ಬೆಂಗಳೂರು : ರೌಡಿ ಶೀಟರ್ ಸೈಲೆಂಟ್ ಸುನೀಲನ ಬಿಜೆಪಿ ಸೇರ್ಪಡೆಗೆ ವಿರೋಧ ವ್ಯಕ್ತವಾಗಿತ್ತು. ನಾಯಕರು ಸೈಲೆಂಟ್ ಕೇಸರಿ ಎಂಟ್ರಿಗೆ ಬ್ರೇಕ್ ಹಾಕಿದ್ಧಾರೆ. ಸಿಎಂ ಬೊಮ್ಮಾಯಿ, ಅಧ್ಯಕ್ಷ ಕಟೀಲ್ ಎಂಟ್ರಿ ಡೋರ್ ಬಂದ್ ಮಾಡಿದ್ಧಾರೆ. ರೌಡಿ ಶೀಟರ್ ಸೈಲೆಂಟ್ ಸುನೀಲ ಲಾಕ್ ಆಗ್ತಾನಾ..? ವಶಕ್ಕೆ ಪಡೆದು ವಿಚಾರಣೆ ಮಾಡ್ತಾರಾ ಸಿಸಿಬಿ ಪೊಲೀಸರು..?
ರೌಡಿ ಶೀಟರ್ ಸೈಲೆಂಟ್ ಸುನೀಲ ಬಿಜೆಪಿ ಸೇರಲು ಸಜ್ಜಾಗಿದ್ದನು. ಆ್ಯಕ್ಟೀವ್ ರೌಡಿಗಳ ಮೇಲಿನ ರೇಡ್ ವೇಳೆ ಮನೆಯಲ್ಲಿ ಇರಲಿಲ್ಲ. ಆನಂತರ ಬಿಜೆಪಿ ಮುಖಂಡರ ಜತೆ ಸೈಲೆಂಟ್ ವೇದಿಕೆ ಹಂಚಿಕೊಂಡಿದ್ದ,ಸೈಲೆಂಟ್ ಸುನಿಲ್‌ಗೆ ಬಿಜೆಪಿ ಸೇರ್ಪಡೆಗೆ ಅವಕಾಶವಿಲ್ಲ , ಸುನಿಲ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದವರಿಂದ ಮಾಹಿತಿ ಕೇಳಿದ್ದೇನೆ. ಅಪರಾಧ ಹಿನ್ನೆಲೆ ಉಳ್ಳವರನ್ನು ಪಕ್ಷ ಸಹಿಸಲ್ಲ ಎಂದು ಕಟೀಲ್ ಮಾಧ್ಯಮ ಪ್ರಕಟಣೆ ಹೊರಡಿಸಿದ್ಧಾರೆ. ಸಿಎಂ ಟ್ವೀಟ್ ಮಾಡಿ ಸುನೀಲನನ್ನು ಬಿಜೆಪಿಗೆ ಸೇರಿಸಿಕೊಳ್ಳಲ್ಲ ಎಂದಿದ್ಧಾರೆ.
ಇದನ್ನೂ ಓದಿ : ಏನಾದರೂ ತರಲೆ- ತಂಟೆ, ಶಾಂತಿ ಭಂಗ ಮಾಡಿದ್ರೆ ತಕ್ಕ ಪಾಠ ಕಲಿಸುತ್ತೇವೆ …ಗಡಿಯಲ್ಲಿ ಗಲಾಟೆ ಮಾಡುವವರಿಗೆ ADGP ಅಲೋಕ್ ವಾರ್ನಿಂಗ್…