರು ಹಲವು ಚಿತ್ರಗಳನ್ನು ನಿರ್ಮಿಸಿದ್ದರು. 2008ರಲ್ಲಿ ಎಂ.ಪಿ. ಶಂಕರ್ ಅವರು ನಿಧನರಾಗಿದ್ದರು.