ಮುಂಬೈ: ರಾಯಲ್ ಚಾಲೆಂಜರ್ಸ್ ಬೆಂಗಳೂರು ನಾಯಕ ಫಾಫ್ ಡು ಪ್ಲೆಸಿಸ್ ಗಳಿಸಿದ ಭರ್ಜರಿ ಅರ್ಧಶತಕದ ನೆರವಿನಿಂದ ಆರ್ ಸಿ ಬಿ ತಂಡ 192 ರನ್ ಗಳಿಸಿದ್ದು, ಸನ್ ರೈಸರ್ಸ್ ಹೈದರಾಬಾದ್ ತಂಡಕ್ಕೆ 193 ರನ್ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡ ಆರ್ ಸಿ ಬಿ ತಂಡಕ್ಕೆ ಮೊದಲ ಬಾಲ್ ನಲ್ಲೇ ಆಘಾತ ಎದುರಾಯಿತು. ವಿರಾಟ್ ಕೊಹ್ಲಿ ಶೂಕ್ಯಕ್ಕೆ ಔಟಾದರು. ಈ ಮೂಲಕ ಈ ಸೀಸನ್ ನಲ್ಲಿ ಮೂರು ಬಾರಿ ಗೋಲ್ಡನ್ ಡಕ್ ಗೆ ಔಟಾದ ದಾಖಲೆ ಬರೆದರು. ನಂತರ ಜೊತೆಯಾದ ಫಾಫ್ ಡು ಪ್ಲೆಸಿಸ್ ಮತ್ತು ರಜತ್ ಪಾಟಿದಾರ್ ತಂಡಕ್ಕೆ ಉತ್ತಮ ಆರಂಭ ನೀಡಿದರು. ಇವರಿಬ್ಬರೂ ಎರಡನೇ ವಿಕೆಟ್ ಗೆ 105 ರನ್ ಕಲೆ ಹಾಕಿದರು. ರಜತ್ ಪಾಟಿದಾರ್ 48 ರನ್ ಗಳಿಸಿ ಔಟಾಗುವ ಮೂಲಕ ಅರ್ಧಶತಕ ವಂಚಿತರಾದರು.
Match 54. 19.6: Fazalhaq Farooqi to Dinesh Karthik 4 runs, Royal Challengers Bangalore 192/3 https://t.co/tEzGa5T0Do #SRHvRCB #TATAIPL #IPL2022
— IndianPremierLeague (@IPL) May 8, 2022
ಇನ್ನು ಗ್ಲೆನ್ ಮ್ಯಾಕ್ಸ್ ವೆಲ್ 33 ರನ್ ಗಳಿಸಿ ಔಟಾದರು. ಇನಿಂಗ್ಸ್ ಕೊನೆಯಲ್ಲಿ ಸ್ಫೋಟಕ ಆಟವಾಡಿದ ದಿನೇಶ್ ಕಾರ್ತಿಕ್ ಕೇವಲ 8 ಬಾಲ್ ಗಳಲ್ಲಿ 30 ರನ್ ಗಳಿಸಿದರು. ಇನ್ನು ಫಾಫ್ ಡುಪ್ಲೆಸಿಸ್ 73 ರನ್ ಗಳಿಸಿ ಅಜೇಯರಾಗುಳಿದರು. ಅಂತಿಮವಾಗಿ ಆರ್ ಸಿ ಬಿ ತಂಡ 20 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 192 ರನ್ ಗಳಿಸಿತು.
ಇನ್ನು ಸನ್ ರೈಸರ್ಸ್ ಹೈದರಾಬಾದ್ ತಂಡದ ಪರ ಕನ್ನಡಿಗ ಜಗದೀಶ ಸುಚಿತ್ 30 ರನ್ ನೀಡಿ 2 ವಿಕೆಟ್ ಪಡೆದರು.
6.6.6.4 – DK, you beauty! #TATAIPL #SRHvRCB pic.twitter.com/PY8HhYa3Zg
— IndianPremierLeague (@IPL) May 8, 2022