ಕೀವ್: ಉಕ್ರೇನ್ ಮೇಲೆ ರಷ್ಯಾ ಸೇನೆ ದಾಳಿಯನ್ನು ಮುಂದುವರೆಸಿದ್ದು, ಉಕ್ರೇನ್ ಸೇನೆ ಸಹ ರಷ್ಯಾ ಸೇನೆಗೆ ದಿಟ್ಟ ಉತ್ತರ ನೀಡುತ್ತಿದೆ. ಇಂದು ರಷ್ಯಾ ಸೇನೆಯ ಹೆಲಿಕಾಪ್ಟರ್ ಅನ್ನು ಉಕ್ರೇನ್ ಯೋಧರು ಹೊಡೆದುರುಳಿಸಿದ್ದಾರೆ.
ಉಕ್ರೇನ್ ಸೈನಿಕರು ರಷ್ಯಾ ಸೇನೆಯ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದು, ದಾಳಿಯಲ್ಲಿ ರಷ್ಯಾ ಹೆಲಿಕಾಪ್ಟರ್ ಎರಡು ತುಂಡಾಗಿ ಪತನವಾಗಿದೆ. ಉಕ್ರೇನ್ ಸೇನೆ ಬ್ರಿಟನ್ ನಿರ್ಮಿತ ಸ್ಟಾರ್ ಸ್ಟ್ರೀಕ್ (Starstreak) ಕ್ಷಿಪಣಿಯನ್ನು ಬಳಸಿದೆ. ಈ ಕ್ಷಿಪಣಿಯನ್ನು ಬಳಸಿ ಯಶಸ್ವಿಯಾಗಿ ರಷ್ಯಾದ ಹೆಲಿಕಾಪ್ಟರ್ ಅನ್ನು ಹೊಡೆದುರುಳಿಸಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ: ಪುನೀತ್ ರಾಜ್‍ಕುಮಾರ್ ಅವರನ್ನು ಹೋಲುವ ಅವಳಿ ಮಕ್ಕಳು… ಸೋಷಿಯಲ್ ಮೀಡಿಯಾದಲ್ಲಿ ಫೋಟೋ ಫುಲ್ ವೈರಲ್…
ಬ್ರಿಟನ್ ಸರ್ಕಾರ ರಷ್ಯಾ ವಿರುದ್ಧದದ ಉಕ್ರೇನ್ ಹೋರಾಟಕ್ಕೆ ನೆರವು ನೀಡುತ್ತಿದ್ದು, ಶಸ್ತಾಸ್ತ್ರಗಳನ್ನು ಪೂರೈಸುತ್ತಿದೆ. ಈ ಮೊದಲು ಬ್ರಿಟನ್ ಸಾವಿರಾರು ಆಂಟಿ ಟ್ಯಾಂಕ್ ಮಿಸೈಲ್ ಗಳನ್ನು ಉಕ್ರೇನ್ ಗೆ ನೀಡಿತ್ತು. ಈ ಕ್ಷಿಪಣಿಗಳನ್ನು ಬಳಸಿ ಉಕ್ರೇನ್ ಸೈನಿಕರು ರಷ್ಯಾದ ನೂರಾರು ಟ್ಯಾಂಕ್ ಗಳನ್ನು ಧ್ವಂಸಗೊಳಿಸಿದ್ದರು. ಈಗ ಬ್ರಿಟನ್ ಹೆಲಿಕಾಪ್ಟರ್ ಮತ್ತು ಯುದ್ಧ ವಿಮಾನಗಳನ್ನು ಹೊಡೆದುರಳಿಸುವ ಅತ್ಯಾಧುನಿಕ ಸ್ಟಾರ್ ಸ್ಟ್ರೀಕ್ ಲೇಸರ್ ಗೈಡೆಡ್ ಮಿಸೈಲ್ ಗಳನ್ನು ಉಕ್ರೇನ್ ಗೆ ನೀಡಿದೆ.
The Times is reporting that this shootdown of a Russian Mi-28 was by a British Starstreak SAM pic.twitter.com/zsQb1DkQ74
— OSINTtechnical (@Osinttechnical) April 2, 2022
ಮುಂದಿನ ಹಂತದಲ್ಲಿ 6000 ಕ್ಷಿಪಣಿಗಳನ್ನು ಉಕ್ರೇನ್ ಗೆ ನೀಡುವುದಾಗಿ ಬ್ರಿಟನ್ ಪ್ರಧಾನ ಮಂತ್ರಿ ಬೋರಿಸ್ ಜಾನ್ಸನ್ ತಿಳಿಸಿದ್ದಾರೆ. ಇದೇ ವೇಳೇ ರಷ್ಯಾ ಸೇನೆ ಪಶ್ಚಿಮ ಉಕ್ರೇನ್ ಭಾಗಗಳ ಮೇಲೆ ಗಮನ ಕೇಂದ್ರೀಕರಿಸಿದ್ದು, 60 ಸಾವಿರ ಯೋಧರನ್ನು ಅಲ್ಲಿಗೆ ರವಾನಿಸಿದೆ ಎಂದು ತಿಳಿದು ಬಂದಿದೆ.