ಚಿಕ್ಕಬಳ್ಳಾಪುರ : ಚಿಕ್ಕಬಳ್ಳಾಪುರದಲ್ಲಿ RRR ಸಿನಿಮಾ ಹವಾ ಜೋರಾಗಿದ್ದು, ಇಂದು ಸಂಜೆ ಪ್ರೀ ಈವೆಂಟ್ ಕಾರ್ಯಕ್ರಮ ನಡೆಯಲಿದೆ. ಈಗಾಗಲೇ ಚಿಕ್ಕಬಳ್ಳಾಪುರಕ್ಕೆ ಚಿತ್ರ ತಂಡ ಬಂದಿದ್ದು, ಜ್ಯೂನಿಯರ್ ಎನ್ಟಿಆರ್, ರಾಮಚರಣ್ ತೇಜ್, ರಾಜಮೌಳಿ ಸೇರಿ ಖ್ಯಾತ ನಟಿಯರ ಆಗಮಿಸಿದ್ದಾರೆ.
ದೇವನಹಳ್ಳಿ ಖಾಸಗಿ ಹೋಟೇಲ್ನಲ್ಲಿ ಟೀಂ ತಂಗಿದ್ದು, ಕಾರ್ಯಕ್ರಮಕ್ಕೆ ಚೀಫ್ ಗೆಸ್ಟ್ ಸಿಎಂ ಬೊಮ್ಮಾಯಿ ಆಗಿದ್ದಾರೆ. ನಟ ಶಿವರಾಜ್ಕುಮಾರ್, ಸಚಿವ ಸುಧಾಕರ್ ಸೇರಿ ಹಲವರು ಭಾಗಿಯಾಗಲಿದ್ದು, 1 ಲಕ್ಷಕ್ಕೂ ಹೆಚ್ಚು ಮಂದಿ ಕಾರ್ಯಕ್ರಮಕ್ಕೆ ಸೇರುವ ಸಾಧ್ಯತೆಗಳಿದೆ. ಅಗಲಗುರ್ಕಿ ಗೇಟ್ ಬಳಿ ನಡೆಯೋ ಕಾರ್ಯಕ್ರಮಕ್ಕೆ ಭಾರೀ ಭದ್ರತೆ ಏರ್ಪಡಿಸಲಾಗಿದ್ದು, 100 ಎಕರೆ ಮೈದಾನದಲ್ಲಿ ಕಾರ್ಯಕ್ರಮದ ಆಯೋಜನೆ ಮಾಡಲಾಗಿದೆ.
ಸುಮಾರು 1000ಕ್ಕೂ ಹೆಚ್ಚು ಪೊಲೀಸರಿಂದ ಬಂದೋಬಸ್ತ್ ಏರ್ಪಡಿಸಲಾಗಿದ್ದು, ಮೂರು ಜಿಲ್ಲೆಗಳ ಹಿರಿಯ ಪೊಲೀಸ್ ಅಧಿಕಾರಿಗಳ ನಿಗಾ ವಹಿಸಲಾಗಿದೆ. ಕಾರ್ಯಕ್ರಮ ಸ್ಥಳ ಪರಿಶೀಲನೆಯನ್ನ ಎಸ್ಪಿ ಮಿಥುನ್ಕುಮಾರ್ ಮಾಡಿದ್ದು, ರಾಮಚರಣ್-ಜ್ಯೂನಿಯರ್ ಎನ್ಟಿಆರ್ ಜೋಡಿಯ RRR, ಮಾರ್ಚ್ 25ರಂದು ರಿಲೀಸ್ ಆಗಲಿದೆ.
RRR ಪ್ರೀ ರಿಲೀಸ್ ಕಾರ್ಯಕ್ರಮಕ್ಕೆ ಚಿಕ್ಕಬಳ್ಳಾಪುರಕ್ಕೆ RRR ಚಿತ್ರತಂಡ ಆಗಮಿಸಿದ್ದು, ವಿಶ್ರಾಂತಿಗೆಂದು ದೇವನಹಳ್ಳಿ ಖಾಸಗಿ ಹೋಟೇಲ್ನಲ್ಲಿ ತಂಗಿದ್ದ ರಾಜ್ ಮೌಳಿ ಬೆಳ್ಳಗ್ಗೆ ಹೊಟೇಲ್ ಆವರಣದಲ್ಲಿ ವಾಕಿಂಗ್ ಮಾಡಿದ್ದಾರೆ.
ಇದನ್ನೂ ಓದಿ:ಬಳ್ಳಾರಿಯ ಥರ್ಮಲ್ ಪವರ್ ಪ್ಲಾಂಟ್ನಲ್ಲಿ ಬೆಂಕಿ..! ಒಬ್ಬ ಕಾರ್ಮಿಕ ಸಾವು, ಇಬ್ಬರ ಸ್ಥಿತಿ ಗಂಭೀರ..!