ಬೆಂಗಳೂರು : RR ನಗರ ಅವ್ಯವಸ್ಥೆಗಳ ಆಗರವಾಗಿದ್ದು, ಗುಂಡಿ ಬಿದ್ದ ರಸ್ತೆಗಳು, ಕುಸಿದಿರುವ ಫುಟ್ಪಾತ್ಗಳು, ಚರಂಡಿ ವ್ಯವಸ್ಥೆ ಸರಿಯಿಲ್ಲದೇ ರಸ್ತೆಯಲ್ಲೇ ನಿಂತ ನೀರು, ಫುಟ್ಪಾತ್ಗಳ ಸಮೀಪವೇ ಬಿದ್ದ ಕಸದ ರಾಶಿ, ಫುಟ್ಪಾತ್ ಒತ್ತುವರಿಯಿಂದ ಜನರಿಗೆ ಕಿರಿಕಿರಿಯಾಗುತ್ತಿದೆ. ಈ ಅವ್ಯವಸ್ಥೆ ಕಂಡು BBMP ಚೀಫ್ ಕಮಿಷನರ್ ಫುಲ್ ಗರಂ ಆಗಿದ್ಧಾರೆ.
ಆರ್.ಆರ್.ನಗರ ವಲಯದಲ್ಲಿ ತುಷಾರ್ ಗಿರಿನಾಥ್ ಫುಲ್ ಗರಂ ಆಗಿದ್ದು, ನೀವೇನು ಕತ್ತೆ ಕಾಯ್ತಿದ್ದೀರಾ ಎಂದು ಹಿರಿಯ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡಿದ್ಧಾರೆ. ವಲಯ ಜಂಟಿ ಕಮಿಷನರ್, ಮುಖ್ಯ ಎಂಜಿನಿಯರ್ಗೆ ಫುಲ್ ಕ್ಲಾಸ್ ಆಗಿದೆ.
ಆರ್,ಆರ್.ನಗರ ಆರ್ಚ್ನಿಂದ BEML ಕಾಂಪ್ಲೆಕ್ಸ್ವರೆಗೆ ಪರಿಶೀಲನೆ ನಡೆಸಿದ್ಧಾರೆ. ಮಂದಾರ ಹೋಟೆಲ್ ಜಂಕ್ಷನ್, ನಿಮಿಷಾಂಬ ಸರ್ಕಲ್, ಪಟ್ಟಣಗೆರೆ ಮೇನ್ ರೋಡ್, ಆರ್.ಆರ್.ನಗರ ಮುಖ್ಯ ರಸ್ತೆ ಪರಿಶೀಲನೆ ನಡೆಸಿದ್ಧಾರೆ.
ಅವ್ಯವಸ್ಥೆಗಳನ್ನು ಕಂಡು ವಲಯ ಅಧಿಕಾರಿ ಬಾಲಾಜಿಗೆ ಕಮಿಷನರ್ ಕ್ಲಾಸ್ ತಗೊಂಡಿದ್ಧಾರೆ.
ಕಮಿಷನರ್ ಕೆಲಸ ಮಾಡಿ.. ಆಗದೇ ಇದ್ರೆ ಮನೆಗೆ ಹೋಗಿ ಎಂದು ತರಾಟೆ ತಗೊಂಡಿದ್ದು, ಪ್ರಾಜೆಕ್ಟ್ ಕೈಗೆತ್ತಿಕೊಳ್ಳೋದು ನಿಮ್ಮ ಹಣೆಬರಹ ಸರಿಯಾಗಿ ಕೆಲಸ ಮಾಡ್ರಿ, ಗುಂಡಿ ಮುಚ್ಚಲು ಟೆಂಡರ್ ತಗೋತೀರಾ, ಇಲ್ಲಿ ಬರೀ ಗುಂಡಿ ಅಂತಾ ಗರಂ ಆಗಿದ್ದು, ಪರಿಶೀಲನೆಗೆ ಬಂದ ಕಮಿಷನರ್ಗೆ ಜನರು ನೂರಾರು ಸಮಸ್ಯೆ ಹೇಳಿದ್ಧಾರೆ. ಡ್ರೈನೇಜ್ ಸಿಸ್ಟಮ್ ಸರಿಯಿಲ್ಲ, ಮನೆಗಳಿಗೇ ನೀರು ನುಗ್ಗುತ್ತೆ ಅಂತಾ ದೂರು ನೀಡಿದ್ಧಾರೆ. ರಾಜರಾಜೇಶ್ವರಿ ನಗರದಲ್ಲಿ ಬಹುತೇಕ ಕಡೆ ಅವೈಜ್ಞಾನಿಕ ಕಾಮಗಾರಿಯಾಗಿದೆ, ರಸ್ತೆ ಬದಿಯ ನೀರುಗಾಲುವೆ, ಫುಟ್ಪಾತ್ಗಳು ಅವೈಜ್ಞಾನಿಕ ಅಂತಾ ಗರಂ ಆಗಿದ್ಧಾರೆ.
ಇದನ್ನೂ ಓದಿ : ಪತಿಯ ವಿಚ್ಛೇದನ ನೋಟಿಸ್‌ಗೆ ಮನನೊಂದು ಅಪಾರ್ಟ್ಮೆಂಟ್ ಕಟ್ಟಡದಿಂದ ಬಿದ್ದು ಆತ್ಮಹತ್ಯೆ ಮಾಡಿಕೊಂಡ HR ಮ್ಯಾನೇಜರ್…