ಜೈಪುರ: ರಾಜಸ್ಥಾನದ ಜೈಪುರದ ಮಹಿಳಾ ಪೇದೆಯೊಬ್ಬರು ತಮ್ಮ ಮೇಲಧಿಕಾರಿಯೊಂದಿಗೆ ಸ್ಮಿಮ್ಮಿಂಗ್ ಪೂಲ್ ನಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಅದೂ ಆಕೆಯ 6 ವರ್ಷದ ಪುತ್ರನ ಎದುರಲ್ಲೇ ಆಕೆ ಮಾಡಬಾರದ ಕೆಲಸ ಮಾಡಿದ್ದಾಳೆ. ಜೊತೆಗೆ ಇದೆಲ್ಲವನ್ನೂ ವಿಡಿಯೋ ಮಾಡಿ ಸಾಮಾಜಿಕ ಜಾಲತಾಣಗಳಲ್ಲೂ ಹಂಚಿಕೊಂಡಿದ್ದಾಳೆ. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಈಗ ಮಹಿಳಾ ಪೇದೆ ಮತ್ತು ಪೊಲೀಸ್ ಅಧಿಕಾರಿಯನ್ನು ರಾಜಸ್ಥಾನ ಪೊಲೀಸ್ ಇಲಾಖೆ ಸೇವೆಯಿಂದ ಅಮಾನತು ಮಾಡಿದೆ.
ಇದನ್ನೂ ಓದಿ: ಹುಬ್ಬಳ್ಳಿಯ ಜಯಲಕ್ಷ್ಮೀ ಕಂಫರ್ಟ್ ನಲ್ಲಿ “ಟಚಿಂಗ್ ಟಚಿಂಗ್”…ಲಾಡ್ಜ್ ಮಾಲೀಕ ಸೇರಿ ಐವರ ಬಂಧನ…!
ರಾಜಸ್ತಾನದ ಅಜ್ಮೀರ್ ನ ಬೇವರ್ ನಲ್ಲಿ ಸರ್ಕಲ್ ಆಫೀಸರ್ ಆಗಿ ಸೇವೆ ಸಲ್ಲಿಸುತ್ತಿರುವ ಹೀರಾಲಾಲ್ ಸೈನಿ ಎಂಬಾತ ಜೈಪುರದಲ್ಲಿ ಸೇವೆ ಸಲ್ಲಿಸುತ್ತಿರುವ ಮಹಿಳಾ ಪೇದೆಯೊಂದಿಗೆ ಸ್ವಿಮ್ಮಿಂಗ್ ಪೂಲ್ ನಲ್ಲಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ವೇಳೆ ಮಹಿಳಾ ಪೇದೆಯ 6 ವರ್ಷದ ಮಗ ಸಹ ಸ್ಮಿಮ್ಮಿಂಗ್ ಪೂಲ್ ನಲ್ಲಿದ್ದ ಎಂದು ವರದಿಯಾಗಿದೆ.
ಇದನ್ನೂ ಓದಿ: ಫೋನ್ ಪೇ ಮೂಲಕ ಲಂಚ ಪಡೆದಿದ್ದ ಗುಬ್ಬಿ ಪಿಎಸ್ ಐ ಜ್ಞಾನಮೂರ್ತಿ ಅಮಾನತು
ಮಹಿಳಾ ಪೇದೆ ಮತ್ತು ಪೊಲೀಸ್ ಅಧಿಕಾರಿ ಸ್ವಿಮ್ಮಿಂಗ್ ಪೂಲ್ ನಲ್ಲಿ ಲೈಂಗಿಕ ಕ್ರಿಯೆ ನಡೆಸುವ ವಿಡಿಯೋ ವೈರಲ್ ಆಗುತ್ತಿದ್ದಂತೆ ಮಹಿಳಾ ಪೇದೆ ಪತಿ ಇಬ್ಬರ ವಿರುದ್ಧವೂ ರಾಜಸ್ಥಾನದ ನಾಗೌರ್ ಜಿಲ್ಲೆಯ ಛಿತ್ವಾ ಪೊಲೀಸ್ ಸ್ಟೇಷನ್ ನಲ್ಲಿ ದೂರು ದಾಖಲಿಸಿದ್ದಾರೆ. ದೂರಿನಲ್ಲಿ ನಾವು 2001 ರಲ್ಲಿ ಮದುವೆಯಾಗಿದ್ದೆವು, ಅಕೆ 2008 ರಲ್ಲಿ ಪೊಲೀಸ್ ಪೇದೆಯಾಗಿ ನೇಮಕವಾಗಿದ್ದಳು. 6 ವರ್ಷದ ಹಿಂದೆ ಮಗು ಹುಟ್ಟಿತ್ತು. ಆಕೆ ಜುಲೈ 13 ರಂದು ತನ್ನ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾಳೆ. ಈ ವಿಡಿಯೋವನ್ನು ನಮ್ಮ ಸಂಬಂಧಿಕರು ಮತ್ತು ಸ್ನೇಹಿತರು ನೋಡಿ ನನಗೆ ಮಾಹಿತಿ ನೀಡಿದರು ಎಂದು ದೂರಿನಲ್ಲಿ ತಿಳಿಸಿದ್ಧಾನೆ.
ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ವಿಡಿಯೋದಲ್ಲಿರುವ ಪೊಲೀಸ್ ಅಧಿಕಾರಿ ಇದು ನಕಲಿ ವಿಡಿಯೋ, ಅದರಲ್ಲಿರುವುದು ನಾನಲ್ಲ ಎಂದು ತಿಳಿಸಿದ್ಧಾರೆ. ಇದೇ ವೇಳೆ ಪೊಲೀಸ್ ಇಲಾಖೆ ಇಬ್ಬರನ್ನೂ ಅಮಾನತು ಮಾಡಿದ್ದು, ತನಿಖೆ ನಡೆಸುವಂತೆ ಆದೇಶಿಸಿದೆ.